ಗಣ್ಯರಿಗೆ 2 ಸುಸಜ್ಜಿತ ವಿಮಾನ ; ಬೋಯಿಂಗ್ ಸಂಸ್ಥೆಯಿಂದ ಸೆಪ್ಟಂಬರ್‌ಗೆ ಹಸ್ತಾಂತರ
Team Udayavani, Jun 10, 2020, 12:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕಾಗಿ ಎರಡು ಅತ್ಯಾಧುನಿಕ, ವೈಭವೋಪೇತ, ಸರ್ವ ಸುಸಜ್ಜಿತ ವಿಮಾನಗಳನ್ನು ಬೋಯಿಂಗ್ ವಿಮಾನ ಸಂಸ್ಥೆ ಸಿದ್ಧಗೊಳಿಸಿದ್ದು, ಇದೇ ಆಗಸ್ಟ್ -ಸೆಪ್ಟಂಬರ್‌ನಲ್ಲಿ ಅವು ಭಾರತಕ್ಕೆ ಹಸ್ತಾಂತರಗೊಳ್ಳಲಿವೆ.
ಈ ಮೂವರು ಗಣ್ಯಾತಿ ಗಣ್ಯರ ಸೇವೆಗಾಗಿಯೇ ಸಿದ್ಧಗೊಂಡಿರುವ ‘ಬೋಯಿಂಗ್ 777 – 300 ಇಆರ್ ವಿವಿಐಪಿ’ ವಿಮಾನಗಳಾಗಿದ್ದು, ಇವುಗಳ ಮೇಲೆ “ಏರ್ ಇಂಡಿ ಯಾ ಒನ್’ ಎಂದು ಬೃಹದಾಕಾರವಾಗಿ ಬರೆಯಲಾಗುತ್ತದೆ.
ಅಗತ್ಯಕ್ಕೆ ತಕ್ಕಂತೆ ವಿನ್ಯಾಸ: ಅಸಲಿಗೆ, ಈ ವಿಮಾನಗಳನ್ನು 2018ರಲ್ಲೇ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದರೆ, ವಿವಿಐಪಿಗಳ ಪ್ರಯಾಣಕ್ಕೆ ತಕ್ಕಂತೆ ಇದನ್ನು ಮತ್ತಷ್ಟು ಬದಲಾಯಿಸುವಂತೆ ಕೋರಿದ್ದ ಭಾರತ, ಈ ನಿಟ್ಟಿನಲ್ಲಿ ತನಗೆ ಬೇಕಾದ ಸೌಕರ್ಯಗಳ ಪಟ್ಟಿಯನ್ನು ಬೋಯಿಂಗ್ ಸಂಸ್ಥೆಗೆ ನೀಡಿತ್ತು.
ಹಾಗಾಗಿ, ಭಾರತದ ಆಶಯದಂತೆಯೇ ಆ ವಿಮಾನಗಳನ್ನು ಒಳಸ್ವರೂಪ, ಸೌಲಭ್ಯಗಳಲ್ಲಿ ಗಣನೀಯ ಬದಲಾವಣೆ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಅವನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವಿಮಾನಗಳು ಇದೇ ತಿಂಗಳಲ್ಲಿ ಭಾರತಕ್ಕೆ ಹಸ್ತಾಂತರಗೊಳ್ಳಬೇಕಿತ್ತು. ಆದರೆ, ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ, ಇವು ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಹಸ್ತಾಂತರಗೊಳ್ಳಲಿವೆ.
ವಿಶೇಷವೇನು?
ಈ ವಿಮಾನಗಳಲ್ಲಿ ‘ಲಾರ್ಜ್ ಏರ್‌ಕ್ರಾಫ್ಟ್ ಇನ್‌ಫ್ರಾರೆಡ್ ಕೌಂಟರ್‌ವೆುಷರ್ಸ್’ (ಎಲ್‌ಎಐಆರ್‌ಸಿಎಂ) ಎಂಬ ಕ್ಷಿಪಣಿ ನಿಗ್ರಹ ತಂತ್ರಜ್ಞಾನ ವ್ಯವಸ್ಥೆಯಿರಲಿದೆ. ಇದರ ಜೊತೆಗೆ, ಸ್ವಯಂ ರಕ್ಷಣೆ ಸೂಟ್ಸ್ (ಎಸ್‌ಪಿಎಸ್) ವ್ಯವಸ್ಥೆಯೂ ಇರುತ್ತದೆ. ಪ್ರತಿ ವಿಮಾನಕ್ಕೆ 1,400 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ವಿಮಾನಗಳನ್ನು ಭಾರತೀಯ ವಾಯುಪಡೆಯ ಪೈಲಟ್‌ಗಳು ಮಾತ್ರ ಚಲಾಯಿಸಲಿದ್ದು, ಈ ವಿಮಾನದ ನಿರ್ವಹಣೆಯನ್ನು ಏರ್‌ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಸಂಸ್ಥೆ ವಹಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.