ಲಾಕ್‌ಡೌನ್: ಇ-ಗ್ರಂಥಾಲಯಗಳಿಗೆ ಹೆಚ್ಚಿದ ಬೇಡಿಕೆ
Team Udayavani, Jun 10, 2020, 5:53 AM IST
ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಇ- ಗ್ರಂಥಾಲಯ ವರದಾನವಾಗಿದ್ದು, 2 ತಿಂಗಳಲ್ಲಿ ಒಟ್ಟು 1.67 ಲಕ್ಷ ಜನರು ಇ- ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಂಡು ಪುಸ್ತಕಗಳನ್ನು ಓದಿದ್ದಾರೆ! ಓದುಗರನ್ನು ಗಮನದಲ್ಲಿಟ್ಟುಕೊಂಡು ಸಾರ್ವಜ ನಿಕ ಗ್ರಂಥಾಲಯ ಇಲಾಖೆ ಇ- ಪುಸ್ತಕ ಆರಂಭಿ ಸಿದ್ದು, ಡಿಜಿಟಲ್ ಗ್ರಂಥಾಲಯ ಆ್ಯಪ್ ಸೇವೆ ಮೂಲಕ ರಾಜ್ಯದ ಪ್ರತಿ ಮೂಲೆ ಮೂಲೆಯನ್ನೂ ತಲು ಪಿದೆ. ಆ್ಯಪ್‌ನಲ್ಲಿ 1.13 ಲಕ್ಷ ಪುಸ್ತಕಗಳಿದ್ದು, ಕಥೆ, ಕಾದಂಬರಿ, ಕವಿತೆ, ನಿಯತಕಾಲಿಕೆ, ಮಕ್ಕಳ ಪುಸ್ತಕಗಳು ಸಿಗಲಿವೆ.
1.26 ಲಕ್ಷ ವಿದ್ಯಾರ್ಥಿಗಳು ನೋಂದಣಿ: ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ಸಾರ್ವಜನಿಕ ಗ್ರಂಥಾಲಯವು ಸ್ಪರ್ಧಾತ್ಮಕ ಪುಸ್ತಕಗಳನ್ನು ಇ -ಆ್ಯಪ್ ನಲ್ಲಿ ಅಳವಡಿಸಿದೆ. ಆ ಹಿನ್ನೆಲೆಯಲ್ಲಿ ಎರಡು ತಿಂಗಳಲ್ಲಿ 1.26 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆ್ಯಪ್‌ನಲ್ಲಿ ಪಠ್ಯ ಪುಸ್ತಕ, ಐಐಟಿಗೆ ಸಂಬಂಧಿತ ಪುಸ್ತಕಗಳು, “ನೀಟ್’ಗೆ ಸಂಬಂಧಿತ ಪುಸ್ತಕಗಳೂ ದೊರೆಯಲಿವೆ. ಜೂ. 1ರಂದು 1,356, ಜೂ. 2ರಂದು 1,876, ಜೂ.3ರಂದು 1,472, ಜೂ.4ರಂದು 1,560, ಜೂ. 5ರಂದು 1,648, ಜೂ. 6ರಂದು 1,314 ಜನರು ಇ-ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಗ್ರಂಥಾಲಯ ತೆರೆಯಲು ಆಗ್ರಹ: ಲಾಕ್‌ಡೌನ್ ಸಡಿಲದಿಂದಾಗಿ ಎಫ್ಡಿಎ, ಎಸ್‌ಡಿಎ, ಕೆ- ಸೆಟ್, ಕೆಎಎಸ್, ಪೊಲೀಸ್, ಅಬಕಾರಿ, ರೈಲ್ವೆ ಇನ್ನಿತರ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಲು ಸರ್ಕಾರ ಮುಂದಾಗಿದೆ. ಲಾಕ್ ಡೌನ್ ತೆರವಾದ ಹಿನ್ನೆಲೆಯಲ್ಲಿ ಗ್ರಂಥಾಲಯವನ್ನು ಆರಂಭಿಸಲು ಪರೀಕ್ಷಾರ್ಥಿಗಳು ಆಗ್ರಹಿಸಿದ್ದಾರೆ.
ಆ್ಯಪ್ ಡೌನ್‌ಲೋಡ್ ಹೇಗೆ?: ಆಸಕ್ತರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://play. google.com/store/apps/details?id=com. staging.mintbook ಈ ಲಿಂಕ್ ಕ್ಲಿಕ್ಕಿಸಿ ಡೌನ್ ಆ್ಯಪ್ ಲೋಡ್ ಮಾಡಿಕೊಂಡು ಅದರಲ್ಲಿ ನೋಂದಣಿ ಮಾಡಿಕೊಂಡು ಪುಸ್ತಕಗಳನ್ನು ಓದಬಹುದಾಗಿದೆ.
ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಗ್ರಂಥಾಲಯಗಳ ಬಾಗಿಲು ತೆರೆಯಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಒಪ್ಪಿಗೆ ಸಿಕ್ಕ ನಂತರ ಗ್ರಂಥಾಲಯ ತೆರೆಯಲಾಗುವುದು.
-ಸತೀಶ್ ಕುಮಾರ್ ಕೆ. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.