ಹಾಕಿ ದಂತಕತೆ ಧ್ಯಾನ್‌ಚಂದ್
Team Udayavani, Jun 12, 2020, 3:13 PM IST
ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಹಾಕಿ ಆಟಗಾರ, ಕ್ರೀಡಾಭಿಮಾನಿಗಳ ಪ್ರೀತಿಯ ದಾದಾ ಧ್ಯಾನ್‌ಚಂದ್. ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ರಜಪೂತ ಕುಟುಂಬವೊಂದರಲ್ಲಿ ಆಗಸ್ಟ್ 29, 1905ರಂದು ಜನಿಸಿದ ಇವರು ಹಾಕಿ ಕ್ಷೇತ್ರದ ದಂತಕತೆ. ಧ್ಯಾನ್‌ಚಂದ್ ಅವರ ವಿದ್ಯಾಭ್ಯಾಸ ಅತೀ ಕಡಿಮೆಯಾದರೂ ತಮ್ಮ 16ನೇ ವಯಸ್ಸಿನಲ್ಲೇ ಸೈನ್ಯ ಸೇರಿದ್ದರು. ಇವರ ತಂದೆ ಸುಬೇದಾರ್ ಸಾಮೇಶ್ವರ್ ದತ್ ಸಿಂಗ್ ಅವರೂ ಭಾರತದಲ್ಲಿದ್ದ ಬ್ರಿಟಿಷ್ ಸೈನ್ಯದಲ್ಲಿದ್ದರು ಎಂಬುದು ಗಮನಾರ್ಹ. 14ನೇ ಪಂಜಾಬ್ ರೆಜಿಮೆಂಟ್ ಸೇರಿ ಸ್ನೇಹಪೂರ್ವಕವಾಗಿ ಸೈನ್ಯದ ಇತರ ಸಿಬಂದಿಯೊಂದಿಗೆ ಆಡುತ್ತಿದ್ದರು. ಈವೇಳೆ ಇವರಲ್ಲೇನೋ ವಿಶೇಷವಿದೆ ಎಂದು ಗಮನಿಸಿದ ಮೇಜರ್ ಭೋಲೆ ತಿವಾರಿ ಅವರು ವೈಯಕ್ತಿಕ ನಿಗಾ ವಹಿಸುವ ಮೂಲಕ ಧ್ಯಾನ್‌ಚಂದ್ ಅವರಿಗೆ ಹಾಕಿ ತರಬೇತಿ ನೀಡಿದರು. ಬಳಿಕ ಸೇನೆ, ವಿವಿಧ ವಲಯ ಮಟ್ಟಗಳಲ್ಲಿ ಆಡಿ ಮತ್ತಷ್ಟು ನೈಪುಣ್ಯತೆ ಪಡೆದ ಇವರ ಅಂತಾರಾಷ್ಟ್ರೀಯ ಮಟ್ಟದ ಸಾಧನೆಯೇ ಒಂದು ಇತಿಹಾಸ.
ಹಾಕಿ ಮಾಂತ್ರಿಕ
1936ರ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಬಳಿಕ ಧ್ಯಾನ್‌ಚಂದ್‌ರ ಆಟ ನೋಡಲೆಂದೇ ಪ್ರೇಕ್ಷಕರು ಮುಗಿಬೀಳುತ್ತಿದ್ದರು. “ಹಾಕಿ ಆಟ ಇದೀಗ ಮ್ಯಾಜಿಕ್ ಶೋ ಆಗಿ ಪರಿವರ್ತನೆಯಾಗಿದೆ. ಭಾರತದ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ರ ಆಟ ನೋಡಲು ತಪ್ಪದೇ ಕ್ರೀಡಾಂಗಣಕ್ಕೆ ಬನ್ನಿ ‘ ಎಂದು ಜರ್ಮನ್ ಪತ್ರಿಕೆಯೊಂದು ವರದಿ ಮಾಡಿತ್ತು.
