ಉಡುಪಿ: ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದರೂ ಪೇಟೆಯಲ್ಲಿ ಓಡಾಟ
Team Udayavani, Jun 6, 2020, 3:54 PM IST
ಉಡುಪಿ: ಕೈಗೆ ಕ್ವಾರೆಂಟೈನ್ ಸೀಲ್ ಹಾಕಿದ್ದರೂ, ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುತ್ತ ಆತಂಕ ಸೃಷ್ಟಿಸಿದ ಇಬ್ಬರನ್ನು ಪೊಲೀಸರು ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ವಶಕ್ಕೆ ಪಡೆದು ಕ್ವಾರೆಂಟನ್ ಕೇಂದ್ರದಲ್ಲಿ ದಾಖಲಿಸಿದ ಘಟನೆ ಶನಿವಾರ ನಡೆದಿದೆ.
ಒಬ್ಬರು ಕೇರಳದ ಮಠವೊಂದರ ಸ್ವಾಮೀಜಿಗಳು ಎಂದು ತಿಳಿದು ಬಂದಿದ್ದು, ಇವರು ಕೇರಳದಿಂದ ಮಂಗಳೂರು ಮೂಲಕ ಉಡುಪಿಗೆ ಬಸ್ಸಿನಲ್ಲಿ ಆಗಮಿಸಿದ್ದರು. ಇವರ ಕೈಗೆ ಕ್ವಾರೆಂಟನ್ ಮುದ್ರೆ ಹಾಕಿರುವುದು ಕಂಡು ಬಂದಿದೆ.
ಮತ್ತೋರ್ವ ಶಿವಮೊಗ್ಗ ಮೂಲದ ಮಹಿಳೆಯಾಗಿದ್ದು, ವಾರಣಾಸಿಯಿಂದ ರೈಲು ಮೂಲಕ ಮಂಗಳೂರಿಗೆ ಆಗಮಿಸಿ, ಮಂಗಳೂರಿನಿಂದ ಊರಿಗೆ ತೆರಳಲೆಂದು ಉಡುಪಿಗೆ ಆಗಮಿಸಿದ್ದರು. ಇವರಿಗೂ ಕ್ವಾರೆಂಟನ್ ಮುದ್ರೆ ಹಾಕಲಾಗಿದೆ.
ಎರಡು ಪ್ರಯಾಣಿಕರು ಹೊರ ರಾಜ್ಯದಿಂದ ಜಿಲ್ಲೆಗೆ ಪ್ರವೇಶ ಪಡೆದವರಾಗಿದ್ದರು. ಉಡುಪಿ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಇವರಿರ್ವರು ಸಂಚಾರದಲ್ಲಿದ್ದಾಗ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಚರಣೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕಾರ ನೀಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಕಾರ್ಯಚರಣೆಗೆ ಉಚಿತ ಅಂಬಲೇನ್ಸ್ ಸೇವೆ ಒದಗಿಸಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.