ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ಬಾರಿ ನಾಯಕರೇ ಇಲ್ಲ!
Team Udayavani, Jun 10, 2020, 2:25 PM IST
ಸಾಂದರ್ಭಿಕ ಚಿತ್ರ
ಸೆ.22ರಂದು ಅಧಿವೇಶನ ನಡೆಯ ಬೇಕಿತ್ತು. ಈಗ ಎಲ್ಲ ದೇಶಗಳಲ್ಲೂ ಸೋಂಕಿನ ಭೀತಿ ಇರುವುದರಿಂದ ಸಭೆ ನಡೆಯುವುದೂ ಅನುಮಾನ.
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿವಿಧ ದೇಶ ಗಳ ನಾಯಕರು ಭಾಗಿ ಯಾಗುವುದು ಅನುಮಾನ. ಕಾರಣ ಕೋವಿಡ್ ಭೀತಿ! ಸೆಪ್ಟಂಬರ್‌ನಲ್ಲಿ ನ್ಯೂಯಾರ್ಕಿನ ವಿಶ್ವಸಂಸ್ಥೆ ಕಟ್ಟದಲ್ಲಿ ಅಧಿವೇಶನ ನಡೆಯ ಬೇಕಿದ್ದು, ನಾಯಕರು ಭಾಗಿಯಾಗಲು ಸಾಧ್ಯವಾಗುವುದು ತೀವ್ರ ಅನುಮಾನವಾಗಿದೆ.
ಆದರೆ ಅಧಿವೇಶನ ಮುಂದಕ್ಕೆ ಹೋಗ ಲಿದೆಯೇ? ಅಥವಾ ಆನ್‌ಲೈನ್ ಮೂಲಕ ಅಧಿವೇಶನ ನಡೆಯಲಿದೆಯೇ ಎಂಬುದೂ ಸ್ಪಷ್ಟಗೊಂಡಿಲ್ಲ. ಒಂದು ದೇಶದ ನಾಯಕ ಆಗಮಿಸುವಾಗ ಅವರೊಂದಿಗೆ ಹಲವು ಮಂದಿಯ ನಿಯೋಗವೂ ಇರುತ್ತದೆ. ದೊಡ್ಡ ತಂಡಗಳು ಆಗಮಿಸುವ ವೇಳೆ ಸುರಕ್ಷತೆ ಪ್ರಶ್ನೆ ಎದುರಾಗಬಹುದು. ಆದ್ದರಿಂದ ವಿಶ್ವಸಂಸ್ಥೆ ಸಭೆ ನಡೆಯುವುದೇ ಅನುಮಾನವಾಗಿದೆ ಎಂದು ಸಾಮಾನ್ಯ ಸಭೆಯ ಅಧ್ಯಕ್ಷರಾಗಿರುವ ನೈಜೀರಿಯಾದ ತಿಜ್ಜಿನಿ ಮೊಹಮ್ಮದ್ ಬಂದೆ ಹೇಳಿದ್ದಾರೆ.
ಕೋವಿಡ್ ಭೀತಿ ಇಲ್ಲದೇ ಹೋಗಿದ್ದರೆ ಸೆ.22ರಂದು ಅಧಿವೇಶನ ನಡೆಯಬೇಕಿತ್ತು. ಈಗ ಎಲ್ಲ ದೇಶಗಳಲ್ಲೂ ಸೋಂಕಿನ ಭೀತಿ ಇರುವುದರಿಂದ ಸಭೆ ನಡೆಯುವುದೂ ಅನುಮಾನ, ನಾಯಕರು ಬರುವುದೂ ಇನ್ನೂ ಅನುಮಾನವಾಗಿದೆ. ಆದ್ದರಿಂದ ಸಾಮಾನ್ಯ ಸಭೆ ಕುರಿತಾಗಿ ಮುಂದೇನು ಮಾಡಬಹಬುದು? ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ಇಂತಹದ್ದೊಂದು ಸಂದಿಗ್ಧ ಪರಿಸ್ಥಿತಿ ವಿಶ್ವಸಂಸ್ಥೆಯ ಇತಿಹಾಸದಲ್ಲಿ ಕಳೆದ 74 ವರ್ಷಗಳಲ್ಲಿ ಉದ್ಭವವಾಗಿಲ್ಲ ಎಂದು ಹೇಳ್ದಿರೆ.
