ಗೂಗಲ್ ಮ್ಯಾಪ್ಗೆ ಅಮಿತಾಭ್ ಧ್ವನಿ?
Team Udayavani, Jun 10, 2020, 8:59 PM IST
ವಾಷಿಂಗ್ಟನ್: ಗೂಗಲ್ ಕಂಪನಿಯು ತನ್ನ ವಿಶ್ವವಿಖ್ಯಾತ ಅಪ್ಲಿಕೇಷನ್ ಆದ “ಗೂಗಲ್ ಮ್ಯಾಪ್’ನ “ವಾಯ್ಸ ನೇವಿಗೇಟರ್’ನ ಹಿಂದಿ ಆವೃತ್ತಿಯನ್ನು ಹೊರತರಲು ನಿರ್ಧರಿಸಿದ್ದು, ಅದಕ್ಕೆ ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ.
ಸದ್ಯಕ್ಕೆ ಭಾರತದಲ್ಲಿ ನೇವಿಗೇಟರ್ನ ಇಂಗ್ಲೀಷ್ ಆವೃತ್ತಿ ಬಳಕೆಯಲ್ಲಿದ್ದು, ಅದರಲ್ಲಿ ಅಮೆರಿಕದ ಹಾಡುಗಾರ್ತಿ ಕರೆನ್ ಜಾಕೋಬೆÕನ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ.
ಅದರ ಹಿಂದಿ ಆವೃತ್ತಿಗೆ ಅಮಿತಾಭ್ ಬಚ್ಚನ್ ಅವರ ಧ್ವನಿಯಿರಲಿ ಎಂದು ಕಂಪನಿ ಬಯಸಿದೆ. ಈಗಾಗಲೇ ಬಿಗ್ ಬಿ ಅವರನ್ನು ಈ ಕುರಿತಂತೆ ಸಂಪರ್ಕಿಸಲಾಗಿದೆಯಾದರೂ ಬಚ್ಚನ್ ಅವರಿಂದ ಇನ್ನೂ ಸಮ್ಮತಿ ಸಿಕ್ಕಿಲ್ಲ. ಆದರೆ, ಅವರ ಧ್ವನಿಯನ್ನೇ ಬಳಸಿಕೊಳ್ಳುವ ಒತ್ತಾಸೆಯಲ್ಲಿರುವ ಕಂಪನಿ, ಅವರಿಗೆ ದುಬಾರಿ ಸಂಭಾವನೆಯನ್ನೂ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.