ಅಧಿಕಾರಿಗಳು ರೈತರ ನೆರವಿಗೆ ಬರಲಿ: ಸಿ.ಎಂ. ನಿಂಬಣ್ಣವರ
Team Udayavani, Jun 9, 2020, 9:41 AM IST
ಕಲಘಟಗಿ: ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಸೋಯಾಬಿನ್ ಬೀಜವು ಬಹತೇಕ ಮೊಳಕೆಯೊಡೆಯದೆ ಕಂಗಾಲಾಗಿರುವ ರೈತರ ನೆರವಿಗೆ ಅಧಿಕಾರಿ ವರ್ಗ ಹಾಗೂ ಸರಕಾರ ತಕ್ಷಣ ಮುಂದಾಗಬೇಕೆಂದು ಶಾಸಕ ಸಿ.ಎಂ.ನಿಂಬಣ್ಣವರ ಒತ್ತಾಯಿಸಿದರು.
ಸೋಮವಾರ ತಾಲೂಕಿನ ಉಗ್ಗಿನಕೇರಿ, ಬೇಗೂರ ಮುಂತಾದ ಗ್ರಾಮಗಳಲ್ಲಿನ ಸೋಯಾ ಬಿತ್ತಿದ ಜಮೀನುಗಳಿಗೆ ತೆರಳಿ ವೀಕ್ಷಿಸಿ, ರೈತರ ನೆರವಿಗೆ ಧಾವಿಸುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ ಒಂದು ವಾರದ ಹಿಂದೆ ಬಿತ್ತನೆ ಮಾಡಿದ ಬೀಜಗಳು ಕಡಿಮೆ ಪ್ರಮಾಣದಲ್ಲಿ ಮೊಳಕೆ ಒಡೆದಿದ್ದು, ಬಹುತೇಕವಾಗಿ ಅಲ್ಲಿಯೇ ಕೊಳೆತ ಸ್ಥಿತಿಯಲ್ಲಿವೆ ಎಂದು ಬೇಗೂರ ಹಾಗೂ ಉಗ್ಗಿನಕೇರಿ ಗ್ರಾಮದ ರೈತರು ಆರೋಪಿಸಿದರು.ಸರಕಾರ ತಮ್ಮೆಲ್ಲರ ನೋವಿಗೆ ತಕ್ಷಣ ಸ್ಪಂದಿಸಲಿದೆ ಎಂದು ಸಂತೈಸಿದರು. ಅಧಿಕಾರಿಗಳು ಮರು ಬಿತ್ತನೆಗೆ ಅವಕಾಶ ಕಲ್ಪಿಸುವುದರೊಂದಿಗೆ ಉಂಟಾದ ಹಾನಿಯನ್ನು ಸರಕಾರದ ಮುಖೇನ ಭರಣ ಮಾಡಲು ಮುಂದಾಗಬೇಕೆಂದು ಸೂಚಿಸಿದರು.
ಈ ಕುರಿತು ಹಿರಿಯ ಅಧಿಕಾರಿಗಳ ಹಾಗೂ ವಿಜ್ಞಾನಿಗಳ ಗಮನಕ್ಕೆ ತರಲಾಗಿದ್ದು, ಸರಕಾರದ ನಿರ್ದೇಶನದನ್ವಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಆರ್.ಸ್ಮಿತಾ ಹಾಗೂ ಸಹಾಯಕ ಕೃಷಿ ನಿರ್ದೇಶಕ ಎನ್. ಎಫ್.ಕಟ್ಟೆಗೌಡರ ತಿಳಿಸಿದರು. ಸಿಪಿಐ ವಿಜಯ ಬಿರಾದಾರ, ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ, ಜಿಪಂ ಮಾಜಿ ಸದಸ್ಯ ಐ.ಸಿ.ಗೋಕುಲ, ರೈತ ಪ್ರಮುಖರಾದ ಸಿ.ಬಿ.ಹೊನ್ನಿಹಳ್ಳಿ, ನಿಜುಗುಣಿ ಕೆಲಗೇರಿ, ಪರಶುರಾಮ ರಜಪೂತ, ಅಶೋಕ ಗೋಕುಲ, ಉಳವಪ್ಪ ಬಳಿಗೇರ, ವಿ.ಬಿ.ಶಿವನಗೌಡರ, ಪ್ರಭುಲಿಂಗ ಕಂಪ್ಲಿ, ಶಿವಲಿಂಗ ಮೂಗಣ್ಣವರ, ಸಣ್ಣಕಲ್ಲಪ್ಪ ಕುಟ್ರಿ, ರವಿ ಅಲ್ಲಾಪೂರ, ಶಿವರುದ್ರ ಗೋಕುಲ, ಶಿವಪ್ಪ ಮೇಟಿ, ವಿರುಪಾಕ್ಷಿ ಭೂಪಾಳಿ, ಹನುಮಂತ ಹರಿಜನ, ಹೇಮಂತ ಕೆಲಗೇರಿ, ಯಲ್ಲಪ್ಪ ಸಂಶಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.