ಜೂನ್‌ ಮತ್ತೆ ಬಂದಿದೆ, ಆದರೆ…


Team Udayavani, Jun 10, 2020, 4:47 AM IST

shale angala

ಶಾಲೆಯ ಅಂಗಳಕ್ಕೆ ಮಕ್ಕಳನ್ನೂ, ಮಮತೆಯನ್ನೂ, ಮಲ್ಲಿಗೆಯ ನಗುವನ್ನೂ, ಉತ್ಸಾಹವೆಂಬ ಕಾಮನಬಿಲ್ಲನ್ನೂ ಹೊತ್ತು ತರುತ್ತಿದ್ದ ಜೂನ್‌ ಈಗ ಮತ್ತೆ ಅಡಿಯಿಟ್ಟಿದೆ; ಆದರೆ, ಅದಕ್ಕೀಗ ಸಂಭ್ರಮವಿಲ್ಲ…

ಚಿಕ್ಕವರಿದ್ದಾಗ ಜೂನ್‌ ಎಂದರೆ ಸಾಕು; ಅಂಗಡಿಯಿಂದ ಹೊಸ ಹೊಸ ಪುಸ್ತಕಗಳನ್ನು ಖರೀದಿಸುವ, ಸೀನಿಯರ್‌ಗಳಿಂದ ಪುಸ್ತಕಗಳನ್ನು ಅರ್ಧ ರೇಟಿಗೆ ಕೊಳ್ಳುವ ಸಂಭ್ರಮ. ಈಗಿನ ಹಾಗೆ ಉಚಿತ ಪುಸ್ತಕ ಕೊಡುವ ಕಾಲವಾಗಿರಲಿಲ್ಲ  ಅದು. ಹಾಗೆ ತಂದ ಪುಸ್ತಕಗಳನ್ನು ರಿಪೇರಿ ಮಾಡಿಕೊಂಡು ಬೈಂಡ್‌ ಹಾಕಿ, ಲೇಬಲ್‌ ಅಂಟಿಸಿ, ನಮ್ಮ ಹೆಸರನ್ನು ಅದರ ಮೇಲೆ ಬರೆದ ಮೇಲೆಯೇ ಸಮಾಧಾನ. ಅದರಲ್ಲೂ ಎಂಥ ಬೈಂಡ್‌ ಹಾಕಬೇಕು, ಯಾವ ರೀತಿ ಫೋಲ್ಡ್‌  ಮಾಡಬೇಕು ಎನ್ನುವ ತಲೆಬಿಸಿ ಬೇರೆ.

ಕಾರಣ, ಅದು ವರ್ಷಪೂರ್ತಿ ನಮ್ಮ ಪುಸ್ತಕಗಳನ್ನು ಜೋಪಾನ ಮಾಡುವಂತಿ  ರಬೇಕಲ್ಲವಾ… ಎಂಥ ಲೇಬಲ್‌ ಹಚ್ಚಬೇಕೆನ್ನುವುದು ಇನ್ನೂ ದೊಡ್ಡ ತಲೆಬಿಸಿ. ಎಲ್ಲರ ಲೇಬಲ್‌ ಗಳಿಗಿಂತ ನನ್ನ  ಲೇಬಲ್ಲೇ ಚೆನ್ನಾಗಿರಬೇಕು ಎಂಬ ಆಸೆ… ಪುಸ್ತಕಗಳು ತಯಾರಾದ ಮೇಲೆ ನೋಟ್ಸು, ರಫ್ಗಳದ್ದು ಇನ್ನೊಂದು ಕಥೆ. ನಂತರ, ಹೊಸ ವರ್ಷಕ್ಕೆ ಹೊಸ ಬ್ಯಾಗು, ಜಾಮಿಟ್ರಿ, ಪೆನ್ನು, ಪೆನ್ಸಿಲ್ಲು, ರಬ್ಬರ‍್ರು, ಮೆಂಡರ‍್ರು, ಹೊಸ ಯೂನಿಫಾರ್ಮ್,  ಹೊಸ ಶೂ…. ಓಹ್‌ ಅವುಗಳ ಪಟ್ಟಿ ಮುಗಿಯುತ್ತಲೇ ಇರಲಿಲ್ಲ.

