ಡ್ಯಾರೆನ್ ಸ್ಯಾಮಿಯನ್ನು “ಕಲೂ’ ಎಂದಿದ್ದು, ಇಶಾಂತ್ ಶರ್ಮಾ!
Team Udayavani, Jun 11, 2020, 10:27 AM IST
ನವದೆಹಲಿ: ಐಪಿಎಲ್ ಟಿ20 ಕೂಟದ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡದೊಳಗೆ ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸ್ಯಾಮಿಯನ್ನು “ಕಲೂ’ ಎಂದು ಕರೆದದ್ದು ಅಂದು ಅದೇ ತಂಡದಲ್ಲಿದ್ದ ವೇಗಿ ಇಶಾಂತ್ ಶರ್ಮ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಐಪಿಎಲ್ನಲ್ಲಿ ನನಗೆ ಜನಾಂಗೀಯ ನಿಂದನೆಯಾಗಿತ್ತು, ಅದೂ ಸನ್ರೈಸರ್ಸ್ ತಂಡದ ಡ್ರೆಸ್ಸಿಂಗ್ ಕೊಠಡಿಯಲ್ಲಿ ಅನ್ನುವ ಆಘಾತಕಾರಿ ವಿಷಯ ಸ್ಯಾಮಿ ಹೊರಹಾಕಿದ್ದರು, ಈ ವಿಷಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿರುವಾಗಲೇ 2014ರಲ್ಲಿ ನಡೆದ ಐಪಿಎಲ್ ವೇಳೆ ಇಶಾಂತ್ ಶರ್ಮ ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ ಫೋಟೊಗೆ ಮರು ಜೀವ ಬಂದಿದೆ. ಈ ಫೋಟೊದಲ್ಲಿ ಇಶಾಂತ್ ಶರ್ಮ, ಭುವನೇಶ್ವರ ಕುಮಾರ್, ಡ್ಯಾರೆನ್ ಸ್ಯಾಮಿ ಹಾಗೂ ಡೇಲ್ ಸ್ಟೇನ್ ಅವರನ್ನು ಕಾಣಬಹುದಾಗಿದೆ. 2014ರ ಮೇ 14ರಂದು ಇಶಾಂತ್ ಶರ್ಮ “ನಾನು, ಭುವಿ, ಕಲೂ, ಮತ್ತು ಗನ್ ರೈಸರ್ಸ್’ ಎಂಬ ಶೀರ್ಷಿಕೆಯೊಂದಿಗೆ ಫೋಟೊ ಪ್ರಕಟಿಸಿದ್ದರು, ಇಲ್ಲಿ ಕಲೂ ಎಂದು ಕರೆದಿರುವುದು ಸ್ಯಾಮಿಯವರನ್ನು ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಇಶಾಂತ್ ಶರ್ಮ ಕೂಡ ಸೇರಿಕೊಂಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ವರ್ಣಭೇದ ನೀತಿಯ ವಿರುದ್ಧ, ಕಪ್ಪು ಜನರ ವಿರುದ್ಧದ ಹಲ್ಲೆಯನ್ನು ಖಂಡಿಸಿ ಮಾತನಾಡುತ್ತಿದ್ದ ವೇಳೆ ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತನಗಾಗಿರುವ ಕಹಿ ಅನುಭವವನ್ನು ಡ್ಯಾರೆನ್ ಸ್ಯಾಮಿ ಹಂಚಿಕೊಂಡಿದ್ದರು. ವರ್ಣಭೇದ ನೀತಿಯ ವಿರುದ್ಧ ನಾನು ಮಾತ್ರವಲ್ಲ ಐಸಿಸಿ ಸೇರಿದಂತೆ ಇಡೀ ಕ್ರಿಕೆಟ್ ಕುಟುಂಬ ಒಗ್ಗಟ್ಟಾಗಿ ಹೋರಾಡಬೇಕು ಎಂದು ಒತ್ತಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.