ಮಣ್ಣಿನ ಪರೀಕ್ಷೆ, ಪೋಷಕಾಂಶಗಳ ನಿರ್ವಹಣೆ ಅಗತ್ಯ

ಸಾವಯವ ಗೊಬ್ಬರದಿಂದ ಉತ್ತಮ ಫ‌ಸಲು

Team Udayavani, Jun 11, 2020, 5:55 AM IST

ಮಣ್ಣಿನ ಪರೀಕ್ಷೆ, ಪೋಷಕಾಂಶಗಳ ನಿರ್ವಹಣೆ ಅಗತ್ಯ

ಕೋಟ: ರೈತ ಇಂದು ಹೆಚ್ಚಿನ ಇಳುವರಿ ಪಡೆಯಲು ಬಯಸುತ್ತಾನೆ ಕಡಿಮೆ ಶ್ರಮ, ಖರ್ಚಿನಲ್ಲಿ ಬೇಸಾಯ ಮಾಡಲು ಇಚ್ಛಿಸುತ್ತಾನೆ. ಇದು ಸಾಧ್ಯವಾಗಬೇಕಾದರೆ ಮಣ್ಣಿನ ಪರೀಕ್ಷೆ, ಪೋಷಕಾಂಶಗಳ ನಿರ್ವಹಣೆ ಸಹಿತ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಅಗತ್ಯ.

ಮಾನವನ ದೇಹದಲ್ಲಿ ಹಲವಾರು ಖಾಯಿಲೆಗಳು, ಸಮಸ್ಯೆಗಳು ಕಾಡುವಂತೆ ಭೂಮಿಯ ಮಣ್ಣಿನಲ್ಲೂ ಹಲವಾರು ಸಮಸ್ಯೆಗಳಿರುತ್ತದೆ. ಮಾನವ ಹೇಗೆ ಕಾಲ-ಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ತಕ್ಕಂತೆ ಔಷಧೋಪಚಾರದ ಮೂಲಕ ಸ್ವಸ್ಥನಾಗುತ್ತಾನೆಯೋ, ಅದೇ ರೀತಿ ರೈತನಾದವನು ನಿಗದಿತ ಸಮಯಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿ ಸಮಸ್ಯೆಯನ್ನು ಗುರುತಿಸಿ ಅಗತ್ಯ ಪೋಷಕಾಂಶಗಳನ್ನು ನೀಡಿದಲ್ಲಿ ಉತ್ತಮ ಇಳುವರಿಗೆ ಪೂರಕವಾಗುತ್ತದೆ. ಮುಂಗಾರು ಬೆಳೆಯ ಸಂದರ್ಭ ಭೂಮಿಗೆ ಅಧಿಕವಾದ ಪೋಷಕಾಂಶಗಳು ಅಗತ್ಯವಿರುವುದರಿಂದ ಮಣ್ಣಿನಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಆರೈಕೆ ಮಾಡುವುದು ಅತೀ ಆವಶ್ಯಕ.

ಅಗತ್ಯ ಪೋಷಕಾಂಶ ಗುರುತಿಸುವಿಕೆ
ಕೆಲವು ಮಂದಿ ರೈತರು ಭೂಮಿಗೆ ರಾಸಾಯನಿಕ ಅಥವಾ ಸಾವಯವ ಸಾರವನ್ನು ಹೇರಳ ಪ್ರಮಾಣದಲ್ಲಿ ಬಳಕೆ ಮಾಡಿದರೂ ಉತ್ತಮ ಫಸಲು ಸಿಗಲಿಲ್ಲ ಎಂದು ಕೊರಗುತ್ತಾರೆ. ಆದರೆ ಯಾವುದೇ ಭೂಮಿಯಲ್ಲಿ ಉತ್ತಮ ಇಳುವರಿ ಬರಬೇಕಾದರೆ ಮಣ್ಣಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಕಾಲ ಕಾಲಕ್ಕೆ ಅಗತ್ಯನುಸಾರ ನೀಡಬೇಕಾಗುತ್ತದೆ. ಒಟ್ಟಾರೆಯಾಗಿ ಹೇರಳ ಪ್ರಮಾಣದ ಗೊಬ್ಬರ, ರಾಸಾಯನಿಕ ಬಳಕೆ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಮಿತಿಮೀರಿ ರಾಸಾಯನಿಕಗಳ ಬಳಕೆಯಿಂದಲೂ ಮಣ್ಣಿನ ಆರೋಗ್ಯ ಹದಗೆಟ್ಟು ಕಾಲಕ್ರಮೇಣ ಇಳುವರಿ ಕುಂಠಿತವಾಗುತ್ತದೆ.

