ಬೆಂಗಳೂರು ನಗರ-ಕಾರವಾರ ರೈಲು ಸಂಚಾರಕ್ಕೆ ನಳಿನ್ ಮನವಿ
Team Udayavani, Jun 8, 2020, 12:18 PM IST
ಮಂಗಳೂರು: ರದ್ದುಪಡಿಸಿರುವ ಬೆಂಗಳೂರು ನಗರ-ಕಾರವಾರ ವಯಾ ಮೈಸೂರು (ರೈಲು .16523/24)ರೈಲು ಸಂಚಾರವನ್ನು ಮರು ಆರಂಭಿಸಬೇಕು ಹಾಗೂ ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ನಂ. 16585)ನ ವೇಳಾಪಟ್ಟಿಯನ್ನು ಮರು ಪರಿಷ್ಕರಿಸಬೇಕು ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನೈಋತ್ವ ರೈಲ್ವೇಯ ಮಹಾಪ್ರಬಂಧಕರನ್ನು ಕೋರಿದ್ದಾರೆ.
ಹೊಸದಾಗಿ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ಆರಂಭಗೊಂಡ ಬಳಿಕ ಬೆಂಗಳೂರು ನಗರ-ಕಾರವಾರ ವಯಾ ಮೈಸೂರು (ನಂ. 16523/24) ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು. ಇದು ಮೈಸೂರು ಭಾಗವನ್ನು ಸಂಪರ್ಕಿಸಲು ಉಡುಪಿ, ಕಾರವಾರ ಭಾಗದ ಜನರಿಗೆ ಏಕಮಾತ್ರ ರೈಲು ಆಗಿತ್ತು. ಇದಲ್ಲದೆ ಮಂಗಳೂರು ಸೆಂಟ್ರಲ್ ಹಾಗೂ ಕಾರವಾರದ ಭಾಗ ಪ್ರಯಾಣಿಕರಿಗೂ ಉಪಯುಕ್ತವಾಗಿತ್ತು. ಈ ಹಿನ್ನಲೆಯಲ್ಲಿ ರದ್ದುಗೊಳಿಸಿರುವ ಅದನ್ನು ಮರು ಆರಂಭಿಸಬೇಕು ಎಂಬುದು ಈ ವಲಯದ ಜನರ ಬೇಡಿಕೆಯಾಗಿದೆ ಎಂದವರು ಮಹಾಪ್ರಬಂಧಕರಿಗೆ ಬರೆದಿರುವ ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ರೈಲು ನಂ.16523/24 ಸಂಚಾರವನ್ನು ಮಡಂಗಾವ್‌ವರೆಗೆ ವಿಸ್ತರಿಸಬಹುದು. ನಂ.16511/12 ಬೆಂಗಳೂರು- ಕಣ್ಣೂರು – ಬೆಂಗಳೂರು ಎಕ್ಸ್‌ಪ್ರೆಸ್ ರದ್ದುಪಡಿಸಿ ಆ ವೇಳಾ ಪಟ್ಟಿಯಲ್ಲಿ ರೈಲು ನಂ. 16585 ಯಶವಂತಪುರ- ಮಂಗಳೂರು ಸೆಂಟ್ರಲ್ ರೈಲನ್ನು ಓಡಿಸಬಹುದಾಗಿದೆ. ಬೆಂಗಳೂರಿನಿಂದ ರಾತ್ರಿ 7.45ಕ್ಕೆ ಹೊರಟು ಬೆಳಗ್ಗೆ 5.55ಕ್ಕೆ ವೇಳಾಪಟ್ಟಿಯನ್ನು ರೂಪಿಸಬಹುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.