ಮುಂದಿನ ನಡೆಗಳೇನು? ಸಭೆಯ ಬಗ್ಗೆ ಏನು ತೀರ್ಮಾನ ಕೈಗೊಳ್ಳಬಹುದು ಎಂಬುದರ ಬಗ್ಗೆ ಸದಸ್ಯ ರಾಷ್ಟ್ರಗಳೊಂದಿಗೆ ವಿಶ್ವಸಂಸ್ಥೆ ಕಾರ್ಯದರ್ಶಿ ಎರಡು ವಾರಗಳಲ್ಲಿ ಚರ್ಚೆ ನಡೆಸಿ ತೀರ್ಮಾನಿಸುವ ಸಾಧ್ಯತೆಯಿದೆ. ಕಳೆದ ತಿಂಗಳು ಈ ವಿಚಾರದಲ್ಲಿ ಬಂದೆ ಅವರಿಗೆ ಮು. ಕಾರ್ಯದರ್ಶಿ ಆ್ಯಂಟಾನಿಯೋ ಗುಟೆರರ್ಸ್ ಅವರು ಪತ್ರ ಬರೆದಿದ್ದು ಸಾಂಪ್ರದಾಯಿಕ ಸಭೆ ಬದಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಪತ್ರ ಬರೆದಿದ್ದರು. ವಿಶ್ವದ ನಾಯಕರ ಮುದ್ರಿತ ಧ್ವನಿ ಪ್ರಸಾರವನ್ನು ಮಾಡುವುದು, ಅಥವಾ ವೀಡಿಯೋ ಕಾನ್ಫರೆನ್ಸ್ ರೀತಿ ಕ್ರಮಕೈಗೊಳ್ಳುವುದು ಇತ್ಯಾದಿಗಳನ್ನು ಮಾಡಬಹುದು ಎಂದು ಸಲಹೆ ನೀಡಿದ್ದರು. ಅಲ್ಲದೇ ಆಯಾ ದೇಶದ ಮುಖ್ಯಸ್ಥರು ಸಭೆಗೆ ಆಗಮಿಸಿದರೂ ಅವರ ಒಬ್ಬ ಅಧಿಕಾರಿಗೆ ಸಭೆಯ ಹಾಲ್‌ನಲ್ಲಿ ಅನುಮತಿಸುವುದನ್ನು ಮಾಡಬಹುದು ಎಂದು ಹೇಳಿದ್ದರು.
ಸಾಮಾನ್ಯವಾಗಿ ಸಾಮಾನ್ಯ ಸಭೆಯಲ್ಲಿ ಕಲಾಪಗಳು ಒಂದು ವಾರಕ್ಕೂ ಹೆಚ್ಚು ಕಾಲ ನಡೆಯುತ್ತವೆ. ಸಾಮಾನ್ಯ ಸಭೆ ಹಾಲ್‌ನಲ್ಲಿ 193 ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಮಾತನಾಡುತ್ತಾರೆ. ಕೋವಿಡ್‌ನಿಂದಾಗಿ ಜಗತ್ತು ಸಾಮಾನ್ಯ ಸ್ಥಿತಿಗೆ ಯಾವಾಗ ಮರಳುತ್ತದೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಲಾಗದ ಸ್ಥಿತಿಯಲ್ಲಿದೆ. ಆದ್ದರಿಂದ ಸಭೆ ನಡೆಯುವುದೇ ಅನುಮಾನ. ದೊಡ್ಡ ಪ್ರಮಾಣದಲ್ಲಿ ಭದ್ರತಾ ಸಿಬಂದಿ, ಪರಿಚಾರಕರು, ನಿಯೋಗ, ವಿವಿಧ ಅಧಿಕಾರಿಗಳು ಈ ವೇಳೆ ನ್ಯೂಯಾರ್ಕ್‌ನಲ್ಲಿ ನೆರೆಯುವುದರಿಂದ ಸಭೆ ನಡೆಸುವುದೂ ಕಷ್ಟಕರವಾಗಿದೆ, ಹಾಗಂತ ವರ್ಷದ ಈ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವುದೂ ಅಷ್ಟು ಸುಲಭದ ಮಾತಲ್ಲ ಎಂಬ ಇಂಗಿತ ವಿಶ್ವಸಂಸ್ಥೆಯಿಂದ ವ್ಯಕ್ತವಾಗಿದೆ. ನ್ಯೂಯಾರ್ಕ್‌ನಲ್ಲಿ 3 ಲಕ್ಷ ದಾಟಿದ ಕೇಸು: ಸದ್ಯ ನ್ಯೂಯಾರ್ಕ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 3.78 ಲಕ್ಷದ ಗಡಿ ದಾಟಿದೆ. ಸುಮಾರು 24 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 67 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.