ಗಡಿ ರಸ್ತೆಗೆ ಝಾರ್ಖಂಡ್ ಕಾರ್ಮಿಕರು!
ಚೀನ ಜತೆಗಿನ ಗುದ್ದಾಟದ ನಡುವೆ ಸದೃಢ ರಸ್ತೆ ನಿರ್ಮಾಣ
Team Udayavani, Jun 9, 2020, 6:15 AM IST
ರಾಂಚಿ: ಚೀನವು ಶಾಂತಿ ಸಂಧಾನಕ್ಕೆ ಒಪ್ಪಿಕೊಂಡರೂ ಭಾರತ ಅದನ್ನು ಸಂಪೂರ್ಣವಾಗಿ ನಂಬುತ್ತಿಲ್ಲ. ಲಡಾಖನ್ನು ಬಲಿಷ್ಠಗೊಳಿಸುವ ಹೊಣೆಯನ್ನು ಝಾರ್ಖಂಡ್‌ನ 8 ಸಾವಿರ ಕಾರ್ಮಿಕರಿಗೆ ವಹಿಸಿದೆ. ಈ ಕಟ್ಟಾಳುಗಳು ಅಲ್ಲಿ ಸದೃಢ ರಸ್ತೆಗಳನ್ನು ನಿರ್ಮಿಸಲಿದ್ದಾರೆ.
ಕಾರ್ಮಿಕರನ್ನು ಕಳುಹಿಸಿಕೊಡುವಂತೆ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಇತ್ತೀಚೆಗಷ್ಟೇ ಝಾರ್ಖಂಡ್ ಸರಕಾರ ವನ್ನು ಕೇಳಿಕೊಂಡಿತ್ತು. ಅಲ್ಲಿನ ಸಿಎಂ ಹೇಮಂತ್ ಸೊರೇನ್ ಇದಕ್ಕೆ ಸಮ್ಮತಿಸಿದ್ದಾರೆ. ಚೀನ ಗಡಿಯಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಿ ಯಶಸ್ವಿಯಾಗಿದ್ದ ಬಿಆರ್‌ಒ ಈಗ “ಆಪರೇಷನ್ ವಿಜಯಕ್’ ಅಡಿ ಲಡಾಖ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲಿದೆ.
11,800 ಕಾರ್ಮಿಕರು!
ಝಾರ್ಖಂಡ್ ಒಟ್ಟು 11,800 ಕಾರ್ಮಿಕರನ್ನು ಕಳುಹಿಸಿದೆ. ಇವರಲ್ಲಿ ಕೆಲವರು ಉತ್ತರಾಖಂಡ ಗಡಿಯ ಶಿವಾಲಿಕ್ ಯೋಜನೆ, ಹಿಮಾಚಲ ಪ್ರದೇಶ ಅಂಚಿನ ದೀಪಕ್ ಯೋಜನೆ ಮತ್ತು ಕಾಶ್ಮೀರದ ಬೀಕಾನ್ ರಸ್ತೆ ಯೋಜನೆಗಾಗಿ ಕೆಲಸ ಮಾಡಲಿದ್ದಾರೆ. 8 ಸಾವಿರಕ್ಕೂ ಅಧಿಕ ಮಂದಿ ಲಡಾಖ್ ರಸ್ತೆ ನಿರ್ಮಾಣದ ಅಖಾಡಕ್ಕೆ ಇಳಿಯಲಿದ್ದಾರೆ.
