ಅವಧಿ ಮುಗಿದ ದೇವಸ್ಥಾನಗಳಿಗೆ ಆಡಳಿತ ಸಮಿತಿ ರಚನೆ
ಜುಲೈಯಲ್ಲಿ ಹೊಸ ಆಡಳಿತ ಸಮಿತಿ ನಿರೀಕ್ಷೆ
Team Udayavani, Jun 11, 2020, 7:24 AM IST
ಉಡುಪಿ: ಕೋವಿಡ್ ಹಾವಳಿಯಿಂದ ಭಕ್ತರಿಗೆ ಬಂದ್ ಆಗಿದ್ದ ದೇವಸ್ಥಾನಗಳು ಬಾಗಿಲು ತೆರೆದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿವೆ. ಇದರ ಬೆನ್ನಲ್ಲೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಅವಧಿ ಮುಗಿದ ರಾಜ್ಯದ 90 “ಎ’ ದರ್ಜೆ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ 9 ಮಂದಿ ನಾಮನಿರ್ದೇಶನ ಸದಸ್ಯರ ನೇಮಕ ಪ್ರಕ್ರಿಯೆಗೆ ಜೀವ ಸಿಕ್ಕಿದೆ.
ಜುಲೈ ಅಂತ್ಯದೊಳಗೆ ಈ ಎಲ್ಲ ದೇವಸ್ಥಾನಗಳಲ್ಲಿ ಹೊಸ ಆಡಳಿತ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ.
ರಾಜ್ಯದಲ್ಲಿ 90, ಉಡುಪಿ ಜಿಲ್ಲೆಯಲ್ಲಿ 25 ಮತ್ತು ದ.ಕ. ಜಿಲ್ಲೆಯಲ್ಲಿ 36 “ಎ’ ಗ್ರೇಡ್ ದೇವಸ್ಥಾನಗಳಿವೆ. ಅವುಗಳ ಪೈಕಿ ಉಡುಪಿಯಲ್ಲಿ 20 ಮತ್ತು ದ.ಕ. ಜಿಲ್ಲೆಯಲ್ಲಿ 25ರಷ್ಟು ಅವಧಿ ಪೂರ್ಣಗೊಂಡ “ಎ’ ಗ್ರೇಡ್ ದೇವಸ್ಥಾನಗಳಲ್ಲಿ ಹೊಸ ಆಡಳಿತ ಸಮಿತಿ ರಚನೆಗೆ ಸಂಬಂಧಿಸಿ ಅರ್ಜಿ ಸ್ವೀಕೃತವಾಗಿದೆ. ಅವಿಭಜಿತ ಜಿಲ್ಲೆಗಳ “ಬಿ’ ಮತ್ತು “ಸಿ’ ವರ್ಗದ ಬಹುತೇಕ ದೇವಸ್ಥಾನಗಳ ಆಡಳಿತ ಅವಧಿ ಈ ಹಿಂದೆಯೇ ಮುಕ್ತಾಯ ಕಂಡಿದ್ದು, ಅರ್ಜಿ ಸ್ವೀಕೃತವಾಗಿ ಪರಿಶೀಲನೆಗೊಂಡು ಅಂತಿಮ ಘೋಷಣೆಗೆ ಬಾಕಿಯಿದೆ.
ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ದೇವಸ್ಥಾನಗಳ ಆಡಳಿತ ಅವಧಿ 2019ರ ಅಕ್ಟೋಬರ್‌ಗೆ ಪೂರ್ಣಗೊಂಡಿದೆ. ಅನಂತರದಲ್ಲಿ ಆಡಳಿತ ಸಮಿತಿ ರಚನೆಗೆ ಬಳಿಕ ಅರ್ಜಿ ಸ್ವೀಕಾರವಾಗಿತ್ತು. ಮೇ 30 ಕೊನೆಯ ದಿನವಾಗಿತ್ತಾದರೂ ಅದು ಜೂ. 12ರ ತನಕ ಈಗ ವಿಸ್ತರಣೆಗೊಂಡಿದೆ. ಪುತ್ತೂರು, ಉಪ್ಪಿನಂಗಡಿ, ಕದ್ರಿ ಮೊದಲಾದ “ಎ’ ಗ್ರೇಡ್ ದೇವಸ್ಥಾನಗಳು ಹೊಸ ನಾಮನಿರ್ದೇಶನ ಸದಸ್ಯರ ನೇಮಕಕ್ಕೆ ಕಾಯುತ್ತಿವೆ.
