ಕಡ್ಡಿ ಆಂಟೆನಾ
Team Udayavani, Jun 8, 2020, 5:05 AM IST
ಒಂದು ಕಾಲದಲ್ಲಿ ಪ್ರತಿ ಹೆಂಚಿನ ಮನೆಯ ಮೇಲೆ ಇಣುಕುತ್ತಿದ್ದಿದ್ದು ಟಿ.ವಿ. ಆಂಟೆನಾಗಳು. ಧ್ವಜಸ್ಥಂಭದಂಥ ಉದ್ದನೆಯ ಕೋಲು. ಅದರ ತುದಿಯಲ್ಲಿ ಕಡ್ಡಿಗಳು. ಆಗ ಮನೆಗಳ ಟಿ.ವಿ.ಯಲ್ಲಿ ಬರುತ್ತಿದ್ದುದು ದೂರದರ್ಶನ ಚಾನೆಲ್ ಮಾತ್ರ. ಚಾನೆಲ್ ಪ್ರಸಾರದಲ್ಲಿ ಒಂಚೂರು ವ್ಯತ್ಯಯವಾದರೂ ಯಾರಾದರೊಬ್ಬರು ಆಂಟೆನಾ ಇರುವ ಜಾಗಕ್ಕೆ ಹೋಗಿ ಕಡ್ಡಿಗಳನ್ನು ತಿರುಗಿಸಬೇಕಾಗಿತ್ತು. ಯಾವುದೋ ಒಂದು ದಿಕ್ಕಿನಲ್ಲಿ ಪ್ರಸರಣ ಸರಿಯಾಗಿ ಬರುತ್ತಿತ್ತು.
ಅಂಟೆನಾ, ಗಾಳಿಯಲ್ಲಿನ ರೇಡಿಯೊ ತರಂಗಗಳನ್ನು ಸೆರೆಹಿಡಿದು, ಅದನ್ನು ವಿದ್ಯುತ್ ತರಂಗಗಳನ್ನಾಗಿ ಪರಿವರ್ತಿಸಿ, ಟಿವಿಗೆ ಇಲ್ಲವೇ ರೇಡಿಯೋಗಳಿಗೆ ಸರಬರಾಜು ಮಾಡುತ್ತಿತ್ತು. ನಂತರದ ದಿನಗಳಲ್ಲಿ ಕೇಬಲ್ ಟಿ.ವಿ. ಬಂದ ನಂತರ ಚಾನೆಲ್ಲುಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಕೇಬಲ್ ಟಿ.ವಿ. ಬಂದ ನಂತರ, ಆಂಟೆನಾಗಳ ಅವಶ್ಯಕತೆ ಕಡಿಮೆಯಾಗತೊಡಗಿತು. ಕಡೆಗೆ ಇಲ್ಲವೇ ಇಲ್ಲ ಎನ್ನುವಷ್ಟರಮಟ್ಟಿಗೆ ಕಳೆದುಹೋಯಿತು. ಇಂದು ಕಡ್ಡಿ ಆಂಟೆನಾಗಳ ಜಾಗವನ್ನು ಡಿಶ್ ಆಂಟೆನಾಗಳು ಆಕ್ರಮಿಸಿಕೊಂಡಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.