ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್!
Team Udayavani, Jun 5, 2020, 8:20 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಇಸ್ಲಾಮಾಬಾದ್: ಒಬ್ಬರನ್ನೊಬ್ಬರು ಕಂಡರಾಗದಷ್ಟು ದ್ವೇಷಿಸುತ್ತಿರುವ ಭಾರತ ಮತ್ತು ಪಾಕಿಸ್ಥಾನ ಈಗ ಒಂದು ವಿಚಾರದಲ್ಲಿ ಶತ್ರುತ್ವ ಮರೆತು ಕೈಜೋಡಿಸಲು ಮುಂದಾಗಿವೆಯಂತೆ! ಇದನ್ನು ಪಾಕಿಸ್ತಾನದ ಪತ್ರಿಕೆ ‘ಡಾನ್’ ವರದಿ ಮಾಡಿದೆ.
ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಭಾರತ ಮತ್ತು ಪಾಕ್ ಮಿಡತೆ ಹಾವಳಿಗೆ ತುತ್ತಾಗಿದ್ದವು. ಸಂಪೂರ್ಣ ಬೆಳೆಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸಿದ್ದವು. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ಅಡಿಯಲ್ಲಿ ಸ್ಥಾಪಿತವಾದ ವೇದಿಕೆಯಲ್ಲಿ ಮಿಡತೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ವರದಿ ಹೇಳಿದೆ.
ಈ ವೇದಿಕೆಯಲ್ಲಿ ಭಾರತ, ಪಾಕಿಸ್ಥಾನ, ಇರಾನ್, ಆಫ್ಘಾನಿಸ್ಥಾನಗಳು ಸದಸ್ಯ ರಾಷ್ಟ್ರಗಳಾಗಿವೆ. ಮಿಡತೆಗಳ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳುವುದು ಸೇರಿದಂತೆ ಅವುಗಳ ನಿಯಂತ್ರಣಕ್ಕೆ ಮಾಡಬಹುದಾದ ಕೆಲಸಗಳ ಕುರಿತು ನಾವು ಮಾಹಿತಿಯನ್ನು ಭಾರತವೂ ಸೇರಿದಂತೆ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಿದ್ದೇವೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಈ ಮರುಭೂಮಿಯ ಮಿಡತೆಗಳು, ಸಸ್ಯ, ಮರಗಳ ಎಲೆಗಳು, ಹೂವುಗಳು, ಹಣ್ಣುಗಳು, ಬೀಜಗಳು, ಬೆಳೆಗಳನ್ನು ತಿನ್ನುತ್ತವೆ. ಇವುಗಳ ಸಮೂಹದಲ್ಲಿ ಕೋಟ್ಯಂತರ ಮಿಡತೆಗಳಿದ್ದು, ಒಂದು ಬಾರಿ ದಾಳಿ ಮಾಡಿದರೆ 10 ಆನೆಗಳು, 25 ಒಂಟೆಗಳು ಅಥವಾ 2500 ಮಂದಿ ದಿನ್ನುವಷ್ಟು ಆಹಾರವನ್ನು ಕಬಳಿಸುತ್ತವೆ. ಇವುಗಳಿಂದಾಗುವ ಕೃಷಿ ಹಾನಿ ಯಾವುದೇ ಅಂದಾಜುಗಳನ್ನು ಮೀರಿದ್ದು ಎಂದು ಪಾಕ್‌ನ ತಜ್ಞರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.