ಮೇಲಿಂದ ಮೇಲೆ ಅಡ್ಡಿ
ಅವಧಿ ಮುಗಿದ ದೇವಸ್ಥಾನಗಳ ನಾಮನಿರ್ದೇಶನ ಸದಸ್ಯರ ಆಯ್ಕೆ ಸಂಬಂಧ ಹಿಂದೆಯೇ ಪ್ರಕ್ರಿಯೆ ಆರಂಭಗೊಂಡಿದ್ದರೂ ರಾಜ್ಯದಲ್ಲಿ ನಡೆದ ಉಪಚುನಾವಣೆ ಆರಂಭದಲ್ಲಿ ಅಡ್ಡಿಯಾಗಿತ್ತು. ಬಳಿಕ ಸರಕಾರ ಸುಭದ್ರಗೊಂಡಿತ್ತು. ಅನಂತರದಲ್ಲಿ ಶೀಘ್ರ ನೇಮಕಾತಿ ಹೊರ ಬೀಳುತ್ತದೆ ಎನ್ನುವಾಗ ಕೋವಿಡ್-19 ಸೋಂಕು ವ್ಯಾಪಿಸಿ ಲಾಕ್‌ಡೌನ್‌ನಿಂದ ದೇವಸ್ಥಾನಗಳೇ ಬಂದ್ ಆದವು.
ವ್ಯವಸ್ಥಾಪನಾ ಸಮಿತಿ ಯಾಕೆ ಅಗತ್ಯ?
ಸುದೀರ್ಘ ಅವಧಿಯಿಂದ ದೇವಸ್ಥಾನಗಳ ಆಡಳಿತದ ಅಧಿಕಾರದ ಹೊಣೆಯನ್ನು ವಿವಿಧ ವರ್ಗದ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ಮೂಲ ಇಲಾಖೆಯ ಜವಾಬ್ದಾರಿ ಜತೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಹೆಚ್ಚುವರಿ ಜವಾಬ್ದಾರಿ ಅವರ ಹೆಗಲ ಮೇಲಿದೆ. ಎರಡನ್ನೂ ಏಕಕಾಲದಲ್ಲಿ ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತಿದೆ. ಇದರಿಂದ ದೇವಸ್ಥಾನಗಳು ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಅವಧಿ ಮುಗಿದ ದೇವಸ್ಥಾನಗಳಿಗೆ ಶೀಘ್ರವೇ ಆಡಳಿತ ಮಂಡಳಿ ನೇಮಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.
ದೇವಸ್ಥಾನದ ಧಾರ್ಮಿಕ ವಿಚಾರಗಳ ಬಗ್ಗೆ ಅಲ್ಲಿನ ಅರ್ಚಕರು, ಆಗಮ ಪಂಡಿತರು ನೋಡಿಕೊಳ್ಳುತ್ತಾರೆ. ಭಕ್ತರ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು, ಸಿಬಂದಿಗೆ ಮಾರ್ಗಸೂಚಿಗಳನ್ನು ನೀಡಿದ್ದೇವೆ. ಅವಧಿ ಮುಗಿದ ದೇವಸ್ಥಾನಗಳ ಆಡಳಿತ ಸಮಿತಿ ರಚನೆಯನ್ನು ಜುಲೈ ಅಂತ್ಯಕ್ಕೆ ಪೂರ್ತಿಗೊಳಿಸುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆ ಸಚಿವ
ಎಲ್ಲ ದೇವಸ್ಥಾನಗಳಿಗೂ ನೇಮಕ ಅಗತ್ಯ
“ಎ’ ಗ್ರೇಡ್ ದೇವಸ್ಥಾನಗಳಷ್ಟೇ ಅಲ್ಲ. ಅವಧಿ ಮುಗಿದ ಎಲ್ಲ ಇತರ ವರ್ಗದ ದೇವಸ್ಥಾನಗಳಿಗೂ ನಾಮನಿರ್ದೇಶಕರ ಆಯ್ಕೆ ನಡೆಯಬೇಕಿದೆ. ಪ್ರಸ್ತುತ ವ್ಯವಸ್ಥಾಪನ ಸಮಿತಿಯ ಅಗತ್ಯ ಖಂಡಿತ ಇದೆ.
– ಸೂರ್ಯ ಭಟ್ ಕಶೆಕೋಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.