![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 11, 2020, 10:29 AM IST
ಈಗಾಗಲೇ ಮಹತ್ವದ ಇಲಾಖೆ, ಸಂಸ್ಥೆಗಳಿಗೆ ಸೇನೆಯ ಅಧಿಕಾರಿಗಳೇ ಮುಖ್ಯಸ್ಥರು
ಪಿಎಂ ಖಾನ್ ಜನಪ್ರಿಯತೆ ಕುಸಿಯುತ್ತಿರುವ ಕಾರಣ ವಿಶೇಷ “ನೆರವು
ಮುಂದೆ ಅವಶ್ಯವಿದ್ದರೆ ಪೂರ್ಣ ಆಡಳಿತ ನಿಯಂತ್ರಣ ಸಾಧ್ಯತೆ
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಕುಸಿಯುತ್ತಿರುವ ಆಡಳಿತ ಯಂತ್ರವನ್ನು ಅಲ್ಲಿನ ಸೇನೆ ನಿಧಾನವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಕಳೆದೆರಡು ತಿಂಗಳಲ್ಲಿ ಪಾಕಿಸ್ಥಾನ ಏರ್‌ಲೈನ್ಸ್, ವಿದ್ಯುತ್ ನಿಯಂತ್ರಣ ಮಂಡಳಿ, ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ತನ್ನ ವ್ಯಕ್ತಿಗಳನ್ನೇ ಮುಖ್ಯಸ್ಥರನ್ನಾಗಿ ನೇಮಿಸಿದೆ. ಇದು ಇಮ್ರಾನ್ ಸರಕಾರದ ಮೇಲೆ ಸೇನೆ ಮೇಲುಗೈ ಸಾಧಿಸುವ ಲಕ್ಷಣಗಳಾಗಿವೆ.
ಖಾನ್ ನೆರವಿಗೆ ಕಸರತ್ತು: ಪಾಕಿಸ್ಥಾನ ಈಗಾಗಲೇ ದಿವಾಳಿಯ ಅಂಚನ್ನು ತಲು ಪಿದೆ. ಅಗತ್ಯ ಸಾಮಗ್ರಿಗಳ ಬೆಲೆ ಗಗನ ಕ್ಕೇರಿದೆ. ಭ್ರಷ್ಟಾಚಾರವೂ ಮಿತಿ ಮೀರಿದೆ. ಜನರಲ್ಲಿ ಅಸಹನೆ ಹೆಚ್ಚಾಗುತ್ತಿದೆ. ಇದರ ಜತೆಗೆ ಆಡಳಿತ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್-ಇ-ಇನ್ಸಾಫ್ನ ಪ್ರಮುಖರು ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರ ವಿರುದ್ಧ ಕೇಳಿ ಬಂದಿರುವ ಗುರುತರ ಆರೋಪಗಳ ಹಿನ್ನೆಲೆಯಲ್ಲಿ ಅವರ ವರ್ಚಸ್ಸು ಕಡಿಮೆಯಾಗುತ್ತಿದೆ.
ಪಾಕಿಸ್ಥಾನದ ಸಂಸತ್ತಿನಲ್ಲಿ ಶೇ. 46ರಷ್ಟು ಸ್ಥಾನ ಪಡೆದಿರುವ ಖಾನ್ ಅವರ ಪಾಕಿಸ್ತಾನ್-ತೆಹ್ರೀಕ್-ಎ ಇನ್ಸಾಫ್ ಪಕ್ಷದ ನೇತೃತ್ವದ ಸರಕಾರ ಉಳಿಯಬೇಕೆಂದರೆ ಈ ಸಣ್ಣಪುಟ್ಟ ಪಕ್ಷಗಳ ಪಾತ್ರ ದೊಡ್ಡದಿದೆ. ಹೀಗಾಗಿ, ಅವರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳುವುದು ಖಾನ್‌ಗೆ ಅವಶ್ಯಕವಾಗಿದೆ. ಆದರೆ, ಅದು ಸದ್ಯದ ಮಟ್ಟಿಗೆ ಸಾಧ್ಯವಾಗು ತ್ತಿಲ್ಲ. ಹಾಗಾಗಿಯೇ ಇಮ್ರಾನ್ ಬೆಂಬಲಕ್ಕೆ ಈಗ ಸೇನೆ ಬಂದಿದೆ.