ಭದ್ರತೆ ನಿಮ್ಮ ಹೊಣೆ
ಝಾರ್ಖಂಡ್‌ನ ಬುಡಕಟ್ಟು ಜನಾಂಗದ ಕೆಲಸಗಾರರು ಈ ಹಿಂದೆಯೂ ಭಾರತದ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣದಲ್ಲಿ ಭಾಗವಹಿಸಿದ್ದರು. ದೇಶಕ್ಕಾಗಿ ಅತೀ ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುವ ಅವರಿಗೆ ಸೂಕ್ತ ರಕ್ಷಣೆ, ಆಶ್ರಯ, ಇನ್ನಿತರ ಮೂಲಸೌಕರ್ಯ ಒದಗಿಸುವುದು ಬಿಆರ್‌ಒ ಹೊಣೆ. ಜೀವವಿಮೆ, ವೈದ್ಯಕೀಯ ವೆಚ್ಚಗಳನ್ನೂ ಭರಿಸಬೇಕು ಎಂದು ಸೊರೇನ್ ಸೂಚಿಸಿದ್ದಾರೆ. ಎಲ್ಲ ಷರತ್ತುಗಳಿಗೂ ಒಪ್ಪಿರುವ ಬಿಆರ್‌ಒ, ಕೂಲಿಯನ್ನೂ ಶೇ.15-20ರಷ್ಟು ಏರಿಸಿದೆ. ಜೂ.10ರಿಂದ ರಸ್ತೆ ಕಾಮಗಾರಿ ಆರಂಭವಾಗಲಿದ್ದು, ಈಗಾಗಲೇ 11 ರೈಲು, ಟ್ರಕ್ಕುಗಳ ಮೂಲಕ ಕಾರ್ಮಿಕರು, ನಿಗದಿತ ಸ್ಥಳ ತಲುಪಿದ್ದಾರೆ.
ಮಿಲಿಟರಿ ತಂತ್ರಜ್ಞಾನಗಳ ಮೇಲೆ ಚೀನ ಕಣ್ಣು
ಮಿಲಿಟರಿ ತಂತ್ರಜ್ಞಾನದ ರಹಸ್ಯಗಳನ್ನು ಕದಿಯಲು ಚೀನ ಜಗತ್ತಿನಾದ್ಯಂತ ಸಂಶೋಧಕರನ್ನು ನೇಮಿಸುತ್ತಿದೆ ಎಂದು ತಿಳಿದುಬಂದಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನ (ಸಿಪಿಸಿ)ದ ಕೇಂದ್ರ ಸಮಿತಿಯು “ಯುನೈಟೆಡ್ ಫ್ರಂಟ್ ವರ್ಕ್’ ಇಲಾಖೆಗೆ ಈ ಹೊಣೆಯನ್ನು ವಹಿಸಿದೆ ಎನ್ನಲಾಗಿದೆ.ಅಮೆರಿಕದ ಲ್ಯಾಬ್‌ಗಳ ವೈದ್ಯಕೀಯ ರಹಸ್ಯ ಕದಿಯಲು ಚೀನ ಸಂಶೋಧಕರನ್ನು ನೇಮಿಸಿದ್ದ ಸಂಗತಿ ಕೆಲವು ತಿಂಗಳ ಹಿಂದಷ್ಟೇ ಬಯಲಾಗಿತ್ತು. ಇದೇ ಕಳ್ಳಬುದ್ಧಿಯನ್ನು ಮಿಲಿಟರಿ ಕ್ಷೇತ್ರಕ್ಕೂ ವಿಸ್ತರಿಸಲು ಅದು ಮುಂದಾಗಿದೆ.
ಬಿಕ್ಕಟ್ಟು ಶಮನಕ್ಕೆ ಚೀನ ಒಲವು
ಲಡಾಖ್ ಸಭೆಯ ಅನಂತರ ಇದೇ ಮೊದಲ ಬಾರಿಗೆ ಚೀನ ಪ್ರತಿಕ್ರಿಯಿಸಿದೆ. ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿರುವ ಗಡಿವಿವಾದ ಭವಿಷ್ಯದಲ್ಲಿ ಉಲ್ಬಣಗೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಗಡಿಯಲ್ಲಿ ಶಾಂತಿ ಕಾಪಾಡಲು ಲಡಾಖ್ ಸಭೆ ತೀರ್ಮಾನಿಸಿದೆ. ಪ್ರಸ್ತುತ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಡಿ ಬಿಕ್ಕಟ್ಟನ್ನು ದೀರ್ಘ ಕಾಲದ ವರೆಗೆ ಮುಂದುವರಿಸದೆ, ಮಾತುಕತೆ ಮೂಲಕ ಶೀಘ್ರವೇ ಪರಿಹಾರ ಕಂಡುಕೊಳ್ಳಲು ಎರಡೂ ದೇಶಗಳು ಬಯಸುತ್ತಿವೆ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.