ಬಸವೇಶ್ವರ ಆಸ್ಪತ್ರೆ ಆಯಾಗಳಿಗೆ ಆಹಾರ ಕಿಟ್ ವಿತರಣೆ
Team Udayavani, Jun 7, 2020, 10:37 AM IST
ಕಲಬುರಗಿ: ಇಲ್ಲಿನ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿನ ಆಯಾಗಳಿಗೆ ಹಾಗೂ ಸ್ವಚ್ಛತಾ ಕರ್ಮಿಗಳಿಗೆ ಆರ್ಟ್ ಆಫ್ ಲಿವಿಂಗ್‌ದ ಜ್ಞಾನ ಕ್ಷೇತ್ರದ ಸಹಯೋಗದಲ್ಲಿ ಉದಯಗಿರಿ ಇಂಡಸ್ಟ್ರೀಜ್ ನ ಉದಯ ನವಣಿ ಅವರು ಕೊಡ ಮಾಡಿದ ಕಿಟ್‌ಗಳನ್ನು ವಿತರಿಸಲಾಯಿತು.
ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಸಾಂಕೇತಿಕವಾಗಿ ಚಾಲನೆ ನೀಡಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ರವಿಶಂಕರ ಗುರೂಜಿ, ಚಿರಾಗ ಗುರೂಜಿ ಕಿಟ್‌ಗಳನ್ನು ಹಸ್ತಾಂತರಿಸಿದರು. ಒಟ್ಟಾರೆ 250 ಆಯಾಗಳು, ಸ್ವಚ್ಛತಾ ಕರ್ಮಿಗಳಿಗೆ ಕಿಟ್ ವಿತರಿಸಿ ಆರೋಗ್ಯ ಸೇವೆಯಲ್ಲಿನ ಅನುಪಮ ಸೇವೆಯನ್ನು ಗುಣಗಾನ ಮಾಡಲಾಯಿತು. ಬಸವೇಶ್ವರ ಆಸ್ಪತ್ರೆಯ ಡೀನ್ ಡಾ. ಉಮೇಶ್ಚಂದ್ರ, ವೈದ್ಯಕೀಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ ತೆಗನೂರ, ಸಹಾಯಕ ಅಧೀಕ್ಷಕ ಡಾ. ಮಲ್ಲಿಕಾರ್ಜುನ ಪೂಜಾರಿ, ಹಿರಿಯ ವೈದ್ಯ ಡಾ.ಶರಣಗೌಡ ಪಾಟೀಲ್, ಉದಯಗಿರಿ ಇಂಡಸ್ಟ್ರೀಜ್‌ನ ಮಾಲೀಕರಾದ ಉದಯ ಬಾಲಚಂದ್ರ ನವಣಿ, ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್, ಸಮಾಜ ಸೇವಕ ಉಮೇಶ ಶೆಟ್ಟಿ, ದತ್ತಾತ್ರೇಯ ಚುಂಚೂರ ಸೇರಿದಂತೆ ಮುಂತಾದವರಿದ್ದರು.
ರವಿಶಂಕರ ಗುರೂಜಿ ಆಶೀರ್ವಾದಿಂದ ಉದಯ ನವಣಿ ಅವರು ಕೊಡ ಮಾಡಿದ ತಿಂಗಳಿನ ಕಿಟ್‌ನ್ನು ಆರೋಗ್ಯ ಸೇವೆಯಲ್ಲಿ ಅನನ್ಯ ಪಾತ್ರ ನಿರ್ವಹಿಸುತ್ತಿರುವ ಆಯಾಗಳಿಗೆ ನೀಡುತ್ತಿರುವುದು ಮನಸ್ಸಿಗೆ ಸಂತಸ ತಂದಿದೆ.
ಶರಣು ಗುರೂಜಿ, ರವಿಶಂಕರ
ಗೂರೂಜಿ ಜ್ಞಾನಕ್ಷೇತ್ರ, ಕಲಬುರಗಿ
ರವಿಶಂಕರ ಗೂರೂಜಿ ಆಶ್ರಮದ ಆಶೀರ್ವಾದದಿಂದ ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ನೀಡಲಾಗಿದೆ. ಜತೆಗೆ ತಮ್ಮ ಸೇವೆಯನ್ನು ಕೊಂಡಾಂಡಿರುವುದು ಖುಷಿ ತಂದಿದೆ.
ಶರಣಮ್ಮ, ಆಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.