82 ವರ್ಷದ ದಾಖಲೆ ಮುರಿದ ಪಾರ್ಲೆ ಜಿ: ಲಾಕ್ ಡೌನ್ ಸಮಯದಲ್ಲಿ ಗರಿಷ್ಠ ಮಾರಾಟ !
Team Udayavani, Jun 10, 2020, 8:55 AM IST
ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ಎಲ್ಲರ ನೆಚ್ಚಿನ ಪಾರ್ಲೆ ಜಿ ಬಿಸ್ಕೆಟ್ ತನ್ನದೇ 82 ವರ್ಷಗಳ ದಾಖಲೆಯನ್ನು ಪುಡಿಗಟ್ಟಿ ಇತಿಹಾಸ ರಚಿಸಿದೆ. ದೇಶಾದ್ಯಂತ ಕೋವಿಡ್ ಕಾರಣದಿಂದ ಸಂಫೂರ್ಣ ಲಾಕ್ ಡೌನ್ ವಿಧಿಸಲಾಗಿತ್ತು. ಈ ವೇಳೆ ಪಾರ್ಲೆ ಜಿ ಬಿಸ್ಕತ್ತು ಗಳೂ ಅತೀ ಹೆಚ್ಚು ಮಾರಾಟ ಕಂಡು ವಿಶಿಷ್ಟ ದಾಖಲೆ ಮಾಡಿದೆ.
ಲಾಕ್ ಡೌನ್ ಕಾರಣದಿಂದ ದೇಶಾದ್ಯಂತ ಹಲವಾರು ಉದ್ಯಮಗಳು ನಷ್ಟ ಅನುಭವಿಸಿದ್ದವು. ಆದರೆ ಪಾರ್ಲೆ ಜಿ ಈ ಸಮಯದಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡಿದೆ. ಹೇಗೆಂದರೇ ಕೇವಲ 5-10 ರೂ.ಗಳಿಗೆ ದೊರಕುವ ಈ ಬಿಸ್ಕತ್ತು ಗಳು ಅದೆಷ್ಟೋ ಕಾರ್ಮಿಕರಿಗರಿಗೆ ಸಂಜೀವಿನಿ ಆಗಿದ್ದವು. ಕಾಲ್ನಡಿಗೆಯಲ್ಲಿ ಹೊರಟವರಿಗೆ ಈ ಬಿಸ್ಕತ್ತು ಆಸರೆಯಾದರೆ, ಇನ್ನು ಹಲವಾರು ಜನರು ಲಾಕ್ ಡೌನ್ ಸಮಯದಲ್ಲಿ ಆಹಾರ ಕೊರತೆ ಉಂಟಾಗಬಹುದು ಎಂದು ಮನೆಯಲ್ಲಿ ಸಂಗ್ರಹಿಸಿದ್ದರು. ಮಾತ್ರವಲ್ಲದೆ ಇತರ ಕಂಪೆನಿಗಳ ಬಿಸ್ಕೆಟ್ ಉತ್ಪನ್ನಗಳು ದಿಢೀರ್ ಬೆಲೆ ಹೆಚ್ಚಳವಾದ್ದರಿಂದ ಬಹುತೇಕರು ಪಾರ್ಲೆ ಜಿಯತ್ತ ಮುಖ ಮಾಡಿದ್ದರು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಬಿಸ್ಕೆಟ್ ಹೆಚ್ಚಿನ ಮಾರಾಟ ಕಂಡಿದ್ದು 8 ದಶಕದಲ್ಲಿ ಕಂಡ ಅತ್ಯುತ್ತಮ ಬೆಳವಣಿಗೆಯಾಗಿದೆ. ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಕಾರಣ ಕಂಪೆನಿಯ ಶೇರುಗಳ ಮೌಲ್ಯ ಶೇ 5 % ಹೆಚ್ಚಳವಾಗಿದೆ. ಮಾರಾಟ ದರ ಕೂಡ ಶೇ. 80 ರಿಂದ ಶೇ. 90ಕ್ಕೆ ಏರಿಕೆಯಾಗಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ. ಅದಾಗ್ಯೂ ಕಂಪೆನಿ ನಿರ್ದಿಷ್ಟ ಮಾರಾಟ ಅಂಕಿ ಅಂಶಗಳನ್ನು ಬಹಿರಂಗಪಡಿಸಿಲ್ಲ.
ಪಾರ್ಲೆ ಕಂಪೆನಿ ಪ್ರಸ್ತುತ ಭಾರತದಾದ್ಯಂತ 130 ಕಾರ್ಖಾನೆಗಳನ್ನು ಹೊಂದಿದ್ದು, ಅವುಗಳಲ್ಲಿ 120 ನಿರಂತರವಾಗಿ ಉತ್ಪಾದನೆ ನಡೆಸುತ್ತಿದೆ. ಪಾರ್ಲೆ-ಜಿ ಬ್ರಾಂಡ್ ‘ಪ್ರತಿ ಕೆ.ಜಿ.ಗೆ 100 ರೂ.ಗಿಂತ ಕಡಿಮೆ’ ಕೈಗೆಟುಕುವ ಬೆಲೆಗೆ ಸಿಕ್ಕುತ್ತದೆ. ಲಾಕ್ ಡೌನ್ ಸಮಯದಲ್ಲಿ ಬ್ರಿಟಾನಿಯಾದ ಗುಡ್ ಡೇ, ಟೈಗರ್, ಮಿಲ್ಕ್ ಬಿಕಿಸ್, ಬಾರ್ಬರ್ನ್ ಮತ್ತು ಮಾರಿ ಬಿಸ್ಕಟ್ ಗಳು ಕೂಡ ಅಧಿಕ ಮಾರಾಟಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.