ಇವೆಲ್ಲವುಗಳನ್ನು ಹೊತ್ತು ಮೊದಲ ದಿನ ಶಾಲೆಗೆ ಹೋಗುವುದೆಂದರೆ, ಅದೆಂಥ ಸಂಭ್ರಮ! ಒಂದು ವೇಳೆ ಮನೆಯಲ್ಲಿ ಕೇಳಿದ್ದನ್ನು ಅನಿವಾರ್ಯ ಕಾರಣದಿಂದ ಕೊಡಿಸಿಲ್ಲ  ಎಂದರೆ ಮುಗೀತು, ಆಕಾಶವೇ ಕಳಚಿ ಬಿದ್ದಂತೆ ಮುಖ ಮಾಡಿ, ಕಣ್ಣುಗಳಲ್ಲಿ ಗಂಗಾ- ಯಮುನಾ ಹರಿಸಿ… ಓಹ್‌, ಅದೆಂಥ ಸಂಕಟವೆಂದರೆ, ಅಪ್ಪ- ಅಮ್ಮನಿಗೆ ಅಯ್ಯೋ ಪಾಪ ಅನ್ನಿಸಿ, ಅಂದೇ ಅದನ್ನು ಕೊಡಿಸಿಬಿಡಬೇಕು! ಈ ಎಲ್ಲ  ನೆನಪುಗಳೂ ಜೂನ್‌ ಬಂತೆಂದರೆ ಬಿಚ್ಚಿಕೊಳ್ಳುತ್ತವೆ.

ಕಾಲ ಬದಲಾಗಿದೆ…: ಈವರೆಗೂ ಹೇಳಿದ್ದು ನಮ್ಮ ಕಾಲದ ಕಥೆ. ಆದರೀಗ ನನ್ನ ಮಗನ ಕಾಲಕ್ಕೆ, ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ವರ್ಷದ ಕೊನೆಯ ಪರೀಕ್ಷೆ ಮುಗಿಯುವಷ್ಟರಲ್ಲಿ, ಮುಂದಿನ ವರ್ಷದ ದಾಖಲಾತಿ ಮತ್ತು ಅದರ  ಫೀಸು, ನೋಟ್‌ ಪುಸ್ತಕ ಮತ್ತು ವರ್ಷದ ಕೊನೆಯವರೆಗೂ ಆಗುವಷ್ಟು ಶೈಕ್ಷಣಿಕ ಸಲಕರಣೆಗಳ ಪ್ಯಾಕೇಜ್‌… ಎಲ್ಲ ಸೇರಿ, ಹೆತ್ತವರು ತಮ್ಮ ಸಣ್ಣ ಮಕ್ಕಳ ಓದಿಗಾಗಿ ಹೆಚ್ಚು ಖರ್ಚುಮಾಡಬೇಕಾಗಿ ಬರುತ್ತದೆ. ಆದರೆ, ಟಿಪ್‌ಟಾಪಾಗಿ  ತಯಾರಾಗುವ ಮಗುವಿಗೆ ಮಾತ್ರ, ಯಾವ ಸಂಭ್ರಮವೂ ಇರುವುದಿಲ್ಲ.

