ಮುಂದುವರಿದ ಗಾಳಿ -ಮಳೆ; ವ್ಯಕ್ತಿ ಸಾವು; ಮನೆ, ಕೃಷಿ ತೋಟಗಳಿಗೆ ಹಾನಿ
Team Udayavani, Jun 13, 2020, 7:00 AM IST
ಮಂಗಳೂರು/ಉಡುಪಿ: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಭಾರೀ ಮಳೆ-ಗಾಳಿಯಿಂದಾಗಿ ಕೆಲವು ಕಡೆ ಕೃಷಿ, ಮನೆಗೆ ಹಾನಿಯಾಗಿದ್ದರೆ ಗುರುಪುರದಲ್ಲಿ ಮನೆಯ ಆವರಣಗೋಡೆ ವ್ಯಕ್ತಿಯ ಮೇಲೆ ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಬೆಳ್ತಂಗಡಿ ತಾ|ನ ಕುಪ್ಪೆಟ್ಟಿ ಪ್ರದೇಶದಲ್ಲಿ ಭಾರೀ ಗಾಳಿಯಿಂದ ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಕೆಲವು ಕಡೆ ಭಾರೀ ಮಳೆ ಯಾಗುತ್ತಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.
ಗುರುಪುರ: ವ್ಯಕ್ತಿ ಸಾವು
ಗುರುಪುರ ಗ್ರಾಮ ಪಂ. ವ್ಯಾಪ್ತಿಯ ಮೂಳೂರು ಗ್ರಾಮದ ಮಠದ ಗುಡ್ಡೆಯ ನಿವಾಸಿ ನಾರಾಯಣ ನಾಯ್ಕ (52) ಅವರ ಮೇಲೆ ಅವರಣ ಗೋಡೆ ಜರಿದು ಬಿದ್ದ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
ಅಡಿಕೆ ತೋಟಗಳಿಗೆ ಹಾನಿ
ಜಿಲ್ಲೆಯ ಬಂಟ್ವಾಳ, ಮೂಡುಬಿದಿರೆ, ವಿಟ್ಲ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ ಸೇರಿ ದಂತೆ ಕೆಲವು ಕಡೆ ಭಾರೀ ಗಾಳಿ ಮಳೆಯಾಗಿದ್ದು ಕೆಲವು ಕಡೆ ಅಪಾರ ಹಾನಿ ಉಂಟಾಗಿದೆ. ಗಾಳಿಗೆ ಮಂಗಳೂರಿನ ಅತ್ತಾವರ, ಕೊಟ್ಟಾರ ಚೌಕಿ ಸೇರಿದಂತೆ ಕೆಲವು ಕಡೆಗಳಲ್ಲಿ ರಸ್ತೆಗೆ ಮರ ಬಿದ್ದಿತ್ತು. ಗುರುವಾರ ರಾತ್ರಿ ಸುರಿದ ಮಳೆ ಮತ್ತು ಗಾಳಿಯ ರಭಸಕ್ಕೆ ನಗರದ ಬೆಂಗ್ರೆಯ ಅಳಿವೆಬಾಗಿಲು ಬಳಿಯ ರಾಣಿ ಅಬ್ಬಕ್ಕ ಪಾರ್ಕ್ ಬಳಿ ಇರುವ ಮನೆಯೊಂದಕ್ಕೆ ಮರಬಿದ್ದ ಘಟನೆ ನಡೆದಿತ್ತು.
ಕುಪ್ಪೆಟ್ಟಿಯಲ್ಲಿ ಕೃಷಿ, ಮನೆಗೆ ಹಾನಿ
ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಸುತ್ತಮುತ್ತ ವಿಪರೀತ ಸುಳಿಗಾಳಿ ಬೀಸಿದ ಪರಿಣಾಮ ಮನೆ, ಅಡಿಕೆ ತೋಟಗಳಿಗೆ ಭಾರೀ ಹಾನಿ ಆಗಿದೆ. ಸುಮಾರು 800ಕ್ಕಿಂತ ಅಧಿಕ ಅಡಿಕೆ ಮರಗಳು, ಗೇರುಬೀಜ ಮರಗಳು ಧರಾಶಾಯಿಯಾಗಿವೆ. ನರ್ಸಪಾಲು ರವಿ
ಕುಮಾರ್ ಅವರ 400 ಫಲ ಬರುವ ಅಡಿಕೆಮರ, ಬಾಳೆಗಿಡ, ಧರೆಗುಳಿದಿದ್ದರೆ ಪಕ್ಕದ ಯೋಗೀಶ್ ಅವರ 200ಕ್ಕೂ ಹೆಚ್ಚಿನ ಗೇರುಬೀಜದ ಮರಗಳು ನೆಲಸಮವಾಗಿದೆ. ಬರಮೇಲು ಈಶ್ವರಪೂಜಾರಿ, ನವೀನ್ ಶೆಟ್ಟಿ ಅವರ ಮನೆ, ಕೃಷಿ ತೋಟಗಳಿಗೂ ಹಾನಿಯಾಗಿದೆ.
ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ಕುಪ್ಪೆಟ್ಟಿ ಸಮೀಪ ಬೃಹದಾಕಾರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಗಾಳಿಯ ರಭಸಕ್ಕೆ ಯಾರ್ಯ ಸಮೀಪದ ಸುಂದರಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪುತ್ತಿಲ ಸಮೀಪದ ಆದಂ ಅವರ ಮಾಡಿನ ಹೆಂಚುಗಳು ಹಾರಿಹೋಗಿವೆ. ವಿದ್ಯುತ್ ಸಂಪರ್ಕ ವ್ಯತ್ಯಯವಾಗಿತ್ತು.
ಸಿಡಿಲಿನ ಆಘಾತ
ಸಿಡಿಲಿನ ಆಘಾತದ ಪರಿಣಾಮ ಸುಳ್ಯದ ವ್ಯಕ್ತಿಯೋರ್ವ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಜಯನಗರದ ನಾರಾಜೆಯಲ್ಲಿನ ಸಹೋದರಿ ಮನೆಗೆ ಬಂದಿದ್ದ ಜಯರಾಮ ಅವರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲಾಘಾತಕ್ಕೆ ಅಸ್ವಸ್ಥಗೊಂಡು ಕುಸಿದು ಬಿದ್ದರು. ಬಳಿಕ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಉಡುಪಿ: ವಿವಿಧೆಡೆ ಹಾನಿ
ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಗಾಳಿ ಮಳೆಗೆ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ನಿವಾಸಿಗಳಾದ ದೇವೇಂದ್ರ ನಾಯಕ್ ಅವರ ಮನೆಗೆ ಹಾನಿಯಾಗಿ 15 ಸಾವಿರ ನಷ್ಟ ಸಂಭವಿಸಿದ್ದರೆ ಸುಶೀಲಾ ನಾಯ್ಕ ಅವರ ಮನೆಗೆ ಹಾನಿಯಾಗಿದೆ. ನಗರದಲ್ಲಿ ಮಳೆಗೆ ನಗರ ಹಾಗೂ ಆಸುಪಾಸುಗಳ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು.
ಕುಂದಾಪುರ ತಾಲೂಕಿನಲ್ಲಿ ಅಂಗನವಾಡಿ, ಹಾಲು ಉತ್ಪಾದಕರ ಸಂಘದ ಕಚೇರಿ ಮತ್ತು ಹಲವು ಮನೆಗಳಿಗೆ ಹಾನಿಯಾಗಿದೆ. ಉಳೂ¤ರು ಗ್ರಾಮದ ಅಂಗನವಾಡಿ ಮೇಲೆ ಮರ ಬಿದ್ದಿದೆ. ಅಂಗನವಾಡಿ ಇನ್ನೂ ತೆರೆಯದೇ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿ ಮೇಲೆ ಮಳೆಯಿಂದಾಗಿ ಹಾನಿಯಾಗಿದೆ. ಗಜೇಂದ್ರ, ಗಿರಿಜಾ, ಲಕ್ಷ್ಮಿ, ಚಿಕ್ಕು, ಗುಲಾಬಿ, ಪ್ರಭಾಕರ, ತೆಕ್ಕಟ್ಟೆಯ ಗುಲಾಬಿ ಅವರ ಕೊಟ್ಟಿಗೆಗೆ, ಹೆಂಗವಳ್ಳಿ ಗ್ರಾಮದ ಆನಂದ ಕುಲಾಲ್ ಅವರ ತೋಟಕ್ಕೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.