ಹೆಸರುಕಾಳು ದೋಸೆ ರೆಸಿಪಿ…ಹೆಸರುಕಾಳು ಮೊಳಕೆಯಿಂದ ಆರೋಗ್ಯಕ್ಕೆ ಎಷ್ಟು ಉಪಯೋಗ?
ಶ್ರೀರಾಮ್ ನಾಯಕ್, Jun 12, 2020, 7:50 PM IST
ಆಧುನಿಕ ಜೀವನ ಶೈಲಿಯ ಮಧ್ಯೆ ನಮ್ಮ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್‌ಫುಡ್ ಗಳ ಹಾವಳಿಯೇ ಹೆಚ್ಚಾಗಿದೆ. ಇದರಿಂದ ಆರೋಗ್ಯ ವೃದ್ಧಿಸುವ ಸೊಪ್ಪು, ತರಕಾರಿ, ಕಾಳುಗಳು ಹಿಂದಕ್ಕೆ ಸರಿದಿದೆ. ಮೊಳಕೆ ಬಂದ ಕಾಳುಗಳ ಸೇವನೆಯಿಂದ ಆರೋಗ್ಯದ ದೃಷ್ಟಿಯಿಂದ ಎಷ್ಟು ಲಾಭವಿದೆ ಎಂದು ಹಲವರಿಗೆ ತಿಳಿದಿಲ್ಲ. ಕಾಳಲ್ಲಿ ಪ್ರೋಟಿನ್, ವಿಟಮಿನ್ ಕಬ್ಬಿಣ ಅಂಶ ಹಾಗೂ ಕ್ಯಾಲ್ಸಿಯಂ ಹೀಗೆ ದೇಹಕ್ಕೆ ಬೇಕಾದ ಪೌಷ್ಟಿಕತೆ ಇರುತ್ತದೆ. ಆದ್ದರಿಂದ ಮೊಳಕೆ ಬಂದ ಕಾಳು ದೇಹಕ್ಕೆ ಒಳ್ಳೆಯದು. ಹೀಗೆ ಅನೇಕ ಆರೋಗ್ಯಕಾರಿ ಅಂಶಗಳಿರುವ ಹೆಸರುಕಾಳು ಮೊಳಕೆ ಕೂಡಾ ಒಂದು.
ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಹಿತಕಾರವಾಗಿರುವ ಹೆಸರುಕಾಳು,ದೇಹದ ತಾಪವನ್ನು ಕಡಿಮೆ ಮಾಡುವ ಪೌಷ್ಟಿಕಾಂಶವನ್ನು ವರ್ಧಿಸುವ ಆಹಾರ. ಹೆಸರುಕಾಳಿನ ಸೇವನೆಯನ್ನು ಮತ್ತಷ್ಟು ರುಚಿಗೊಳಿಸುವ ಹೆಸರು ಕಾಳಿನ ಚಾಟ್ ಹಾಗೂ ಹೆಸರು ಕಾಳಿನ ದೋಸೆಯ ಪಾಕವಿಧಾನಗಳು ಇಲ್ಲಿವೆ.
ಹೆಸರುಕಾಳಿನ ಚಾಟ್
ಬೇಕಾಗುವ ಸಾಮಗ್ರಿಗಳು
ಉಪ್ಪು ಹಾಕಿ ಬೇಯಿಸಿದ ಹೆಸರುಕಾಳು 2ಕಪ್, ಟೊಮೇಟೋ 1/2 ಕಪ್, ಈರುಳ್ಳಿ 1/2 ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಖಾರಾ ಸೇವ್ 2 ಚಮಚ.
ಹುಳಿ-ಸಿಹಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ಪುದೀನ ಸೊಪ್ಪು 1ಕಪ್ , ಹುಣಿಸೇ ಹುಳಿ ಸ್ವಲ್ಪ , ಬೆಲ್ಲದ ಪುಡಿ 2 ಚಮಚ , ಹಸಿ ಮೆಣಸಿನ ಕಾಯಿ 3 , ಗರಂ ಮಸಾಲೆ ಪುಡಿ 1 ಚಮಚ, ಜೀರಿಗೆ ಪುಡಿ 1ಚಮಚ ಉಪ್ಪು ರುಚಿಗೆ ತಕ್ಕಷ್ಟು .
ತಯಾರಿರುವ ವಿಧಾನ
ಪುದೀನಾ ಸೊಪ್ಪು ,ಹುಣಿಸೇ ಹುಳಿ ,ಬೆಲ್ಲ ,ಹಸಿಮೆಣಸಿನಕಾಯಿ ಸೇರಿಸಿ ರುಬ್ಬಿರಿ. ಅದಕ್ಕೆ ಗರಂ ಮಸಾಲ ಪುಡಿ, ಜೀರಿಗೆ ಪುಡಿ ಹಾಗೂ ಉಪ್ಪು ಹಾಕಿ ಸ್ವಲ್ಪ ಹೊತ್ತು ಕುದಿಸಿ, ಹುಳಿ-ಸಿಹಿ ಚಟ್ನಿ ತಯಾರಿಸಿಕೊಳ್ಳಿ.
ಒಂದು ತಟ್ಟೆಗೆ ಬೇಯಿಸಿದ ಹೆಸರುಕಾಳು ಹರಡಿ. ಅದರ ಮೇಲೆ ಚಟ್ನಿಯ ಒಂದು ಪದರ ಹರಡಿ ಮತ್ತೆ ಹೆಸರುಕಾಳು ಹರಡಿ.ಆಮೇಲೆ ಹೆಚ್ಚಿದ ಈರುಳ್ಳಿ ,ಟೊಮೇಟೋ,ಖಾರಾ ಸೇವ್ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.
ಹೆಸರು ಕಾಳಿನ ದೋಸೆ
ಬೇಕಾಗುವ ಸಾಮಗ್ರಿಗಳು
ಮೊಳಕೆ ಬರಿಸಿದ ಹೆಸರುಕಾಳು 1/2ಪ್ ,ಹಸಿಮೆಣಸಿನ ಕಾಯಿ 4 ,ಶುಂಠಿ ಸ್ವಲ್ಪ , ಬೆಳ್ತಿಗೆ ಅಕ್ಕಿ 1ಕಪ್ ,ಅವಲಕ್ಕಿ 1/4 ಕಪ್ ,ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಒಂದು ದಿನ ಮುಂಚೆ ಹೆಸರುಕಾಳು ನೆನೆಸಿ ಮೊಳಕೆ ಮಾಡಿಟ್ಟುಕೊಳ್ಳಿ .ನಂತರ ಅಕ್ಕಿ ಮತ್ತು ಅವಲಕ್ಕಿ ಸುಮಾರು 2 ರಿಂದ 3 ಗಂಟೆಗಳ ಕಾಲ ನೆನೆಸಿಡಿ. ಆಮೇಲೆ ಮೊಳಕೆ ಬಂದ ಹೆಸರಕಾಳು, ಹಸಿಮೆಣಸಿನಕಾಯಿ , ಶುಂಠಿ ,ಅಕ್ಕಿ ,ಅವಲಕ್ಕಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿರಿ. 10 ರಿಂದ 15 ನಿಮಿಷದ ನಂತರ ತೆಳ್ಳಗೆ ದೋಸೆ ಮಾಡಿ ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.