![Beer](https://www.udayavani.com/wp-content/uploads/2025/02/Beer-1-415x232.jpg)
![Beer](https://www.udayavani.com/wp-content/uploads/2025/02/Beer-1-415x232.jpg)
Team Udayavani, Jun 12, 2020, 4:34 AM IST
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅಭಿನಯದ “ಸೀತಾಯಣ’ ಚಿತ್ರದ ಶೂಟಿಂಗ್ ಸದ್ದಿಲ್ಲದೆ ಪೂರ್ಣಗೊಂಡಿದ್ದು, ಸದ್ಯ ಈ ಚಿತ್ರದ ಡಬ್ಬಿಂಗ್ ಮತ್ತಿತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದೆ. ಲಾಕ್ ಡೌನ್ ಇಲ್ಲದಿದ್ದರೆ ಚಿತ್ರ ಬಿಡುಗಡೆಯಾಗಬೇಕಿತ್ತು.
ಪಕ್ಕಾ ರೊಮ್ಯಾಂಟಿಕ್ ಕಂ ಕ್ರೈಂ ಸ್ಟೋರಿ ಎಳೆಯನ್ನು ಹೊಂದಿರುವ “ಸೀತಾಯಣ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ತೆಲುಗು ಮೂಲದ ನಿರ್ದೇಶಕ ಪ್ರಭಾಕರ್ ಆರಿಪಕ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಕಥಾಹಂದರ ಹೊಂದಿರುವ ಸಿನಿಮಾ.
ಒಂದು ಹುಡುಗ, ಹುಡುಗಿ, ಮದುವೆ, ಫ್ಯಾಮಿಲಿ ಸೆಂಟಿಮೆಂಟ್‌ಗಳ ಸುತ್ತ ಸಿನಿಮಾ ನಡೆಯುತ್ತದೆ. ಸಿನಿಮಾದಲ್ಲಿ ಬರುವ ಕೆಲವೊಂದು ಟ್ವಿಸ್ಟ್‌ಗಳು ಮತ್ತೂಂದು ಕಡೆ ಪ್ರೇಕ್ಷರನ್ನು ಕರೆದುಕೊಂಡು ಹೋಗುತ್ತದೆ. ಕೆಲವೊಂದು ಕನ್ನಡ ಮತ್ತು ತೆಲುಗು ಸಿನಿ ಪ್ರೇಕ್ಷಕರಿಗೆ ಇಷ್ಟವಾಗುವಂಥ ಎಲ್ಲ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆಯಂತೆ.
ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್, ಹೈದರಾಬಾದ್, ಬ್ಯಾಂಕಾಕ್ ಮೊದಲಾದ ಕಡೆಗಳಲ್ಲಿ ಸುಮಾರು 63 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ ಸದ್ಯ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಕವಿರಾಜ್ ಮತ್ತು ಗೌಸ್‌ಫೀರ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಇನ್ನು ಚಿತ್ರದಲ್ಲಿ ಅಕ್ಷಿತ್‌ಗೆ ನಾಯಕಿಯಾಗಿ ಮುಂಬೈ ಬೆಡಗಿ ಅನಹಿತ್ ಭೂಷಣ್ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.
Madhya Pradesh; ಎ.1ರಿಂದ ಕಡಿಮೆ ಅಲ್ಕೋಹಾಲ್ ಇರುವ ಬಾರ್ ಶುರು
ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ
ಲಂಬವಾಗಿ ಟೇಕಾಫ್ ಆಗುವ ಏರ್ ಆ್ಯಂಬುಲೆನ್ಸ್ ಶೀಘ್ರ ಭಾರತದಲ್ಲಿ ಲಭ್ಯ
Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?
BCCI ಕಟ್ಟಪ್ಪಣೆಯಿಂದ ಸಂದಿಗ್ಧ; ತನ್ನಿಷ್ಟದ ಆಹಾರಕ್ಕೆ ಕೊಹ್ಲಿ ಹೊಸ ಮಾರ್ಗ!
You seem to have an Ad Blocker on.
To continue reading, please turn it off or whitelist Udayavani.