ಆ್ಯಂಬುಲೆನ್ಸ್ ಚಾಲಕನಿಗೆ ನೀರು ನೀಡಲು ನಿರಾಕರಣೆ: ದೂರು
Team Udayavani, Jun 10, 2020, 9:59 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಆ್ಯಂಬುಲೆನ್ಸ್ ಚಾಲಕರೊಬ್ಬರಿಗೆ ಅಂಗಡಿಯೊಂದರ ಮಾಲಕ ನೀರಿನ ಬಾಟಲ್ ನೀಡಲು ನಿರಾಕರಿಸಿ, ನಿಂದಿಸಿದ ಆರೋಪ ವ್ಯಕ್ತವಾಗಿದ್ದು, ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ. ಸುಳ್ಯದ ಆ್ಯಂಬುಲೆನ್ಸ್ ಚಾಲಕ ಅಭಿಲಾಷ್ ಅವರು ಅಸೌಖ್ಯಕ್ಕೊಳಗಾಗಿದ್ದ ರೋಗಿಯೋ ರ್ವವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬಂದಿದ್ದರು. ಬೆಳಗ್ಗಿನ ಜಾವ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಕುಡಿಯಲು ನೀರು ಅವಶ್ಯ ವಿದ್ದುದರಿಂದ ಅಭಿಲಾಷ್ ಫಳ್ನೀರ್ನಲ್ಲಿರುವ ಅಂಗಡಿಯೊಂದಕ್ಕೆ ತೆರಳಿ ಹಣ ನೀಡಿ ನೀರು ಕೇಳಿದಾಗ ಅಂಗಡಿಯಲ್ಲಿದ್ದಾತ ಕೋವಿಡ್ ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್ ಚಾಲಕರಿಗೆ ನೀರಿನ ಬಾಟಲಿ ಕೊಡುವುದಿಲ್ಲ. ನೀವು ಊರಿಗೆ ಕೋವಿಡ್ ವೈರಸ್ ಹರಡುತ್ತಿದ್ದೀರಿ ಎಂದು ನಿಂದಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ರೀತಿಯ ವರ್ತನೆ ನೋವು ತಂದಿದೆ ಎಂದು ಚಾಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.