ಮೂವರನ್ನು ಕೊಂದ ಸರಣ್‌ಗೆ ಸೆರೆವಾಸ
ವಸತಿ ಪ್ರದೇಶ ಆಸುಪಾಸಿನಲ್ಲಿಯೇ ತಿರುಗಾಡುತ್ತಿದ್ದ ಗಂಡು ಹುಲಿ
Team Udayavani, Jun 8, 2020, 9:40 AM IST
ಭೋಪಾಲ: ಜೀವನ ಪರ್ಯಂತ ಕಾರಾಗೃಹ ವಾಸ ಶಿಕ್ಷೆಯನ್ನು ಮಾನವರಿಗೆ ವಿಧಿಸಲಾಗುತ್ತದೆ. ಅದೇ ಮಾದರಿಯ “ಶಿಕ್ಷೆ’ಯನ್ನು ಹುಲಿಗೆ ನೀಡಲಾಗಿದೆ. ಇಲ್ಲಿ
ಕೊಂಚ ವ್ಯತ್ಯಾಸ ಉಂಟು. ಯಾವುದೇ ಕೋರ್ಟ್‌ನಿಂದ ತೀರ್ಪು ಪ್ರಕಟವಾದದ್ದು ಅಲ್ಲ. ವಸತಿ ಪ್ರದೇಶದಲ್ಲಿ ಓಡಾಡಿಕೊಂಡು ಮೂವರನ್ನು ಕೊಂದಿದ್ದ “ಸರಣ್’ ಎಂಬ ಗಂಡು ಹುಲಿಯನ್ನು ಭೋಪಾಲದ ವನ್ ವಿಹಾರ್ ರಾಷ್ಟ್ರೀಯ ಉದ್ಯಾನವನದ ಸಣ್ಣ ಬೋನಿನಲ್ಲಿ ಜೀವನ ಪರ್ಯಂತ ಇರಿ ಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.
2018ರಲ್ಲಿ ಮಹಾರಾಷ್ಟ್ರದ ಚಂದಾಪುರದಿಂದ ಮಧ್ಯ ಪ್ರದೇಶದ ಬೇತುಲ್ ನಡುವೆ ಸುಮಾರು 510 ಕಿ.ಮೀ. ವ್ಯಾಪ್ತಿಯಲ್ಲಿ ಈ ಹುಲಿ ಓಡಾಡುತ್ತಿತ್ತು. ಮನುಷ್ಯರ ವಾಸ ಸ್ಥಳಗಳ ಬಳಿಯೇ ವಾಸ್ತವ್ಯ ಹೂಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಐದು ವರ್ಷ ವಯಸ್ಸಿನ, 180 ಕೆ.ಜಿ. ಇರುವ ಈ ಗಂಡು ಹುಲಿ, ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 2018ರಲ್ಲಿ ಇಬ್ಬರನ್ನು ಕೊಂದಿತ್ತು. ಅನಂತರ ಮಧ್ಯಪ್ರದೇಶದತ್ತ ಪಲಾಯನ ಮಾಡಿದ್ದ ಅದು ಬೇತುಲ್ ಬಳಿಯ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಆಗ, ಅರಣ್ಯಾಧಿಕಾರಿಗಳು ಅದನ್ನು ಮೊದಲ ಬಾರಿಗೆ ಹಿಡಿದು, ಸಾತ್ಪುರ ಹುಲಿ ಸಂರಕ್ಷಿತಾರಣ್ಯಕ್ಕೆ ಬಿಟ್ಟಿದ್ದರು. ಆದರೆ, ಆ ಹುಲಿಗೆ ಮನುಷ್ಯರ ವಸತಿಗಳ ಸಮೀಪವೇ ವಾಸಿಸುವ ಚಟ ಬೆಳೆದಿದ್ದರಿಂದ ಅದು ಮತ್ತೆ ಅಲ್ಲಿಂದ ಪಲಾಯನ ಮಾಡಿ, ಬೇತುಲ್‌ನ ಹತ್ತಿರದ ಪ್ರಾಂತ್ಯಗಳಲ್ಲಿ ಓಡಾಡಿಕೊಂಡಿತ್ತು.
2018ರ ಡಿ.18ರಂದು ಆ ಹುಲಿಯನ್ನು ಮಧ್ಯಪ್ರದೇಶದ ಸಾತ್ಪುರ ಹುಲಿ ಅಭಯಾರಣ್ಯದಲ್ಲಿ ಸೆರೆ ಹಿಡಿದು ರಾಜ್ಯದ ಕಾನ್ಹಾ ಹುಲಿ ಸಂರಕ್ಷಿತಾರಣ್ಯದಲ್ಲಿ ಇರಿಸಲಾಗಿತ್ತು. ಅಲ್ಲಿಂದ ಹೊರ ಬಂದ ಸರಣ್, ಪುನಃ ಮಾನವರ ವಸತಿ ಪ್ರದೇಶಗಳ ಬಳಿ ಜೀವಿಸಲಾರಂಭಿಸಿತ್ತು. ಈಗ, ಮತ್ತೆ ಆ ಹುಲಿಯನ್ನು ಹಿಡಿಯಲಾಗಿದೆ. ಸೋಂಕಿನ ಕಾರಣ ಮತ್ತು ಮುಂದಿನ ದಿನಗಳಲ್ಲಿ ಹುಲಿಗೆ ಅಪಾಯವಿದೆ ಎಂದು ಮನಗಂಡ ಅರಣ್ಯಾಧಿಕಾರಿಗಳು ಅದನ್ನು ಮತ್ತೆ ಅರಣ್ಯ ಬಿಡದೆ ಇರಲು ತೀರ್ಮಾನಿಸಿದ್ದಾರೆ.
ಮಹಾರಾಷ್ಟ್ರ- ಮಧ್ಯಪ್ರದೇಶ ಸಂಚಾರ ನಡುವೆ ಮೂವರ ಕೊಂದಿತ್ತು
510 ಕಿಮೀ ವ್ಯಾಪ್ತಿಯಲ್ಲಿ ಇತ್ತು ಅದರ ಯಾನ
2018ರ ಡಿ.18ರಂದು ಸಾತ್ಪುರ ಅಭಯಾರಣ್ಯದಲ್ಲಿ ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.