ಸರ್ವರ್ ಸಮಸ್ಯೆಯಿಂದ ರೈತರು ಸುಸ್ತೋ ಸುಸ್ತು ..!
ಸಾಲಕ್ಕೆ ಬೇಕೆ ಬೇಕು ಆಸ್ತಿಯ ಋಣಭಾರ ಪತ್ರ
Team Udayavani, Jun 10, 2020, 11:38 AM IST
ನವಲಗುಂದ: ಬೆಳೆಸಾಲ, ಮನೆಸಾಲ ಪಡೆಯಲು ಬ್ಯಾಂಕ್‌ನವರು ಆಸ್ತಿಯ ಋಣಭಾರ ಪತ್ರ ಕೇಳುತ್ತಿದ್ದು, ಸರ್ವರ್ ಸಮಸ್ಯೆಯಿಂದ ರೈತರು, ಸಾರ್ವಜನಿಕರು ಅಲೆಯುತ್ತಿರುವುದು ಸಾಮಾನ್ಯವಾಗಿದೆ.
ಈ ಮೊದಲು ಆಸ್ತಿಯ ಋಣಭಾರ ಪತ್ರವನ್ನು ಸಬ್ ರಜಿಸ್ಟರ್ ಆಫೀಸಿನಲ್ಲಿ ಪೂರೈಸುತ್ತಿದ್ದರು. ಆನ್ ಲೈನ್‌ನಲ್ಲಿ ಅರ್ಜಿ ಹಾಕಿ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಇದು ದುಸ್ತರವಾಗಿದ್ದು, ಕಚೇರಿ, ಬ್ಯಾಂಕ್‌ಗಳಿಗೆ ಆಲೆಯುವುದು ತಪ್ಪಿಲ್ಲ. ಆಸ್ತಿಯ ಋಣಭಾರಕ್ಕೆ ಒಂದು ತಿಂಗಳಿಂದ ಅಲೆದಾಡುತ್ತಿದ್ದೇನೆ. ಸಬ್ ರಜಿಸ್ಟರ್ ಕಾರ್ಯಾಲಯದಲ್ಲಿ ಆನ್‌ಲೈನ್ ಮಾಡಬೇಕೆಂದು ಅರ್ಜಿ ತೆಗೆದುಕೊಳ್ಳಲಿಲ್ಲ. ನಂತರ ಪ್ರಯತ್ನಿಸಿದರೂ ಸರ್ವರ್ ಸಮಸ್ಯೆಯಿಂದ ಆಸ್ತಿಯ ಋಣಭಾರ(ಇ.ಸಿ)ಸಿಗಲಿಲ್ಲ. ಸಬ್ ರಜಿಸ್ಟರ್ ಕಾರ್ಯಾಲಯದಲ್ಲಿ ಸೋಮವಾರ ಅರ್ಜಿ ತೆಗೆದುಕೊಂಡಿದ್ದು, ಜೂ.17ಕ್ಕೆ ನನಗೆ ಆಸ್ತಿಯ ಋಣಭಾರ ಪೂರೈಸಲಾಗುವುದೆಂದು ಹೇಳಿದ್ದಾರೆ ಎನ್ನುತ್ತಾರೆ ಅಳಗವಾಡಿ ರೈತ ಎಸ್.ಐ.ಹಿರೇಮಠ. ಬ್ಯಾಂಕ್ ಸಾಲ ಪಡೆದು ಬೀಜ, ಗೊಬ್ಬರ ಇತರೆ ಖರ್ಚು ಮಾಡಬೇಕೆಂದರೆ ಅಸಲು ಬಡ್ಡಿ ಕಟ್ಟಿದರೆ ಮಾತ್ರ ಸಾಲ ಸಿಗುತ್ತದೆ. ಇಲ್ಲವಾದರೆ ಸಾಲ ಇಲ್ಲವೇ ಇಲ್ಲ. ಬ್ಯಾಂಕ್‌ನಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ.ಅವರು ಹೇಳಿದ ರೈತರಿಗೆ ಹೆಚ್ಚಿನ ಸಾಲ ಸಿಗುತ್ತದೆ. ಸಾಮಾನ್ಯ ರೈತರು ಬ್ಯಾಂಕ್ ಅಧಿ ಕಾರಿಗಳ ಹತ್ತಿರ ಹೋದರೆ ನಿಯಮಗಳನ್ನು ಹೇಳಿ ಕಳಿಸುತ್ತಾರೆ. ಬಡ್ಡಿ ತೆಗೆದುಕೊಂಡು ಸಾಲ ಮರು ಚಾಲನೆ ಸಹ ಮಾಡುತ್ತಿಲ್ಲ ಇದರಿಂದ ರೈತನ ಪರಿಸ್ಥಿತಿ ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಅಳಗವಾಡಿ ರೈತ ಬಸಣ್ಣ ಬೆಳವಣಕಿ.
ಆಸ್ತಿಯ ಋಣಭಾರ ಪಡೆಯಲು ಯಾವುದೇ ತೊಂದರೆ ಇಲ್ಲ. ಆನ್‌ಲೈನ್ ಅರ್ಜಿ ಹಾಕಿ ಪಡೆಯಬಹುದೆಂಬ ಆದೇಶ ಇದೆ. ಒಂದು ವೇಳೆ ಆನ್‌ಲೈನ್ ಸರ್ವರ್ ಸಮಸ್ಯೆ ಇದ್ದರೆ ನಮ್ಮ ಕಾರ್ಯಾಲಯದಲ್ಲಿ ಫಾರ್ಮ್ ನಂ 22 ತುಂಬಿ ಕೊಟ್ಟರೆ ಅವರಿಗೆ ಆಸ್ತಿಯ ಋಣಭಾರವನ್ನು ನಾವೇ ಪೂರೈಸುತ್ತೇವೆಂದು ಸಬ್ ರಜಿಸ್ಟ್ರರ್ ಆಫೀಸಿನ ಹಿರಿಯ ನೋಂದಣಾಧಿಕಾರಿ ಸುಭಾಷ ಸೊಬರದ ಹೇಳುತ್ತಾರೆ.
-ಪುಂಡಲೀಕ ಮುಧೋಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.