ಎಲ್ಲಾ ಕಾರ್ಖಾನೆಗಳೂ ಖಾಸಗೀಕರಣ ಆಗಲಿ
Team Udayavani, Jun 10, 2020, 5:41 AM IST
ಮೈಸೂರು: ಕೇವಲ ಸಕ್ಕರೆ ಕಾರ್ಖಾನೆ ಮಾತ್ರವಲ್ಲ, ರಾಜ್ಯದಲ್ಲಿರುವ ಎಲ್ಲಾ ಕಾರ್ಖಾನೆಗಳನ್ನು ಖಾಸಗೀಕರಣ ಮಾಡಲಿ. ನಾನೊಬ್ಬ ಉದ್ಯಮಿಯಾಗಿ ಖಾಸಗೀಕರಣ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ, ಶಾಸಕ ಮುರುಗೇಶ್ ನಿರಾಣಿ ತಿಳಿಸಿದರು. ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀ ಕರಣಕ್ಕೆ ಮಂಡ್ಯ ಜನಪ್ರತಿನಿಧಿಗಳ ವಿರೋಧ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಯಾರೂ ಕಾರ್ಖಾನೆ ಖಾಸಗೀಕರಣಕ್ಕೆ ವಿರೋಧ ಮಾಡಿಲ್ಲ. ಅಲ್ಲಿನ ಎಲ್ಲ ಜನಪ್ರತಿನಿಧಿಗಳು ನಮಗೆ ಸಹಕಾರ ನೀಡಿದ್ದಾರೆ. ಮೈಷುಗರ್ ಕಾರ್ಖಾನೆ ಬಗ್ಗೆ ನಾನಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.
ಆದಾಯ ಬರಲಿದೆ: ಪಾಂಡವಪುರ ಕಾರ್ಖಾನೆಗೆ 26 ಕೋಟಿ ಹಣ ಕಟ್ಟಬೇಕಿದೆ. ಅದನ್ನು ನಾವು ಕಟ್ಟುತ್ತೇವೆ. ಆದರೆ ಅಲ್ಲಿನ ಬಾಕಿ ನಮಗೆ ಸಂಬಂಧ ಪಡುವುದಿಲ್ಲ. ಈ ಕ್ಷಣದಿಂದ ನಾವು ಅಲ್ಲಿನ ಎಲ್ಲ ವ್ಯವಸ್ಥೆ ಬಳಸಿಕೊಂಡು ಕಬ್ಬು ಅರೆಯುತ್ತೇವೆ. ಅದರಲ್ಲಿನ ಬಯೋ ಉತ್ಪನ್ನಗಳನ್ನು ತಯಾರಿಸಿ ರೈತರಿಗೆ ಹಿಂದಿ ಗಿಂತ ಹೆಚ್ಚಿನ ಆದಾಯ ಬರುವಂತೆ ಮಾಡುತ್ತೇವೆ. ಆ ಭಾಗದಲ್ಲಿ ಇದರಿಂದ ನಿರುದ್ಯೋಗ ನಿವಾರಣೆಯಾಗುತ್ತದೆ. ಯಾವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಸೂಕ್ತ ನಿರ್ವಹಣೆ: ಕಾರ್ಖಾನೆ ಖಾಸಗಿಯ ವರಿಗೆ ನೀಡಿದರೆ ಸೂಕ್ತ ನಿರ್ವಹಣೆ ಮಾಡು ತ್ತಾರೆ. ಕಾರ್ಖಾನೆ ಮಾರಾಟಕ್ಕೆ ನನ್ನ ವಿರೋಧವಿದೆ. ಆದರೆ ಗುತ್ತಿಗೆ ನೀಡಿ ಟೆಂಡರ್ ಮೂಲಕ ಕಾರ್ಖಾನೆ ನಡೆಸಲಿ. ಬೇಕಾದರೆ ಡಿ.ಕೆ. ಶಿವಕುಮಾರ್ ಟೆಂಡರ್‌ನಲ್ಲಿ ಭಾಗಿಯಾಗಲಿ. ವಿರೋಧಕ್ಕಾಗಿ ವಿರೋಧ ಮಾಡುವುದು ಬೇಡ. ಖಾಸಗೀಕರಣದ ಬಗ್ಗೆ ಮನ ಮೋಹನ್ ಸಿಂಗ್, ಮೋದಿಯೂ ಹೇಳಿದ್ದಾರೆ ಎಂದರು. ನಿರಾಣಿ ಷುಗರ್ನಲ್ಲಿ ಕೇವಲ 32 ಕೋಟಿ ಬಾಕಿ ಇದೆ. ಆದರೆ, ನಾವು 2000 ಕೋಟಿ ವ್ಯವ ಹಾರ ಮಾಡಿದ್ದೇವೆ. ಅದರಲ್ಲಿ 32 ಕೋಟಿ ಮಾತ್ರ ಬಾಕಿ ಇದೆ. ಅದನ್ನು ಇನ್ನು 10 ದಿನದಲ್ಲಿ ಕ್ಲಿಯರ್ ಮಾಡುತ್ತೇನೆ. ಪಾಂಡವಪುರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ರಾಜವಂಶಸ್ಥರನ್ನು ಆಹ್ವಾನಿಸಲು ಮೈಸೂರಿಗೆ ಬಂದಿದ್ದೇನೆ ಎಂದರು.
ಅಚ್ಚರಿಯ ಅಭ್ಯರ್ಥಿಗಳಲ್ಲ: ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಅಚ್ಚರಿ ಅಭ್ಯರ್ಥಿಗಳಲ್ಲ. ಅವರ ಹೆಸರು ರಾಜ್ಯ ಬಿಜೆಪಿ ಕಳುಹಿಸಿದ ಪಟ್ಟಿಯಲ್ಲಿತ್ತು. ಈರಣ್ಣ ಕಡಾಡಿ, ಅಶೋಕ್ ಗಸ್ತಿ ಬಿಜೆಪಿಯ ಕಟ್ಟಾಳುಗಳು. ಎಲೆ ಮರೆ ಕಾಯಿಯಂತಿದ್ದು ಪಕ್ಷ ಕಟ್ಟಿದ್ದಾರೆ. ಮಾಧ್ಯಮಗಳಲ್ಲಿ ಕೆಲವರ ಹೆಸರು ಮಾತ್ರ ಬರುತ್ತಿತ್ತು. ಆದರೆ ಹೈಕಮಾಂಡ್ ಗೆ ಕಳುಹಿಸಿದ ಪಟ್ಟಿಯಲ್ಲಿ ಈ ಇಬ್ಬರ ಹೆಸರಿತ್ತು. ಇದರಲ್ಲಿ ಅಚ್ಚರಿ ಏನೂ ಇಲ್ಲ. ಇದರಿಂದ ಯಾರಿಗೂ ಅಸಮಾಧಾನ ಇಲ್ಲ. ನಾನು ಮಂತ್ರಿ ಆಕಾಂಕ್ಷಿಯಾಗಿದ್ದೆ. ಆದರೇ ಸಿಗಲಿಲ್ಲ ಎಂದು ಅಸಮಾಧಾನ ತೋರಲಿಲ್ಲ. ನಮ್ಮ ಪಕ್ಷದಲ್ಲಿ ದುಡಿದವರಿಗೆ ಸ್ಥಾನಮಾನ ಸಿಕ್ಕೇ ಸಿಗುತ್ತದೆ ಎಂದು ಶಾಸಕ ಮುರುಗೇಶ್ ನಿರಾಣಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.