ಮೇಜರ್ ಹುದ್ದೆಯ ನಿರಾಕರಣೆ
ಇವರ ಹಾಕಿ ಆಟಕ್ಕೆ ಮನಸೋತಿದ್ದ ಅಡಾಲ್ಫ್ ಹಿಟ್ಲರ್ ಜರ್ಮನ್ ತಂಡಕ್ಕಾಗಿ ಆಡುವಂತೆ ಹಲವು ಆಮಿಷಗಳನ್ನು ಒಡ್ಡಿದ್ದ. ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ ಮತ್ತು ಕರ್ನಲ್ ಗೌರವ ನೀಡುವುದಾಗಿ ತಿಳಿಸಿದರೂ ಧ್ಯಾನ್‌ಚಂದ್ ಅವರು ಮಾತ್ರ ಇದಾವುದಕ್ಕೂ ಒಪ್ಪಿರಲಿಲ್ಲ. ಎರಡನೇ ವಿಶ್ವಯುದ್ಧದ ಬಳಿಕ ಸ್ವಲ್ಪ ಕಾಲ ಮಾತ್ರ ಆಡಿದ ಇವರು 1948ರಲ್ಲಿ ನಿವೃತ್ತರಾದರು. ಡಿಸೆಂಬರ್ 3, 1979ರಂದು
ನಿಧನ ಹೊಂದಿದರು.
ರೆಫರಿಯೊಂದಿಗೇ ವಾಗ್ವಾದ !
ಪಂದ್ಯವೊಂದರಲ್ಲಿ ಧ್ಯಾನ್‌ಚಂದ್ ಅವರಿಗೆ ಒಂದೂ ಗೋಲ್ ಬಾರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ರೆಫರಿಯೊಂದಿಗೇ ವಾಗ್ವಾದಕ್ಕಿಳಿದಿದ್ದ ಅವರು, ಕ್ರೀಡಾಂಗಣದಲ್ಲಿರುವ ಗೋಲ್ ಪೋಸ್ಟ್ ಅಳತೆ ಸರಿ ಇಲ್ಲ. ಅಂತಾರಾಷ್ಟ್ರೀಯ ನಿಯಮಗಳಿಗೆ ಇದು ವಿರುದ್ಧವಾಗಿದೆ ಎಂದು ದೂರಿದ್ದರು. ಇವರ ಮಾತಿನಂತೆಯೇ ಅಳತೆ ಮಾಡಿದಾಗ ಧ್ಯಾನ್
ಚಂದ್‌ರ ಅಭಿಪ್ರಾಯ ಅಕ್ಷರಶಃ ನಿಜವಾಗಿತ್ತು.
ಮೊದಲ ಪಂದ್ಯದಲ್ಲೇ ಮಿಂಚಿದ್ದ ಧ್ಯಾನ್‌ಚಂದ್
1928ರಲ್ಲಿ ಭಾರತೀಯ ಹಾಕಿ ತಂಡ ಸೇರಿದ್ದ ಇವರಿಗೆ ನೆದರ್‌ಲ್ಯಾಂಡ್‌ನ ಆಮ್‌ಸ್ಟೆರ್‌ಡ್ಯಾಮ್‌ನಲ್ಲಿ ಆಯೋಜಿಸಲಾಗಿದ್ದ ಬೇಸಗೆಯ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಸುವರ್ಣಾವಕಾಶ ದೊರೆಯಿತು. ನೆದರ್‌ಲ್ಯಾಂಡ್ ವಿರುದ್ಧ 3-0 ಗೋಲ್‌ಗಳಲ್ಲಿ 2 ಗೋಲು ಬಾರಿಸುವ ಮೂಲಕ ಸಿಕ್ಕ ಮೊದಲ ಅವಕಾಶ ಸದ್ವಿನಿಯೋಗಿಸಿದ್ದ ಧ್ಯಾನ್‌ಚಂದ್ ಅವರು ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದರು. 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ ಭಾರತ ತಂಡದ ಸದಸ್ಯರೂ ಇವರಾಗಿದ್ದರು. ಆಡಿದ ಮೂರು ಒಲಿಂಪಿಕ್ಸ್ ಪಂದ್ಯಾಟಗಳಲ್ಲಿ ಧ್ಯಾನ್‌ಚಂದ್ ಭಾರಿಸಿದ್ದ ಗೋಲ್‌ಗಳ ಸಂಖ್ಯೆ ಬರೋಬ್ಬರಿ 33.
- ರಾಕೇಶ್, ಎಚ್.ಎಸ್. ಸಕ್ಲೇಶಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.