ತಾಲೂಕು ಆಸ್ಪತ್ರೆ ಅಭಿವೃದ್ಧಿಗೆ ಕೋಟಿ ರೂ.
Team Udayavani, Jun 8, 2020, 8:07 AM IST
ಕಡೂರು: ಆರೋಗ್ಯ ಸಚಿವ ಶ್ರೀರಾಮುಲು ಅವರಲ್ಲಿ ಕಡೂರು ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳಿಗಾಗಿ ಮನವಿ ನೀಡಲಾಗಿದೆ. ಮನವಿಗೆ ಸ್ಪಂದಿ ಸಿದ ಸಚಿವರು 1 ಕೋಟಿ ರೂ. ಅನುದಾನ ಮಂಜೂರು ಮಾಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಿಂದ ಆರೋಗ್ಯ ಕೇಂದ್ರಕ್ಕೆ ಬೇಕಾದ ಮೂಲಭೂತ ಸೌಕರ್ಯಗಳ ಪಟ್ಟಿ ಸ್ವೀಕರಿಸಿ ಮಾತನಾಡಿದರು. ನೀವು ನೀಡಿರುವ ಬೇಡಿಕೆ ಪಟ್ಟಿಯಲ್ಲಿರುವ ಹಲವು ಬೇಡಿಕೆಗಳು ಈ ಮೊದಲೇ ನನ್ನ ಗಮನಕ್ಕೆ ಬಂದಿವೆ. ಈ ವಿಚಾರವಾಗಿ ನಾನು ಆರೋಗ್ಯ ಸಚಿವರನ್ನು ಭೇಟಿಯಾಗಿ ಪ್ರಸ್ತಾಪಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ 1 ಕೋಟಿ ರೂ. ನೀಡುವ ಬಗ್ಗೆ ಪರಿಶೀಲಿಸಲು ಆರೊಗ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಆ ಹಣ ಬಿಡುಗಡೆ ಆದ ನಂತರ ನಮ್ಮ ತಾಲೂಕು ಆರೋಗ್ಯ ಕೇಂದ್ರವನ್ನು ಸುಸಜ್ಜಿತ ಆಸ್ಪತ್ರೆ ರೀತಿಯಲ್ಲಿ ನವೀಕರಿಸಲಾಗುವುದು ಎಂದು ತಿಳಿಸಿದರು.
ತಾಯಿ-ಮಗು ಆಸ್ಪತ್ರೆಯನ್ನು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಹಳೇ ಎಪಿಎಂಸಿ ಸ್ಥಳದಲ್ಲಿ ಸ್ಥಾಪಿಸುವ ಬಗ್ಗೆಯೂ ಕೆಲವರು ಸಲಹೆ ನೀಡಿದ್ದಾರೆ. ಜಾಗದ ಸಮಸ್ಯೆಯಿಂದ ಈ ಆಸ್ಪತ್ರೆ ಮಂಜೂರಾಗಿ ವಾಪಸ್ ಹೋಗಿದೆ. ಎಲ್ಲಾ ಸಲಹೆಗಳನ್ನು ಪರಿಗಣಿಸಿ ಸದ್ಯದಲ್ಲಿಯೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಈ ಆಸ್ಪತ್ರೆಯ ಕಾಮಗಾರಿಯ ಆರಂಭಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ಹಿಂದಿನ ಆಡಳಿತ ವೈದ್ಯಾಧಿಕಾರಿ ಡಾ| ಉಮೇಶ್ ಅವಧಿಯಲ್ಲಿ ಸಾರ್ವಜನಿಕ ಆಸ್ಪತ್ರೆಯು ಸಾಕಷ್ಟು ಅಭಿವೃದ್ಧಿ ಕಂಡಿದೆ. ತಾವು ಕೂಡ ಮುಕ್ತವಾಗಿ ಅವರ ಕಾರ್ಯಕ್ಕೆ ಬೆಂಬಲಿಸಿದ್ದೆ. ಇದೀಗ ಡಾ| ದೀಪಕ್ ಆಡಳಿತ ವೈದ್ಯಾಧಿಕಾರಿಯಾಗಿದ್ದು, ಮುಂದುವರಿದ ಅಭಿವೃದ್ಧಿ ಕಾಮಗಾರಿಗಳು ಇವರ ಕಾಲಾವ ಧಿಯಲ್ಲಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಡಿ. ದರ್ಜೆ ನೌಕರರ 4 ವಸತಿ ಗೃಹ, ದಾದಿಯರ 5 ವಸತಿ ಗೃಹಗಳಿದ್ದು, ಇನ್ನೂ ಹೆಚ್ಚಿನ ವಸತಿ ಗೃಹಗಳಿಗೆ ಬೇಡಿಕೆ ಇದೆ. ರಕ್ಷಾ ಸಮಿತಿ ಅಧ್ಯಕ್ಷರೂ ಆದ ಶಾಸಕರು ಈ ಕುರಿತು ಗಮನ ಹರಿಸಿ ಹೆಚ್ಚಿನ ವಸತಿ ಗೃಹಗಳನ್ನು ನಿರ್ಮಿಸಿಕೊಡಲು ಇಲಾಖೆ ಸಿಬ್ಬಂದಿ ಕೋರಿದರು. ಸಭೆ ಬಳಿಕ ಶಾಸಕರು ಆಸ್ಪತ್ರೆಯ ವಾರ್ಡ್‌ಗಳು, ಆಪರೇಷನ್ ಕೊಠಡಿ, ಐಸಿಯು ಮತ್ತು ಡಯಾಲಿಸಿಸ್ ಘಟಕ ಸೇರಿದಂತೆ ಪೂರ್ಣ ಆಸ್ಪತ್ರೆಯನ್ನು ವೀಕ್ಷಣೆ ಮಾಡಿದರು.
ತಹಶೀಲ್ದಾರ್ ಜೆ. ಉಮೇಶ್, ಜಿ.ಪಂ. ಸದಸ್ಯ ಕೆ.ಆರ್. ಮಹೇಶ್ ಒಡೆಯರ್, ತಾಲೂಕು ವೈದ್ಯಾಧಿಕಾರಿ ಡಾ| ಸಿ.ಡಿ. ರವಿಕುಮಾರ್, ರಕ್ಷಾ ಸಮಿತಿ ಸದಸ್ಯರಾದ ಡಾ| ಶಿವಕುಮಾರ್, ಡಾ| ದಿನೇಶ್, ಪುಷ್ಪರಾಜ್, ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಮಂಜುನಾಥ್, ಡಾ| ಗುರುಮೂರ್ತಿ, ಡಾ| ಕೆ.ಓ. ಗಂಗಾಧರ್, ಡಾ| ಹರ್ಷಿತ್, ಡಾ| ಎಚ್.ಎಸ್. ಮೋಹನ್, ಪತ್ರಕರ್ತ ಸಿ.ಕೆ. ಮೂರ್ತಿ, ಕಚೇರಿ ಅಧೀಕ್ಷಕ ಜಿ. ಚಂದ್ರೇಗೌಡ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸುರೇಶ್ ಮತ್ತಿತರಿದ್ದರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.