ಬೀದರ್ ಜಿಲ್ಲೆಯಲ್ಲಿಂದು 9 ಮಂದಿಗೆ ಸೋಂಕು ದೃಢ: 42 ಜನ ಬಿಡುಗಡೆ
Team Udayavani, Jun 9, 2020, 7:10 PM IST
ಬೀದರ್: ಗಡಿ ನಾಡು ಬೀದರನಲ್ಲಿ ಮಹಾರಾಷ್ಟ್ರ ಕಂಟಕ ಮುಂದುವರೆದಿದ್ದು, ಮಂಗಳವಾರ ಜಿಲ್ಲೆಯಲ್ಲಿ ಮತ್ತೆ ಒಂಬತ್ತು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ 279ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ 42 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ಆಶಾದಾಯಕ ಎನಿಸಿದೆ.
ಸೋಮವಾರವಷ್ಟೇ ಜಿಲ್ಲೆಯಲ್ಲಿ ಕೋವಿಡ್ ಆರ್ಭಟಿಸಿ 48 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದ್ದವು. ಈಗ ಮತ್ತೆ ಮರು ದಿನವೇ 9 ಕೇಸ್‌ಗಳು ಕಾಣಿಸಿಕೊಂಡಿವೆ. ಇವರಲ್ಲಿ ಆರು ಮಂದಿ ಮಹಿಳೆಯರು, ಮೂವರು ಪುರುಷರಾಗಿದ್ದಾರೆ. ಸೋಂಕಿತರೆಲ್ಲರಿಗೂ ಮಹಾರಾಷ್ಟ್ರ ಸಂಪರ್ಕ ಇದೆ ಅಲ್ಲದೇ ಎಲ್ಲರೂ ಗ್ರಾಮೀಣ ಭಾಗದ ವಲಸೆ ಕಾರ್ಮಿಕರೇ ಆಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಮಂಗಳವಾರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪಾಸಿಟಿವ್‌ಗಳು ಪತ್ತೆಯಾಗಿವೆ. ಬಸವಕಲ್ಯಾಣ ತಾಲೂಕಿನ ಜಾಫರವಾಡಿ, ಗಂಗಾರಾಮ್ ತಾಂಡಾ, ಚಿಕ್ಕನಗಾಂವ್ ತಾಂಡಾ ಮತ್ತು ಧಾಮುನಗರ ತಾಂಡಾದಲ್ಲಿ ತಲಾ ಒಂದು ಕೇಸ್ ಸೇರಿ ಒಟ್ಟು ನಾಲ್ಕು ಪ್ರಕರಣಗಳು, ಔರಾದ ಪಟ್ಟಣದ ಒಂದು, ತಾಲೂಕಿನ ಎಕಂಬಾ ಗ್ರಾಮದಲ್ಲಿ ಎರಡು ಕೇಸ್ ಸೇರಿ ಒಟ್ಟು ಮೂರು, ಭಾಲ್ಕಿ ತಾಲೂಕಿನ ಭಾಟಸಾಂಗವಿ ಹಾಗೂ ಹುಮನಾಬಾದ ತಾಲೂಕಿ ಹಿಪ್ಪರಗಾ ಗ್ರಾಮದಲ್ಲಿ ತಲಾ ಒಂದು ಕೇಸ್‌ಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ 297 ಪ್ರಕರಣಗಳು ವರದಿಯಾದಂತೆ ಆಗಿದ್ದು, 132 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನೂ 141 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆಯ ಹೇಲ್ತ್ ಬುಲೇಟಿನ್ ದೃಡಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.