ಪುಟ್ಟ ಮಗುವಿನ ಮುಖ ನೋಡುವ ಮೊದಲೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ
ಚಿರು, ಮೇಘನಾ ದಂಪತಿ ಸಂತಸದಿಂದ ಇದ್ದಿದ್ದು, ಈ ಹಂತದಲ್ಲಿಯೇ ಚಿರಂಜೀವಿ ಅಕಾಲಿಕ ಸಾವನ್ನಪ್ಪಿರುವುದು ಒಂದು ಆಘಾತ
Team Udayavani, Jun 7, 2020, 6:12 PM IST
ಬೆಂಗಳೂರು:ಕನ್ನಡ ಚಿತ್ರರಂಗದ ಯುವ ಪ್ರತಿಭಾವಂತ ನಾಯಕ ನಟ ಚಿರಂಜೀವಿ ಸರ್ಜಾ (39ವರ್ಷ) ವೃತ್ತಿರಂಗದ ಉತ್ತುಂಗಕ್ಕೇರುವ ಹಂತದಲ್ಲಿರುವಾಗಲೇ ಇಹಲೋಕ ತ್ಯಜಿಸಿದ್ದು ಒಂದೆಡೆಯಾದರೆ, ಸರ್ಜಾ ಮತ್ತು ನಟಿ ಮೇಘನಾ ರಾಜ್ ದಾಂಪತ್ಯಕ್ಕೆ ಎರಡು ವರ್ಷ ಕಳೆದಿದೆ. ವಿಧಿ ಅದೆಷ್ಟು ಕ್ರೂರಿ ಎಂದರೆ ಮುದ್ದು ಮಗುವಿನ ಮುಖ ನೋಡುವ ಮುನ್ನ ಚಿರಂಜೀವಿ ಇಹಲೋಕ ತ್ಯಜಿಸಿದ್ದಾರೆ.
ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬ ಬಹಳ ಅದ್ದೂರಿಯಾಗಿ 2018ರ ಮೇ 29ರಂದು ಏರ್ಪಡಿಸಿದ್ದ ವಿವಾಹ ಸಮಾರಂಭದಲ್ಲಿ ಚಿರಂಜೀವಿ ಹಾಗೂ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಚಿರು, ಮೇಘನಾ ದಂಪತಿ ಸಂತಸದಿಂದ ಇದ್ದಿದ್ದು, ಈ ಹಂತದಲ್ಲಿಯೇ ಚಿರಂಜೀವಿ ಅಕಾಲಿಕ ಸಾವನ್ನಪ್ಪಿರುವುದು ಒಂದು ಆಘಾತವಾದರೆ, ಮತ್ತೊಂದೆಡೆ ಮೇಘನಾರಾಜ್ ತಾಯಿಯಾಗುತ್ತಿದ್ದಾರೆ. ಮಗುವ ಹುಟ್ಟುವ ಮುನ್ನವೇ ಚಿರು ಕಣ್ಮುಚ್ಚಿರುವುದು ಪತ್ನಿ ಹಾಗೂ ತಂದೆ, ತಾಯಿ, ಸಹೋದರರು, ಕುಟುಂಬ ವರ್ಗಕ್ಕೆ ಭರಿಸಲಾರದ ನೋವನ್ನುಂಟು ಮಾಡಿದೆ.
ಕನ್ನಡದ ನಾಯಕ ನಟ ಚಿರಂಜೀವಿ ಸರ್ಜಾ ಅವರು ಇಂದು ನಗರದ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳಿದಿದ್ದರು.
ಸರ್ಜಾ ಕುಟುಂಬದ ಕುಡಿಯಾಗಿದ್ದ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. 39 ವರ್ಷದ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದಲ್ಲಿ 22 ಚಿತ್ರಗಳಲ್ಲಿ ನಟಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.