ಭತ್ತದ ಬೆಳೆಗೆ ಕೊಟ್ಟಿಗೆ ಗೊಬ್ಬರ ವರದಾನ
ಭತ್ತದ ಬಿತ್ತನೆಯ 10-15 ದಿವಸಗಳ ಮುಂಚೆ ಅಗತ್ಯ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಭೂಮಿಗೆ ಸೇರಿಸುವುದರಿಂದ ನೀರು ಹಿಡಿದಿಟ್ಟುಕೊಳ್ಳುವಿಕೆ, ಪೋಷಕಾಂಶಗಳು ನಷ್ಟವಾಗದ ಹಾಗೆ ತಡೆಗಟ್ಟಲು ಹಾಗೂ ಮಣ್ಣಿನ ಕಣಗಳ ರಚನೆಗೆ ಸಹಕಾರಿಯಾಗಿರುತ್ತದೆ ಹಾಗೂ ಉತ್ತಮ ಫಸಲಿಗೂ ಪೂರಕ. ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿತಗೊಳಿಸಬಹುದು.

ಕಡಿಮೆ ಖರ್ಚಿನ ನೇರ
ಬಿತ್ತನೆ ವಿಧಾನ
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆಯಿಂದ ಕೃಷಿಭೂಮಿ ಹಡೀಲು ಹಾಕಲಾಗುತ್ತಿದೆ. ಸಾಂಪ್ರಾದಾಯಿಕ ವಿಧಾನದಲ್ಲಿ ಭತ್ತ ಬೆಳೆಯಲು ಹೆಚ್ಚು ಕಾರ್ಮಿಕರ ಅಗತ್ಯ ಮತ್ತು ಶ್ರಮದಾಯಕವಾಗಿರುವುದು ಇದಕ್ಕೆ ಕಾರಣ. ಹೀಗಾಗಿ ನೇರ ಬಿತ್ತನೆ ಇದಕ್ಕೆ ಸುಲಭ ವಿಧಾನವಾಗಿದೆ. ನೇರ ಬಿತ್ತನೆ ವಿಧಾನದಲ್ಲಿ ಕೂರಿಗೆ, ಸಾಲು ಬೀಜ ಹಾಗೂ ಬಿತ್ತನೆ ಪ್ರಮುಖ ವಿಧಾನಗಳಾಗಿದೆ.

ಮಣ್ಣಿನ ಪರೀಕ್ಷೆ ಹೇಗೆ ?
ಕೃಷಿ ವಿಜ್ಞಾನಿಗಳನ್ನು ನೇರವಾಗಿ ಜಮೀನಿಗೆ ಕರೆತಂದು ಮಣ್ಣಿನ ಪರೀಕ್ಷೆ ನಡೆಸಬಹುದು ಅಥವಾ ಭೂಮಿಯ ಮಣ್ಣನ್ನು ಶೇಖರಿಸಿ ಸಮೀಪದ ಕೃಷಿ ಕೇಂದ್ರಗಳಿಗೆ ನೀಡಿದಲ್ಲಿ 10-15 ದಿನಗಳಲ್ಲಿ ಪರೀಕ್ಷೆ ನಡೆಸಿ ಮಣ್ಣಿನಲ್ಲಿನ ಸಮಸ್ಯೆ ಹಾಗೂ ಯಾವ ಪೋಷಕಾಂಶಗಳನ್ನು ಬಳಕೆ ಮಾಡಬೇಕು ಎನ್ನುವ ವಿವರ ರೈತರ ಕೈ ಸೇರುತ್ತದೆ.

2-3 ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಿ
ಮಣ್ಣಿನಲ್ಲಿನ ಗುಣಾಂಶಗಳು ಆಗಾಗ ಬದಲಾಗುತ್ತಿರುತ್ತದೆ. ಆದ್ದರಿಂದ ಕನಿಷ್ಠ ಎರಡು-ಮೂರು ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸಿ ಸಮಸ್ಯೆ ಗುರುತಿಸಿ ಅಗತ್ಯ ಪೋಷಕಾಂಶ ನೀಡಿದರೆ ಉತ್ತಮ ಫಸಲು ಲಭ್ಯವಾಗುತ್ತದೆ. ಈ ಕುರಿತು ಎಲ್ಲ ರೈತರು ಗಮನಹರಿಸಬೇಕು ಹಾಗೂ ಭತ್ತದ ಬೆಳೆಗೆ ಪೂರಕವಾಗುವ ವಿಧಾನಗಳ ಕುರಿತು ತಿಳಿದುಕೊಳ್ಳಬೇಕು.
-ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ

ಟಾಪ್ ನ್ಯೂಸ್

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.