ಹೆಲ್ತ್ ಈಸ್ ವೆಲ್ತ್!
ಆರೋಗ್ಯ ವಿಮೆ ಕೊಳ್ಳುವ ಮುನ್ನ ತಿಳಿಯಬೇಕಾದ ಸಂಗತಿಗಳು
Team Udayavani, Jun 8, 2020, 5:20 AM IST
ಇಂದಿನ ಸಂದರ್ಭದಲ್ಲಿ ಮೆಡಿಕಲ್ ಖರ್ಚು ಹಿಂದೆಂದಿಗಿಂತ ಹೆಚ್ಚುತ್ತಿದೆ. ಇದರಿಂದಾಗಿ, ಹೆಲ್ತ್ ಇನ್ಷೊರೆನ್ಸ್ ಮೊರೆ ಹೋಗುತ್ತಿರುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಪಾಲಿಸಿಗಳು ಲಭ್ಯ ಇವೆ. ಆದರೆ, ಅವು ನೀಡುವ ಸವಲತ್ತುಗಳು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯೇ ಹೆಚ್ಚು. ಎಲ್ಲಾ ಪಾಲಿಸಿಗಳ ವಿವರಗಳು ಆನ್‌ಲೈನಿನಲ್ಲಿ ಸಿಗುತ್ತವೆ. ಕೂತಲ್ಲೇ ವಿಮೆಯ ಪಾಲಿಸಿಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಆದರೆ, ಯಾವುದೇ ಬಗೆಯ ವಿಮೆಯ ಕುರಿತು, ಸಂಸ್ಥೆಯ ಪ್ರತಿನಿಧಿ ಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಕಂಫರ್ಟೆಬಲ್ ಎನ್ನಿಸುತ್ತದೆ. ವಿಮೆ ಕೊಳ್ಳುವ ಮುನ್ನ, ಅದನ್ನು ಕುರಿತು ತಿಳಿಯಬೇಕಾದ ನಾಲ್ಕು ಸಂಗತಿಗಳು ಇಲ್ಲಿವೆ.
ಒಳಗೊಂಡಿರುವುದೇನು?: ವಿಮೆ ಕೊಳ್ಳುವಾಗ ಎಲ್ಲರೂ ಪ್ರೀಮಿಯಂ ವಿಷಯಕ್ಕೇ ಮೊದಲ ಪ್ರಾಶಸ್ತ್ಯ ಕೊಡುತ್ತಾರೆ. ಆದರೆ ಆ ಪಾಲಿಸಿ ಏನೆಲ್ಲವನ್ನೂ ಕವರ್ ಮಾಡುತ್ತದೆ ಎಂಬುದರ ಕುರಿತು ತಿಳಿಯುವುದೇ ಮುಖ್ಯವಾಗ ಬೇಕು. ಬೇಸಿಕ್ ಆಸ್ಪತ್ರೆಯ ಖರ್ಚನ್ನು ಕವರ್ ಮಾಡುವ ಪ್ಲ್ಯಾನ್, ಗಂಭೀರ ಕಾಯಿಲೆಯ ಚಿಕಿತ್ಸೆ ಕವರ್ ಮಾಡುವ ಪ್ಲ್ಯಾನ್… ಹೀಗೆ ಹಲವು ವಿಚಾರಗಳ ಕುರಿತು ಮಾಹಿತಿ ತಿಳಿದುಕೊಳ್ಳಬೇಕಾ ಗುತ್ತದೆ. ಹೀಗೆ ಮಾಡುವುದರಿಂದ ಗ್ರಾಹಕರಿಗೆ ವಿಮೆ ಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಅನುಕೂಲವಾಗುತ್ತದೆ. ಗಂಭೀರ ಕಾಯಿಲೆ ಯನ್ನು ಕವರ್ ಮಾಡುವ ಪಾಲಿಸಿಯಾದರೆ, ಎಷ್ಟು ಬಗೆಯ ಕಾಯಿಲೆಗಳನ್ನು ಕವರ್ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು. ಕೆಲ ಪಾಲಿಸಿಗಳು ಸುಮಾರು 37 ಕಾಯಿಲೆಗಳನ್ನು ಕವರ್ ಮಾಡುತ್ತವೆ.
ಹೊರಗುಳಿಯುವುದೇನು?: ಪಾಲಿಸಿ ಏನನ್ನು ಕವರ್ ಮಾಡುತ್ತದೆ ಎಂದು ತಿಳಿಯುವುದು ಮಾತ್ರವಲ್ಲ; ಅದು ಏನನ್ನು ಕವರ್ ಮಾಡುತ್ತಿಲ್ಲ ಎಂದು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ. ಏಕೆಂದರೆ, ನಮಗೆ ಬೇಕಾಗಿರುವ ಸವಲತ್ತನ್ನು ಪಾಲಿಸಿ ಒದಗಿಸದೇ ಇದ್ದ ಪಕ್ಷದಲ್ಲಿ, ಅದನ್ನು ಪಡೆದುಕೊಳ್ಳಲು ಹೆಚ್ಚುವರಿ ಹಣ ಕೊಡಬೇಕಾಗುತ್ತದೆ. ಎಲ್ಲಾ ಪಾಲಿಸಿಗಳೂ ಕೆಲ ಸವಲತ್ತುಗಳನ್ನು ಹೊರಗಿಡುತ್ತವೆ. ಇವನ್ನು ಎಕ್ಸ್‌ಕ್ಲೂಷನ್ಸ್ ಎಂದು ಕರೆಯುತ್ತಾರೆ. ಕೆಲ ಬೇಸಿಕ್ ಆರೋಗ್ಯ ವಿಮೆಗಳನ್ನು, ಕೊಂಡ ದಿನಾಂಕದಿಂದ 1- 2 ತಿಂಗಳ ಅವಧಿಯೊಳಗೆ ಕ್ಲೈಮ್ ಮಾಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ, ಪಾಲಿಸಿಯ ಎಕ್ಸ್‌ಕ್ಲೂಷನ್‌ಗಳು ಏನೇನು ಎಂಬುದನ್ನು, ಏಜೆಂಟರಿಂದ ತಿಳಿದುಕೊಳ್ಳಬೇಕು.
