ಮಹಾರಾಷ್ಟ್ರದಲ್ಲಿ ಈವರೆಗೆ9.47 ಲಕ್ಷ ಮಂದಿಗೆ ಮದ್ಯ ಹೋಂ ಡೆಲಿವರಿ
Team Udayavani, Jun 7, 2020, 7:57 AM IST
ಮುಂಬಯಿ, ಜೂ. 6: ಲಾಕ್‌ಡೌನ್ ಸಂದರ್ಭ ಮೇ 15ರಿಂದ ಮಹಾರಾಷ್ಟ್ರಾದ್ಯಂತ 9 ಲಕ್ಷಕ್ಕೂ ಅಧಿಕ ಮಂದಿ ಹೋಂ ಡೆಲಿವರಿ ಆರ್ಡರ್ಗಳನ್ನು ಮಾಡಿದ್ದಾರೆ ಎಂದು ರಾಜ್ಯ ಅಬಕಾರಿ ಆಯುಕ್ತ ಕಾಂತಿಲಾಲ್ ಉಮಾಪ್ ಶುಕ್ರವಾರ ತಿಳಿಸಿದ್ದಾರೆ.
ಶುಕ್ರವಾರದಂದು ಮದ್ಯ ಪೂರೈಕೆಗೆ 59,498 ಮಂದಿ ಆರ್ಡರ್ ಮಾಡಿದ್ದು, ಈ ಪೈಕಿ 34,004 ಮಂದಿ ಮುಂಬಯಿಯವರಾಗಿದ್ದಾರೆ ಎಂದು ಉಮಾಪ್ ಮಾಹಿತಿ ನೀಡಿದ್ದಾರೆ. ಮೇ 15 ಮತ್ತು ಜೂ. 5ರ ನಡುವೆ ಒಟ್ಟು 9,47,859 ಜನರು ಮದ್ಯದ ಮನೆ ವಿತರಣಾ ಸೇವೆಯನ್ನು ಪಡೆದಿದ್ದಾರೆ. 1,20,547 ಜನರು ಆನ್‌ಲೈನ್‌ನಲ್ಲಿ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 1,10,763 ಅರ್ಜಿಗಳನ್ನು ಅನುಮೋದಿಸಲಾಗಿದೆ. ಅಬಕಾರಿ ಇಲಾಖೆ ಕಚೇರಿಗಳಲ್ಲಿಯೂ ಆಫ್ಲೈನ್ ಪರವಾನಿಗೆಗಳು ಲಭ್ಯವಿದ್ದು, ಒಂದು ವರ್ಷಕ್ಕೆ 100 ರೂ. ಮತ್ತು ಜೀವಮಾನದ ಪರವಾನಿಗೆ 1,000 ರೂ. ಆಗಿದೆ ಎಂದವರು ತಿಳಿಸಿದ್ದಾರೆ.
ಜೂ. 5ರಂದು ನಾವು ಮದ್ಯ ಕಳ್ಳಸಾಗಣೆಗಾಗಿ 77 ಪ್ರಕರಣಗಳನ್ನು ದಾಖಲಿಸಿದ್ದು 43 ಮಂದಿಯನ್ನು ಬಂಧಿಸಿದ್ದೇವೆ ಮತ್ತು 9.6 ಲಕ್ಷ ರೂ. ಮೌಲ್ಯದ ಅಕ್ರಮ ಸಂಗ್ರಹವನ್ನು ವಶಪಡಿಸಿಕೊಂಡಿದ್ದೇವೆ ಎಂದು ಉಮಾಪ್ ಹೇಳಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ಅನಂತರ ಈವರೆಗೆ 7,225 ಪ್ರಕರಣಗಳನ್ನು ದಾಖಲಾಗಿದ್ದು, 3,344 ಜನರನ್ನು ಬಂಧಿಸಲಾಗಿದೆ. ಅದೇ 622 ವಾಹನಗಳನ್ನು ಜಪ್ತಿ ಮಾಡಿ, 18.67 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.