ಕತ್ತೆಯಂತೆ ಭಾರ ಹೊತ್ತು, ಅವ್ಯಕ್ತ ಭಯ- ಕಳವಳದಿಂದ ಶಾಲೆಗೆ ಹೋಗುತ್ತದೆ. ಅಲ್ಲಿನ ಅತಿಯಾದ ಶಿಸ್ತು, ಪಠ್ಯಕ್ರಮದ ಹೊರೆ, ಶಿಕ್ಷಕರ ಭಯ… ಯಾವುದು  ಮಗುವನ್ನು ಹೆಚ್ಚು ಹೆದರಿಸುತ್ತದೆ ಎಂದು ಹೇಗೆ ಹೇಳುವುದು? ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿ ಮಗುವಿನ ಸ್ವತ್ಛಂದತೆಗೆ ಆಸ್ಪದವೇ ಇಲ್ಲ. ಎಲ್ಲ ಗೊತ್ತಿದ್ದೂ ನಾವು ಮಕ್ಕಳನ್ನು, ರೇಸಿನಲ್ಲಿ ಕುದುರೆಯನ್ನು ನಿಲ್ಲಿಸುವಂತೆ ಒಯ್ದು ನಿಲ್ಲಿಸುತ್ತೇವೆ. ನಮ್ಮ ಮಗುವೇ ಮೊದಲಿಗನಾಗಬೇಕೆಂದು ಆಶಿಸುತ್ತೇವೆ.

ಆನ್‌ಲೈನ್‌ನ ಹೆಸರಿನಲ್ಲಿ…: ಇವೆಲ್ಲ ವೈರುಧ್ಯಗಳ ಕುರಿತು ಯೋಚಿಸುತ್ತಾ, ಪರಿಹಾರದ ಬಗ್ಗೆ ಚಿಂತಿಸುತ್ತಿರುವಾಗ, ಕೊರೊನಾ ಬಂದು ಅಪ್ಪಳಿಸಿದೆ. ರಜೆ ಮುಗಿಯುತ್ತಾ ಬಂದರೂ, ಮುಂದೇನು ಮಾಡಬೇಕೆಂದು ಯಾರಿಗೂ ತಿಳಿಯುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ, ನಮ್ಮನ್ನು ನಾವು  ಮನೆಯಲ್ಲಿಯೇ ಬಂಧಿಸಿಕೊಳ್ಳದೆ ವಿಧಿ ಇಲ್ಲ. ಆದರೆ, ಎಂತಹ ಪರಿಸ್ಥಿತಿಯಲ್ಲಿಯೂ ಮಗುವಿನ ಶಿಕ್ಷಣ ನಿಲ್ಲಬಾರದು.

ಅದಕ್ಕಾಗಿ ಅಂತರ್ಜಾಲದ ಮೊರೆ ಹೋಗಿದ್ದೇವೆ. ಅಂತೆಯೇ  ಆನ್‌ಲೈನ್‌ ತರಗತಿಗಳತ್ತ ಶಾಲೆಗಳು ಮುಖಮಾಡಿವೆ. ಆದರೆ, ಪ್ರಿಕೆಜಿ, ಎಲ್‌ಕೆಜಿ, ಯುಕೆಜಿಗಳಿಗೂ ಆನ್‌ಲೈನ್‌ ತರಗತಿ ಮಾಡುತ್ತೇವೆ ಅಂದಾಗ ಮಾತ್ರ ಎಲ್ಲ ದಿಗ್ಭ್ರಾಂತರಾದರು. ಆ ಪುಟ್ಟ ಮಕ್ಕಳಿಗೆ ಆನ್‌ಲೈನ್‌ ಪಾಠ  ಅಗತ್ಯವಾ? ಎಲ್‌ಕೆಜಿಯ ಮಕ್ಕಳು ಆನ್‌ಲೈನ್‌ ಮೂಲಕ ಕಲಿಯಲು ಸಾಧ್ಯವಾ? ಇಂಥ ಪ್ರಶ್ನೆಗಳು ಹತ್ತು ಕಡೆಯಿಂದ ಕೇಳಿಬಂ ದವು. ಈಗಲೂ ಆ ವಿಷಯವಾಗಿ ಪರ- ವಿರೋಧದ ಮಾತುಗಳು ನಡೆದೇ ಇವೆ.