ವೇಯ್ಟಿಂಗ್ ಪಿರಿಯೆಡ್: ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಮೆಗಳಲ್ಲಿ ಹೆಚ್ಚಿನವು, ಹಿಂದಿನಿಂದಲೂ ಇರುವ ಗಂಭೀರ ಕಾಯಿಲೆ ಗಳಿದ್ದರೆ, ಅದನ್ನು ಕವರ್ ಮಾಡುವುದಿಲ್ಲ. ಮಾಡಿದರೂ 3- 4 ವರ್ಷಗಳ ಒಳಗೆ ಆಕ್ಟಿವೇಟ್ ಆಗಿರು ವುದಿಲ್ಲ. ಅಂದರೆ, ನಿಗದಿತ ಅವಧಿಯ ನಂತರವೇ ವಿಮೆಯಿಂದ ರಕ್ಷಣೆ ಸಿಗುತ್ತದೆ. ಇದನ್ನೇ ವೇಯ್ಟಿಂಗ್ ಪಿರಿಯೆಡ್ ಎನ್ನಲಾಗುತ್ತದೆ. ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಕ್ಲೈಮ್ ಮಾಡಲು ಸಾಧ್ಯವಾಗು ವಂಥ ಪಾಲಿಸಿ ಬೇಕಿದ್ದಲ್ಲಿ, ವೇಯ್ಟಿಂಗ್ ಪಿರಿಯೆಡ್ ಕಡಿಮೆಯಿರುವ ಪಾಲಿಸಿಯನ್ನು ಆಯ್ದುಕೊಳ್ಳಬೇಕು. ಆರ್ಥೈಟಿಸ್, ಮೂತ್ರಕೋಶದಲ್ಲಿ ಕಲ್ಲು, ಕ್ಯಾಟರಾಕ್ಟ್ ಮುಂತಾದ ಚಿಕಿತ್ಸೆಗಳಿಗೆ, ಕೆಲ ಪಾಲಿಸಿಗಳು ಮೊದಲ ಒಂದೆರಡು ವರ್ಷಗಳ ಅವಧಿಯಲ್ಲಿ ಕವರ್ ಮಾಡುವುದಿಲ್ಲ. ಹೀಗಾಗಿ ಪಾಲಿಸಿಗಳ ವೇಯ್ಟಿಂಗ್ ಪಿರಿಯೆಡ್ ತಿಳಿದುಕೊಳ್ಳಬೇಕಾಗುತ್ತದೆ.
ಎಕ್ಸ್‌ಟ್ರಾ ಕವರ್: ವಿಮಾ ಸಂಸ್ಥೆಗಳು ಆ್ಯಡ್ ಆನ್ ಸವಲತ್ತನ್ನು ನೀಡುತ್ತವೆ. ಆ್ಯಡ್ ಆನ್ ಎಂದರೆ, ಮೂಲ ಪಾಲಿಸಿಯಲ್ಲಿ ಇಲ್ಲದೇ ಇರುವ ಸವಲತ್ತನ್ನು ಹೆಚ್ಚುವರಿ ಶುಲ್ಕ ತೆತ್ತು ಸೇರಿಸಿಕೊಳ್ಳುವುದು. ಇದಕ್ಕೆ ಹೆಚ್ಚಿನ ಬೆಲೆ ನಿಗದಿಪಡಿಸಿರುತ್ತಾರೆ. ಕೆಲವೊಮ್ಮೆ ಈ ಆ್ಯಡ್ ಆನ್ ಸವಲತ್ತು ಗಳು ಪಾಲಿಸಿಯ ಜೊತೆಗೇ ಬಂದಿರುತ್ತವೆ. ಎಷ್ಟೋ ಸಲ, ತಮ್ಮ ಪಾಲಿಸಿಯಲ್ಲಿ ಆ್ಯಡ್ ಆನ್ ಸವಲತ್ತು ಇರು ವುದು ಗ್ರಾಹಕ ರಿಗೇ ತಿಳಿದಿರುವುದಿಲ್ಲ. ಅವರಿಗೆ ಆ ಸವಲತ್ತು ಬೇಕಾಗಿಯೂ ಇರುವುದಿಲ್ಲ. ಆದರೆ, ಗೊತ್ತಿಲ್ಲದೆಯೇ ಅನವಶ್ಯಕವಾಗಿ ಹೆಚ್ಚಿನ ಬೆಲೆ ತೆತ್ತಿರುತ್ತಾರೆ. ಪಾಲಿಸಿಕೊಳ್ಳುವ ಮುನ್ನ, ಇಂಥ ಯಾವುದೇ ಸವಲತ್ತು ಸೇರಿಕೊಂಡಿಲ್ಲ ಎಂದು ಖಚಿತಪಡಿಸಿಕೊಂಡರೆ ಉತ್ತಮ. ಒಂದುವೇಳೆ ಸೇರಿದ್ದಲ್ಲಿ, ಅದನ್ನು ಬೇಡವೆಂದು ತಿರಸ್ಕರಿಸಬಹುದು. ಆಗ ದುಡ್ಡೂ ಮಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.