ಒಂಭತ್ತು ಸಾವಿರ ಕಾರ್ನರ್ ಸೈಟ್ ಡೌಟು?
Team Udayavani, Jun 11, 2020, 5:28 AM IST
ಬೆಂಗಳೂರು: ಆರ್ಥಿಕ ಸುಧಾರಣೆಗೆ ಸರ್ಕಾರವು ಬಿಡಿಎ ಮೂಲೆ ನಿವೇಶನ ಹರಾಜಿಗೆ ಮುಂದಾಗಿದ್ದು, ಕೆಲ ಕಾನೂನಿನ ಅಡ್ಡಿ ಎದುರಾಗಿದೆ. ಕೆಲ ನಿವೇಶನ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದು, ಮೂಲೆ ನಿವೇಶನ ಹಗರಣ ಸಂಬಂಧ ಎಸಿಬಿ ವರದಿ ಸಲ್ಲಿಸಿಲ್ಲ. ಇದರ ನಡುವೆಯೇ ಎಷ್ಟು ಮೂಲೆ ನಿವೇಶನಗಳಿವೆ ಎಂಬ ಪಟ್ಟಿ ಮಾಡಲಾಗುತ್ತಿದ್ದು, ತಿಂಗಳಾಂತ್ಯದೊಳಗೆ ಪಟ್ಟಿ ಸಿದ್ಧವಾಗಲಿದೆ.
ಮೂಲೆ ನಿವೇಶನಗಳು ಎಷ್ಟಿವೆ ಎಂಬುದರ ಬಗ್ಗೆ ಕೆಲ ಗೊಂದಲಗಳಿದ್ದು, ವರದಿ ಸಿದ್ಧಪಡಿಸಿದ ನಂತರ ಗೊಂದಲಕ್ಕೆ ತೆರೆ ಬೀಳಲಿದೆ. ಆದರೆ, ಸರ್ಕಾರ ನಿರೀಕ್ಷಿಸಿ ದಷ್ಟು ಅಂದರೆ 8-9 ಸಾವಿರ ಮೂಲೆ ನಿವೇಶನಗಳು ಸಿಗುವುದು ಅನುಮಾನ. ಗೊಂದಲ ಮತ್ತು ಹಗರಣ ಗಳಿಗೆ ಸಂಬಂಧಪಟ್ಟ ನಿವೇಶನಗಳನ್ನು ಹೊರತುಪಡಿಸಿ, ಅಬ್ಬಬ್ಟಾ ಎಂದರೆ ಸುಮಾರು ನಾಲ್ಕು ಸಾವಿರ ನಿವೇಶನಗಳು ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಎಂಜಿನಿಯರಿಂಗ್ ವಿಭಾಗವು ಮಾಹಿತಿ ಕಲೆ ಹಾಕುತ್ತಿದ್ದು, ಬನಶಂಕರಿ 6ನೇ ಹಂತ, ಅಂಜನಾಪುರ, ವಿಶ್ವೇಶ್ವರ ಲೇಔಟ್ ಸೇರಿ ಹೊಸ ಬಡಾವಣೆಗಳಲ್ಲಿ ಮೂಲೆ ನಿವೇಶನ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯಗಳಿಲ್ಲ. ಹಳೇ ಬಡಾವಣೆಗಳಲ್ಲಿನ ಕಾರ್ನರ್ ಸೈಟಿಗೆ ಸಂಬಂಧಿಸಿ ಸುಮಾರು 25-30 ವ್ಯಾಜ್ಯಗಳಿರಬಹುದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈವರೆಗೆ 64 ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ್ದು, ಯಾವ ಬಡಾವಣೆಗಳಲ್ಲಿ ಎಷ್ಟು ಕಾರ್ನರ್ ಸೈಟ್ ದೊರೆಯಲಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಸಂಬಂಧಿತ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ.
ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಸೈಟ್‌ಗಳನ್ನು ಹೊರತುಪಡಿಸಿ ಉಳಿದವುಗಳ ಪಟ್ಟಿ ಮಾಡಿ ವರದಿ ಸಿದ್ಧಪಡಿಸಲಾಗುವುದು. ಈ ಪ್ರಕ್ರಿಯೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹರಾಜಿಗೆ ಎಸಿಬಿ ತನಿಖೆ ಅಡ್ಡಿ?: ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಮೂಲೆ ನಿವೇಶನ ಮಾರಾಟದ ಅವ್ಯವಹಾರವನ್ನು 2019 ಸೆಪ್ಟೆಂಬರ್‌ನಲ್ಲಿ ಬಿಜೆಪಿ ಸರ್ಕಾರ ಎಸಿಬಿ ತನಿಖೆಗೆ ವಹಿಸಿದೆ. ಎರಡು ತಿಂಗಳಲ್ಲಿ ವರದಿ ನೀಡುವಂತೆ ತಿಳಿಸಿದ್ದರೂ, ಈವರೆಗೆ ವರದಿ ನೀಡಿಲ್ಲ. ತನಿಖೆ ಅಪೂರ್ಣವಾಗಿದೆ. ಇದರಿಂದ ಕೆಲ ಸೈಟ್‌ಗಳನ್ನು ಹರಾಜು ಮಾಡಲಾಗುತ್ತಿಲ್ಲ. ಜತೆಗೆ ಒಂದಿಷ್ಟು ಸೈಟ್‌ಗಳ ಮಾಲೀಕತ್ವದ ಕುರಿತ ಪ್ರಕರಣಗಳು ಕೋರ್ಟ್‌ನಲ್ಲಿವೆ. ಇಷ್ಟೇ ಸಂಖ್ಯೆಯ ಸೈಟ್‌ಗಳು ಒತ್ತುವರಿಗೆ ಒಳಗಾಗಿವೆ. ವಸ್ತುಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿಗಳ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಲು ಕಷ್ಟ ಎಂಬ ಮಾತು ಕೇಳಿಬರುತ್ತಿವೆ.
ಕಾರ್ನರ್ ಸೈಟ್ ವಿಭಾಗಿಸಿದ ಹಗರಣ: ಬಿಡಿಎಗೆ ಸೇರಿದ ಕಾರ್ನರ್ ಸೈಟ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವಂತಹದ್ದು. ಇದರಿಂದಾಗಿ ಇವುಗಳ ಬೆಲೆ ಅಧಿಕವಾಗಿರುತ್ತವೆ. ಇಂತಹ ಸೈಟ್‌ಗಳನ್ನು ಹರಾಜಿನ ಮೂಲಕ ಮಾತ್ರ ಪಡೆಯಲು ಸಾಧ್ಯ. ಕೆಲ ವರ್ಷಗಳಿಂದ ಇಂತಹ ಆಯಕಟ್ಟಿನ ಜಾಗವನ್ನು ತಮ್ಮದಾಗಿಸಿಕೊಳ್ಳಲು ಪಟ್ಟಭದ್ರರು ಪ್ರಾಧಿಕಾರದ ಸಿಬ್ಬಂದಿ ಜತೆ ಶಾಮೀಲಾಗಿ ಹಗರಣ ಸೃಷ್ಟಿಸಿದ್ದಾರೆ. ಕಾರ್ನರ್ ಸೈಟ್ ವಿಭಜಿಸಿ ಒಂದು ಭಾಗವನ್ನು ವಾಸದ ನಿವೇಶನಗಳನ್ನಾಗಿಸಿ, ಅವುಗಳನ್ನು ಬದಲಿ ಸೈಟ್ ರೂಪದಲ್ಲಿ ಹಂಚಿಕೆ ಮಾಡಲಾಗಿದೆ. ಇದರ ತನಿಖೆ ಈಗಷ್ಟೇ ಪೂರ್ಣಗೊಳ್ಳಬೇಕಿದೆ. ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಷ್ಟು ನಿವೇಶನಗಳಿವೆ ಎಂಬ ಬಗ್ಗೆ ವರದಿ ನೀಡಬೇಕಿದೆ.
ಹೇಳಿದಷ್ಟು ಸಿಗುವುದು ಕಷ್ಟ!: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ 9 ಸಾವಿರ ಬಿಡಿಎ ನಿವೇಶನಗಳ ಮಾರಾಟದಿಂದ ಸಾವಿರಾರು ಕೋಟಿ ರೂ. ಬರುತ್ತದೆ ಎಂದು ತಿಳಿಸಿದ್ದರು. ಆದರೆ, ಇಷ್ಟೊಂದು ನಿವೇಶನಗಳು ಸಿಗುವುದು ಕಷ್ಟ ಸಾಧ್ಯ. ಮೂಲಗಳ ಪ್ರಕಾರ ನಾಲ್ಕು ಸಾವಿರ ನಿವೇಶನಗಳು ಸಿಗಲಿವೆ. ಇವುಗಳನ್ನು ಒಂದೇ ಬಾರಿಗೆ ಹರಾಜು ಹಾಕುವುದಿಲ್ಲ. ನೂರು ನೂರು ನಿವೇಶನಗಳಂತೆ ಹರಾಜು ಹಾಕಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಡಿಎ ಬಡಾವಣೆಗಳಲ್ಲಿ ಎಷ್ಟು ಕಾರ್ನರ್ ಸೈಟ್‌ಗಳು ಸಿಗಲಿವೆ? ನ್ಯಾಯಾಲಯದಲ್ಲಿ ವ್ಯಾಜ್ಯಗಳು ಎಷ್ಟಿವೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದೇನೆ. ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು.
-ಡಾ.ಎಚ್.ಆರ್. ಮಹಾದೇವ್, ಬಿಡಿಎ ಆಯುಕ್ತ
* ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.