ಗಂಗಾವತಿಯಲ್ಲಿ ಓರ್ವನಿಗೆ ಕೋವಿಡ್ ಸೋಂಕು ದೃಢ: ಗಾಂಧಿಚೌಕ್ ಏರಿಯಾ ಸೀಲ್ ಡೌನ್
Team Udayavani, Jun 11, 2020, 11:34 AM IST
ಗಂಗಾವತಿ: ನಗರದ ಜಾಮೀಯಾ ಮಸೀದಿ ಹತ್ತಿರ ಆಂಧ್ರಪ್ರದೇಶದ ಆದೋನಿಯಿಂದ ಆಗಮಿಸಿದ ವ್ಯಕ್ತಿಯೋರ್ವನಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ತಾಲ್ಲೂಕು ಆಡಳಿತದ ಅಧಿಕಾರಿಗಳು ಮಸೀದಿ ಪ್ರದೇಶ, ಡೈಲಿ ಮಾರ್ಕೆಟ್, ಮಾಂಸದ ಮಾರ್ಕೆಟ್, ಕೋಟೆ ಆಂಜನೇಯ, ವೆಂಕಟರಮಣ ಗುಡಿ, ಬಸವಣ್ಣ ಸರ್ಕಲ್ ಪ್ರದೇಶ, ಸಿಪಿಎಸ್ ಸ್ಕೂಲ್ ಪ್ರದೇಶವನ್ನು ಸರ್ವೇ ಮಾಡಿ ಸೀಲ್ ಡೌನ್ ಮಾಡುವ ಸಿದ್ದತೆ ನಡೆಸಿದ್ದಾರೆ.
ಸೀಲ್ ಡೌನ್ ಪ್ರದೇಶದಲ್ಲಿ ಕ್ರಿಮಿನಾಶಕ ಸಿಂಪರಣೆ ಮಾಡಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟು, ಶಾಲಾ ಕಾಲೇಜು ಚಟುವಟಿಕೆ ಸ್ಥಗಿತ ಮಾಡಲು ಸೂಚಿಸಲಾಗಿದೆ. ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇಡೀ ಪ್ರದೇಶದಲ್ಲಿ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಆಂಧ್ರ ಪ್ರದೇಶದಿಂದ ಆಗಮನ: ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿ ಆಂಧ್ರ ಪ್ರದೇಶದ ಆದೋನಿಯಿಂದ ಕಳೆದ ತಿಂಗಳು ಆಗಮಿಸಿದ್ದು ಜಾಮೀಯಾ ಮಸೀದಿಯಲ್ಲಿ ಧಾರ್ಮಿಕ ಪ್ರವಚನ ಮತ್ತು ನಮಾಜ್ ಮಾಡಿಸುತ್ತಿದ್ದನು. ಈತನ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದಾಗ ಆತನ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳಿಸಲಾಗಿತ್ತು.
ಆ ವ್ಯಕ್ತಿಗೆ ಸೋಂಕು ಪಾಸಿಟಿವ್ ಬಂದಿದ್ದರಿಂದ ಇಡೀ ಜಾಮೀಯಾ ಮಸೀದಿ ಸುತ್ತಲಿನ 100 ಮೀಟರ್ ಪ್ರದೇಶ ಸೀಲ್ ಡೌನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಇರುವವರನ್ನು ಅಧಿಕಾರಿಗಳು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.