ವಿಡಿಯೋದ ಮಾತು ಪಾಠವಾ?: ಇದರಿಂದಾಗಿ, ಜೂನ್‌ ತಿಂಗಳ ಸಂಭ್ರಮವನ್ನು ಮಗು ಕಳೆದುಕೊಂಡಿದೆ. ಆದರೆ, ಕೊರೊನಾ ಕಾರಣದಿಂದ ಸಿಕ್ಕ ದೀರ್ಘ‌ ರಜೆಯನ್ನು ಮಕ್ಕಳು ಖುಷಿಯಾಗಿ ಅನುಭವಿಸುತ್ತಿದ್ದಾರೆ. ತರಗತಿಯಲ್ಲದ  ತರಗತಿಯಲ್ಲಿ ಅವರನ್ನು ಕೂರಿಸಿ ಓದು ಎನ್ನುತ್ತಿರುವುದರಿಂದ ಅವರಿಗೂ ಅಯೋಮಯವಾಗಿದೆ. ಮನೆ ಎಂದರೆ ಎಂಥದೋ ನೆಮ್ಮದಿ ಎಂದುಕೊಳ್ಳುತ್ತಿದ್ದವರು, ಮನೆಯೂ ಶಾಲೆಯಾದದ್ದನ್ನು ಕಂಡು ಹೌಹಾರುತ್ತಿದ್ದಾರೆ. ಈಗೇನಿದ್ದರೂ, ನಿಗದಿಪಡಿಸಿದ ಸಮಯದಲ್ಲಿ ಪಾಠ  ಕೇಳುವುದು. ಉಳಿದ ಸಮಯದಲ್ಲಿ ಅಭ್ಯಾಸ ಮತ್ತು ಆಟ.

ನಾಲ್ಕು ಜನ ಒಟ್ಟಾಗಿ ಆಟಕ್ಕಾಗಿ ಬೀದಿಗಿಳಿಯುವಂತಿಲ್ಲ! ಆಟವೆಂದರೆ ಮೊಬೈಲ್‌ ಗೇಮ್‌ ಅಷ್ಟೇ. ಸ್ನೇಹಿತರಿಲ್ಲದೇ ಅದೂ ಒಂದು ಆಟವಾ? ಶಾಲೆಯಲ್ಲಿ ಗುರುಗಳಿಂದ ನೇರವಾಗಿ ಕಲಿಯುತ್ತಿದ್ದವರು, ಈಗ ವಿಡಿಯೋ ಮೂಲಕ ಕೇಳಿದ್ದನ್ನು ಹೇಗೆ ಪಾಠವೆಂದುಕೊಳ್ಳಬೇಕು? ಇಂತಹ ಪ್ರಶ್ನೆಗಳಿಗೆ ಉತ್ತರವಂತೂ ಯಾರಲ್ಲೂ ಇಲ್ಲ. ಇವೆಲ್ಲ ಇನ್ನಷ್ಟೇ ಅಭ್ಯಾಸವಾಗ ಬೇಕಿದೆ ಮಕ್ಕಳಿಗೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜೂನ್‌ ಅಡಿಯಿಟ್ಟಿದೆ; ತಣ್ಣಗೆ ಯಾವ ಸಂಭ್ರಮವ ನ್ನೂ ಹೊತ್ತು ತರದೆ…

* ಆಶಾ ಜಗದೀಶ್

ಟಾಪ್ ನ್ಯೂಸ್

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Lawrence Bishnoi’s brother Anmol Bishnoi arrested in America

Anmol Bishnoi: ಅಮೆರಿಕದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಬಂಧನ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Siddu–kanaka

Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ

PCB: Five coaches in a year; Aaqib Javed has been selected as Pakistan’s white ball coach

PCB: ಒಂದು ವರ್ಷದಲ್ಲಿ ಐದು ಕೋಚ್; ‌ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್‌ ಜಾವೇದ್ ಆಯ್ಕೆ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Shirva1

Shirva: ಹಿಂದೂ ಜೂನಿಯರ್‌ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Lawrence Bishnoi’s brother Anmol Bishnoi arrested in America

Anmol Bishnoi: ಅಮೆರಿಕದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಬಂಧನ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.