ಮೋದಿಯಿಂದ ಭ್ರಷ್ಟಾಚಾರ ರಹಿತ ಆಡಳಿತ
Team Udayavani, Jun 10, 2020, 5:37 AM IST
ಹುಣಸೂರು: ಪ್ರಧಾನಿ ಮೋದಿ ದೇಶದಲ್ಲಿ ಭ್ರಷ್ಟ ರಹಿತ ಆಡಳಿತ, ಕೋವಿಡ್ 19 ಸಮರ್ಪಕವಾಗಿ ನಿರ್ವಹಿಸಿ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಬಣ್ಣಿಸಿದರು. ಮೋದಿ ಸರ್ಕಾರದ ಒಂದು ವರ್ಷದ ಸಾಧನೆಗಳ ಕುರಿತು ಬಿಜೆಪಿ ಆಯೋಜಿಸಿರುವ ಮನೆ ಮನೆಗೆ ಕರಪತ್ರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಮೋದಿಯವರ ಹಿಂದಿನ ಐದು ವರ್ಷದ ಆಡಳಿತ ದಲ್ಲಿ ಆರ್ಥಿಕ ಶಿಸ್ತು ರೂಪಿಸಿದ್ದಲ್ಲದೆ, ಬಡವರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮ ರೂಪಿಸಿದರು. ಜಾತ್ಯಾತೀತ ಶಕ್ತಿಯನ್ನು ಬಲಗೊಳಿಸಿ ದೇಶದ ಪ್ರಗತಿ,ರಕ್ಷಣೆ, ಆರೋಗ್ಯ ಸೇವೆ, ಕೃಷಿಕರಿಗೆ ನೆರವು, ಶ್ರಮಿಕ ಸಮಾಜಗಳಿಗೆ ಆರ್ಥಿಕ ನೆರವು ಕಲ್ಪಿಸಿಕೊಟ್ಟ ಮಹಾ ನಾಯಕ. ಮಹಾತ್ಮಗಾಂಧಿ, ಅಂಬೇಡ್ಕರರನ್ನು ತಮ್ಮ ಆಡಳಿತದಲ್ಲಿ ಜೊತೆಜೊತೆಗೆ ಕೊಂಡೊಯ್ಯುವ ಮೂಲಕ ವಿಭಿನ್ನ ಆಡಳಿತ ನೀಡಿದ್ದಾರೆ.
ಎಲ್ಲ ದೇಶವನ್ನು ಮುಟ್ಟಿ ಬಂದಿರುವ ಏಕೈಕ ಪ್ರಧಾನಿ ಮೋದಿ ಎಂದರು. ದೇವರಾಜ ಅರಸರಂತೆ ಸೂಕ್ಷ್ಮಾತಿಸೂಕ್ಷ ಸಮಾಜ ದಿಂದ ಬಂದಿದ್ದು, ಜಾತಿ ಬಲವಿಲ್ಲದಿದ್ದರೂ ಸಾಮಾ ಜಿಕ ಪರಿಕಲ್ಪನೆಯಲ್ಲಿ ಎಲ್ಲ ವರ್ಗ, ಧರ್ಮದವರು ಒಪ್ಪುವಂತಹ ಆಡಳಿತ ನೀಡಿದ್ದಾರೆ. ದೇಶದ ಎಲ್ಲರ ಒಳಿತಿಗಾಗಿ ರೂಪಿಸಿರುವ ಅನೇಕ ಕಾರ್ಯಕ್ರಮಗಳ ಕುರಿತು ಪಕ್ಷ ಜೂ.15ರೊಳಗೆ ಎಲ್ಲರ ಮನೆಗೂ ಸಾಧ ನೆಯ ಕರಪತ್ರವನ್ನು ಪಕ್ಷದ ಸೇನಾನಿಗಳು ವಿತರಿಸುವರೆಂದು ತಿಳಿಸಿದರು.
ಈ ವೇಳೆ ನಗರಸಭಾ ಸದಸ್ಯ ಹರೀಶ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಹಳ್ಳದಕೊಪ್ಪಲು ನಾಗಣ್ಣ, ನಗರ ಅಧ್ಯಕ್ಷ ಗಣೇಶಕುಮಾರಸ್ವಾಮಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.