4000 ಕಿ.ಮೀ. ಗಡಿ ಉದ್ದಕ್ಕೂ ಚೀನ ಕಾವಲು
ಹಿಮಾಚಲ ಪ್ರದೇಶ, ಉತ್ತರಖಂಡ, ಸಿಕ್ಕಿಂ, ಅರುಣಾಚಲದ ಗಡಿಗಳಲ್ಲಿ ಡ್ರ್ಯಾಗನ್
Team Udayavani, Jun 12, 2020, 10:16 AM IST
ಹೊಸದಿಲ್ಲಿ: ಪೂರ್ವ ಲಡಾಖ್ ಅಷ್ಟೇ ಅಲ್ಲದೆ ಭಾರತದ 4 ರಾಜ್ಯಗಳ ಒಟ್ಟು 4 ಸಾವಿರ ಕಿ.ಮೀ. ಗಡಿ ಉದ್ದಕ್ಕೂ ಚೀನ ತನ್ನ ಸೇನೆಯನ್ನು ನಿಯೋಜಿಸಿದೆ ಎಂಬ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. “ಚೀನವು ಹಿಮಾಚಲ ಪ್ರದೇಶ, ಉತ್ತರಖಂಡ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶಗಳ ಗಡಿಯು ದ್ದಕ್ಕೂ ಸೇನಾಪಡೆಯನ್ನು ನಿಲ್ಲಿಸಿದೆ. ಮಿಲಿಟರಿ ಕಾಮಗಾರಿ ಜತೆಗೆ ಭಾರೀ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಭಾರತ ಪ್ರತ್ಯುತ್ತರ: “ಎಪ್ರಿಲ್‌ನಲ್ಲಿ ಹಿಮಾಚಲ ಪ್ರದೇಶದ ಗಡಿಯಲ್ಲಿ ಚೀನದ ಹೆಲಿಕಾಪ್ಟರ್‌ಗಳು ಹಾರಾಡಿದ್ದರಿಂದ ಅಲ್ಲಿ ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ’ ಎಂದು ಮೂಲಗಳು ತಿಳಿಸಿವೆ. ಉತ್ತರಾಖಂಡದ ಹರ್ಸಿಲ್- ಬಾರಾ ಹೋಟಿ- ನೆಲಾಂಗ್ ಕಣಿವೆಯಲ್ಲೂ ಚೀನದ ಹೆಲಿ ಕಾಪ್ಟರ್‌ಗಳು ಹಾರಾಡುತ್ತಿವೆ. ಈ ಗಡಿಯಲ್ಲಿ ಪಿಎಲ್‌ಎ ಸೈನಿಕರು ನಿರಂತರ ಗಸ್ತು ತಿರುಗುತ್ತಿದ್ದಾರೆ.
ಮತ್ತೆ ಮಾತುಕತೆ: ಲಡಾಖ್‌ನ ಚುಶುಲ್ ಗಡಿಯಲ್ಲಿ ಭಾರತ- ಚೀನ ನಡುವೆ ಗುರುವಾರ ಮತ್ತೆ ಮಾತುಕತೆ ನಡೆದಿದೆ.
ಶೀಘ್ರ ಶಮನ: ಶ್ರೀ ವಾಸ್ತವ
ಲಡಾಖ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಆದಷ್ಟು ಬೇಗ ಪರಿಹಾರ ಕಂಡು ಕೊಳ್ಳಲು ಭಾರತ- ಚೀನ ಪ್ರಯತ್ನಿಸುತ್ತಿವೆ. ಗಡಿಯಲ್ಲಿ ಶಾಂತಿ ನೆಲೆಸುವುದು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ ಅತ್ಯಂತ ಅವಶ್ಯ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಹೇಳಿದ್ದಾರೆ.
ಕಾಪ್ಟರ್ ಸಾಧನೆ
ಉತ್ತರಾಖಂಡದ ಜೋಹಾರ್ ಕಣಿವೆಯ ದುರ್ಗಮ ಪ್ರದೇಶದಲ್ಲಿ ಹೆಲಿಕಾಪ್ಟರ್‌ಗಳು ಭಾರೀ ಪ್ರಮಾಣದ ರಸ್ತೆ ನಿರ್ಮಾಣದ ಯಂತ್ರೋಪಕರಣ ಗಳನ್ನು ಯಶಸ್ವಿಯಾಗಿ ಇಳಿಸಿವೆ. 2019 ರಲ್ಲಿ ಹಲವು ಬಾರಿ ವೈಫಲ್ಯ ಕಂಡ ಬಳಿಕ ಗಡಿ ರಸ್ತೆಗಳ ಸಂಸ್ಥೆ ಈ ಸಾಧನೆಗೈದಿದೆ.
ರಾಹುಲ್ ಗಾಂಧಿಗೆ ನಿವೃತ್ತಸೇನಾಧಿಕಾರಿಗಳ ತಿರುಗೇಟು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ “ಲಡಾಖ್‌ನ ಕೆಲವು ಭಾಗಗಳನ್ನು ಚೀನ ಸ್ವಾಧೀನಪಡಿಸಿಕೊಂಡಿದೆ’ ಎಂಬ ಹೇಳಿಕೆ ಖಂಡಿಸಿ 71 ನಿವೃತ್ತ ಸೇನಾಧಿಕಾರಿಗಳು ಸಹಿ ಹಾಕಿ, ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ವಿಶ್ವದ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ನಮ್ಮ ಸೈನಿಕರು ಹೇಗೆ ಕೆಲಸ ಮಾಡು ತ್ತಿದ್ದಾರೆಂಬ ಅರಿವು ರಾಹುಲ್‌ಗಿಲ್ಲ. ಚೀನ ಸೇನೆಯ ಆಕ್ರಮಣಗಳ ಇತಿಹಾಸವನ್ನಾದರೂ ಅವರು ಓದಬೇಕಿತ್ತು. 1962ರಲ್ಲಿ ಚೀನ ದಂಡೆತ್ತಿ ಬಂದಾಗ ರಾಹುಲ್ ಅವರ ಮುತ್ತಜ್ಜ ಜವಾಹರಲಾಲ್ ನೆಹರು ಈ ದೇಶದ ಪ್ರಧಾನಿ ಆಗಿದ್ದರು. ಅಂದು ಭಾರತೀಯ ಸೇನೆ ಏನೂ ಸಿದ್ಧತೆ ಮಾಡಿಕೊಳ್ಳದೆ ಚೀನಗೆ ಶರಣಾಗಿತ್ತು’ ಎಂದು ಹೇಳಿದ್ದಾರೆ. “ರಾಹುಲ್ ಅವರ ಹೇಳಿಕೆಗಳಿಗೆ ಪಾಕಿಸ್ಥಾನ ಯಾವಾಗಲೂ ಬೆಂಬಲ ಸೂಚಿಸುತ್ತದೆ. ರಾಹುಲ್ ಸಣ್ಣ ರಾಜಕೀಯಕ್ಕಾಗಿ ಮಿಲಿಟರಿ ವಿಚಾರಗಳನ್ನು ಬಳಸಿಕೊಳ್ಳುವುದು ನಿಜಕ್ಕೂ ಶೋಚನೀಯ’ ಎಂದು ಖಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.