ಆ ದೇಶದ 70 ವರ್ಷಗಳ ಇತಿಹಾಸ ದಲ್ಲಿ ಬಹುಪಾಲು ಆಡಳಿತವನ್ನು ಅಲ್ಲಿ ಸೇನೆಯೇ ನಿರ್ವಹಿಸಿದೆ. ಈಗ, ಮೇಲ್ನೋ ಟಕ್ಕೆ ಇಮ್ರಾನ್ ಸರಕಾರದ ಸಹಾಯಕ್ಕೆ ಸೇನೆ ಬಂದಿದೆ ಎಂದೆನ್ನಿಸಿದರೂ, ಮುಂದೆ ಅಗತ್ಯ ಬಿದ್ದರೆ ಇಡೀ ಆಡಳಿತವನ್ನು ಸೇನೆಯೇ ಖಂಡಿತಾ ವಹಿಸಿಕೊಳ್ಳಬಹುದು ಎಂಬ ಗುಮಾನಿ ಎದ್ದಿವೆ.
ಸೇನೆಯ ಪ್ರಭಾವಳಿ ಎಷ್ಟಿದೆ ಎನ್ನುವು ದಕ್ಕೆ ಒಂದು ಉದಾಹರಣೆ ಇಲ್ಲಿದೆ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಸರಕಾರದ ಅಧಿಕಾರಿ ಗಳ ಜತೆಗೆ ಸೇನೆಯ ಅಧಿಕಾರಿಗಳೂ ಉಪಸ್ಥಿತರಿರುತ್ತಾರೆ. ಹೀಗಾಗಿ ಪಾಕಿಸ್ಥಾನದಲ್ಲಿ ಮತ್ತೆ ಸೇನೆ ನಾಗರಿಕ ಸರಕಾರವನ್ನು ಪತನಗೊಳಿಸಲಿದೆಯೇ ಎಂಬ ಆತಂಕ ಶುರುವಾಗಿದೆ.
ಸರ್ಜಿಕಲ್ ಸ್ಟ್ರೈಕ್ ವದಂತಿಗೆ ನಿದ್ದೆಗೆಟ್ಟರು
ಕರಾಚಿ: ಭಾರತೀಯ ವಾಯು ಪಡೆಯ ಯೋಧರು ಗಡಿ ನಿಯಂತ್ರಣ ರೇಖೆ ದಾಟಿ ದಾಳಿ ನಡೆಸುತ್ತಿದ್ದಾರೆ. ಕರಾಚಿಯ ಆಕಾಶದ ಮೇಲೆ ಭಾರತದ ಯುದ್ಧ ವಿಮಾನಗಳು ಹಾರಾಡುತ್ತಿವೆ ಎಂಬ ವದಂತಿಗೆ ಪಾಕ್ ಮಂಗಳವಾರ ರಾತ್ರಿಯಿಡೀ ನಿದ್ದೆಗೆಟ್ಟಿದೆ. ಭಾರತದ ಯುದ್ಧವಿಮಾನಗಳ ಕಣ್ತಪ್ಪಿಸಲು ಕರಾಚಿಯ ಎಲ್ಲ ಬೀದಿದೀಪಗಳನ್ನೂ ಆರಿಸಲಾಗಿದೆ. ಬಾಲಕೋಟ್ ಮಾದರಿಯಲ್ಲಿ ಇನ್ನೊಂದು ದಾಳಿ ನಡೆಯುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
“ವಿಮಾನ ನಿಲ್ದಾಣದ ಬಳಿ ಜೆಟ್ ವಿಮಾನಗಳು ಹಾರಾಡಿದ್ದನ್ನು ನಾನು ನಿಜಕ್ಕೂ ನೋಡಿದ್ದೆ. ಏನಾಗಿದೆ?’ ಎಂದು ಕರಾಚಿಯ ಲಾರೈಬ್ ಮೊಹಿಬ್ ಟ್ವಿಟರ್‌ನಲ್ಲಿ ಆತಂಕದ ಪ್ರಶ್ನೆ ಮುಂದಿಟ್ಟಿದ್ದರು. “ಕರಾಚಿಯಲ್ಲಿ ಸಾಕಷ್ಟು ಜೆಟ್ ವಿಮಾನಗಳು ಹಾರಾಡುತ್ತಿದ್ದವು’ ಎಂದು ಮತ್ತೂಬ್ಬ ಕರಾಚಿ ನಿವಾಸಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲಿ ಹ್ಯಾಶ್‌ಟ್ಯಾಗ್ ಸೃಷ್ಟಿಯಾಗಿ ವೈರಲ್ ಆಗಿದ್ದರೂ ಪಾಕಿಸ್ತಾನದ ವಾಯುಪಡೆ ಮಾತ್ರ ಇದುವರೆಗೂ ಸ್ಪಷ್ಟನೆ ನೀಡಿಲ್ಲ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.