ದ.ಕ.-ಕಾಸರಗೋಡು ಸಂಚಾರ: 2 ತಾಸಿನೊಳಗೆ ಪಾಸ್
Team Udayavani, Jun 7, 2020, 9:49 AM IST
ಮಂಗಳೂರು: ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗ, ಶಿಕ್ಷಣ ಮೊದಲಾದ ಅಗತ್ಯ ಕೆಲಸಗಳಿಗಾಗಿ ಆಗಮಿಸುವವರ ದೈನಂದಿನ ಓಡಾಟ ಕ್ಕಾಗಿ ಪಾಸ್ ವಿತರಿಸಲಾಗುತ್ತಿದ್ದು, ಕಳೆದೆರಡು ದಿನ ಗಳಲ್ಲಿ 150 ಪಾಸ್‌ಗಳು ವಿತರಣೆಯಾಗಿವೆ.
ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲು 3,000 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ 850 ಅರ್ಜಿ ವಿಲೇವಾರಿ ಮಾಡಲಾಗಿದೆ. ಅರ್ಜಿ ಸಲ್ಲಿಕೆಯಾದ 2 ಗಂಟೆಯೊಳಗೆ ಪಾಸ್ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ಉಪವಿಭಾಗಾಧಿ ಕಾರಿ ಮದನ್ ಮೋಹನ್ ತಿಳಿಸಿದ್ದಾರೆ.
ಗೊಂದಲ ಬೇಡ
ಉದ್ದೇಶಪೂರ್ವಕ ಯಾರಿಗೂ ಪಾಸ್ ನಿರಾಕರಿಸುತ್ತಿಲ್ಲ. ಇದು ಎರಡು ಜಿಲ್ಲೆಗಳ ನಡುವಿನ ಸಂಚಾರ ಮಾತ್ರವಲ್ಲದೆ, ಎರಡು ರಾಜ್ಯಗಳ ನಡುವಿನ ಸಂಚಾರವಾಗಿದೆ. ಹಾಗಾಗಿ ಹೆಚ್ಚಿನ ಮುಂಜಾಗರೂಕತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಅರ್ಜಿ ಸಲ್ಲಿಸುವಾಗ ವಿಳಾಸ ದೃಢೀಕರಿಸುವ ಆಧಾರ್ ಅಥವಾ ಇತರ ಗುರುತುಪತ್ರ ಸಲ್ಲಿಸದಿರುವುದರಿಂದ ಪಾಸ್ ನಿರಾಕರಣೆ ಯಾಗಿದೆ. ಕಟ್ಟಡ ಕೆಲಸಗಳಿಗೆ ಬರುವವರು ನಿರ್ಮಾಣ ಸಂಸ್ಥೆ ಅಥವಾ ಕೆಲಸ ಮಾಡಿಸುತ್ತಿ ರುವವರಿಂದ ಅಧಿಕೃತ ಪತ್ರವನ್ನು ಅಪ್‌ಲೋಡ್ ಮಾಡಬೇಕು. ಕೆಲವು ಮಂದಿ ಅವರ ದಾಖಲೆಗಳಲ್ಲಿ ಮಂಗಳೂರಿನ ವಿಳಾಸವನ್ನು ನೀಡಿದ್ದಾರೆ. ಹಾಗಾಗಿ ತಿರಸ್ಕೃತಗೊಂಡಿದೆ ಎಂದು ಮದನ್ ಮೋಹನ್ ಅವರು ತಿಳಿಸಿದ್ದಾರೆ.
ಜೂ. 30ರ ವರೆಗೆ ಅವಧಿ
ಪಾಸ್ ನೀಡುತ್ತಿರುವುದು ವೃತ್ತಿ ಸಂಬಂದ ಸಂಚಾರಕ್ಕಾಗಿ. ಅದರ ಅವಧಿ ಜೂ. 30ರ ವರೆಗೆ ಇರುತ್ತದೆ. ಒಂದು ವೇಳೆ ಸಂಬಂಧಿಕರ ಮನೆಗೆ ಬಂದು ನಿಲ್ಲುವುದಾದರೆ ಅಥವ ದ.ಕ. ಜಿಲ್ಲೆಯಿಂದ ಸದ್ಯಕ್ಕೆ ವಾಪಸ್ ಹೋಗುವುದಿಲ್ಲವೆಂದಾದರೆ ಸೇವಾ ಸಿಂಧು ಆ್ಯಪ್ ಮೂಲಕ ಪಾಸ್ ಪಡೆಯಬೇಕು. ಅವರಿಗೆ ಹೋಂ ಕ್ವಾರಂಟೈನ್ ಇರುತ್ತದೆ. ನಾವು ನೀಡುವ ದೈನಂದಿನ ಪಾಸ್ ಪಡೆದು ಬರುವವರಿಗೆ ಸಾಂಸ್ಥಿಕ ಅಥವಾ ಹೋಂ ಕ್ವಾರಂಟೈನ್ ಇರುವುದಿಲ್ಲ. ಪಾಸ್‌ನಲ್ಲಿ ಬಾರ್‌ಕೋಡ್ ಇರುವುದರಿಂದ ಪಾಸ್ ಪಡೆದವರು ಜಿಲ್ಲೆ ಯಿಂದ ವಾಪಸಾಗಿದ್ದಾರೆಯೇ ಅಥವಾ ಉಳಿದುಕೊಂಡಿದ್ದಾರೆಯೇ ಎಂಬ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಸರಗೋಡು ಬಿಜೆಪಿ ಆರೋಪ
ಕರ್ನಾಟಕ ಸರಕಾರ ರಾಜ್ಯ ಪ್ರವೇಶಕ್ಕೆ ಅನುಮತಿಸಿದರೂ ದ.ಕ. ಜಿಲ್ಲಾಡಳಿತ ಕಾಸರ ಗೋಡಿ ನವರಿಗೆ ಪಾಸ್ ನಿರಾಕರಿಸುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅವರು ಇದೇ ವೇಳೆ ಅರೋಪಿಸಿದ್ದಾರೆ.
ಒಂದೇ ಜಿಲ್ಲೆಯ ಪಾಸ್ ಸಾಕು
ಯಾವ ಜಿಲ್ಲೆಗೆ ತೆರಳುತ್ತಾರೋ ಆ ಜಿಲ್ಲೆಯ ಆಡಳಿತದ ಅನುಮತಿ ಪಡೆದರೆ ಸಾಕು. ಕಾಸರಗೋಡಿನಿಂದ ದ.ಕ.ಕ್ಕೆ ಬಂದು ಕಾಸರಗೋಡಿಗೆ ವಾಪಸಾಗುವವರು ದ.ಕ.ಜಿಲ್ಲೆಯ ಹಾಗೂ ದ.ಕದಿಂದ ಕಾಸರಗೋಡಿಗೆ ತೆರಳಿ ದ.ಕ. ಜಿಲ್ಲೆಗೆ ವಾಪಸಾಗುವವರು ಕಾಸರಗೋಡು ಜಿಲ್ಲೆಯ ಆಡಳಿತದಿಂದ ಪಾಸ್ ಪಡೆದರೆ ಸಾಕು ಎಂದು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.