ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣಕ್ಕೆ ಹೊಸ ಟರ್ಫ್
Team Udayavani, Jun 13, 2020, 10:02 AM IST
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣಕ್ಕೆ ಬೃಹತ್ ಯಂತ್ರಗಳ ಸಹಾಯದಿಂದ ಹೊಸ ಟರ್ಫ್ ಅಳವಡಿಕೆ ಮಾಡುತ್ತಿರುವ ಸಿಬ್ಬಂದಿ.
ಬೆಂಗಳೂರು: ಉದ್ಯಾನನಗರಿಯಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣಕ್ಕೆ ಹೊಸ ಟರ್ಫ್ ಅಳವಡಿಕೆ ಕಾರ್ಯ ವೇಗವಾಗಿ ಸಾಗುತ್ತಿದೆ. ಇನ್ನೊಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ್ ತಿಳಿಸಿದ್ದಾರೆ.
ಉದಯವಾಣಿಗೆ ಜತೆಗೆ ದೂರವಾಣಿ ಮೂಲಕ ಮಾತನಾಡಿದ ಸತ್ಯನಾರಾಯಣ್ ಅವರು, “ಈ ಹಿಂದೆ 2011ರಲ್ಲಿ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಕೆ ಮಾಡಲಾಗಿತ್ತು, ಅಂದು ಫಿಫಾ ವತಿಯಿಂದಲೇ ಟರ್ಫ್ ಅಳವಡಿಕೆಯಾಗಿತ್ತು, ಆದರೆ ಈ ಸಲ ಕರ್ನಾಟಕ ಫುಟ್‌ಬಾಲ್ ಸಂಸ್ಥೆ ತನ್ನದೇ ಹಣದಲ್ಲಿ ಕ್ರೀಡಾಂಗಣಕ್ಕೆ ಟರ್ಫ್ ಖರೀದಿ ಮಾಡಿದೆ. ಒಟ್ಟಾರೆ 1.75 ಕೋಟಿ ರೂ. ಟರ್ಫ್ ಖರೀದಿಗೆ ವೆಚ್ಚವಾಗಿದೆ, ಕೊರೊನಾದಿಂದಾಗಿ ಲಾಕ್‌ಡೌನ್ ಆಗುವ ಎರಡು ದಿನಕ್ಕೆ ಮೊದಲು ಇಟಲಿಯಿಂದ ಬೆಂಗಳೂರಿಗೆ ಟರ್ಫ್ ಬಂದಿತ್ತು, ಅದು ನಮ್ಮ ಅದೃಷ್ಟ, ಸ್ವಲ್ಪ ತಡವಾಗಿದ್ದರೂ ಇಂದು ಕಾಮಗಾರಿ ಕೆಲಸವನ್ನು ಇಷ್ಟು ವೇಗವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ತಿಳಿಸಿದರು.
ಮುಂಜಾಗ್ರತೆ ಕ್ರಮ: ಇಟಲಿಯಲ್ಲಿ ಕೊರೊನಾ ಹೆಚ್ಚಿದ್ದರ ಹಿನ್ನೆಲೆಯಲ್ಲಿ ಅಲ್ಲಿಂದ ಬಂದಿರುವ ಟರ್ಫ್ ಅನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಬಳಸಿಕೊಳ್ಳಲಾಗುತ್ತಿದೆ. ಹಳೆ ಟರ್ಫ್ ಅನ್ನು ತೆಗೆಯುವ ಕೆಲಸ ಸಾಗುತ್ತಿದೆ, ಬಹುತೇಕ ಈ ಕೆಲಸ ಪೂರ್ಣಗೊಳ್ಳುತ್ತಿದೆ, ಅಳವಡಿಕೆ ಮಾಡುವುದಕ್ಕೆಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಒಟ್ಟಾರೆ ಎಂದರೂ 20 ದಿನದ ಕೆಲಸವಷ್ಟೇ ಸಾಕು, ಈಗಾಗಲೇ ಕ್ರೀಡಾಂಗಣದ ಒಟ್ಟಾರೆ ವಿಸ್ತೀರ್ಣದಷ್ಟು ಹೊಸ ಟರ್ಫ್ ಇದೆ, ಅದನ್ನು ಅಳವಡಿಕೆ ಮಾಡುವುದಷ್ಟೇ ಕೆಲಸ’ ಎಂದು ಸತ್ಯ ತಿಳಿಸಿದರು.
ಏನಿದು ಟರ್ಫ್?
ನೈಸರ್ಗಿಕವಾಗಿರುವ ಹುಲ್ಲಿನಿಂದ ಮಾಡಲ್ಪಟ್ಟ ಹೊದಿಕೆಯನ್ನು ಕ್ರೀಡಾಂಗಣಕ್ಕೆ ಅಳವಡಿಸಿದರೆ ಅದರಲ್ಲಿ ದಿನವೊಂದಕ್ಕೆ ಹೆಚ್ಚು ಪಂದ್ಯಗಳನ್ನು ಆಡಿಸಲು ಸಾಧ್ಯವಿಲ್ಲ, ದಿನಕ್ಕೆ 1 ಪಂದ್ಯ ಮಾತ್ರ ಆಡಿಸಬಹುದು, ಬಳಿಕ ನೀರು ಹಾಕಿ ಹುಲ್ಲಿನ ಹೊದಿಕೆಯನ್ನು ನಿರ್ವಹಣೆ ಮಾಡಬೇಕಾಗುತ್ತದೆ, ಇದಕ್ಕೆಲ್ಲ ಹೆಚ್ಚು ಸಮಯ ಹಿಡಿಯುತ್ತದೆ, ಆದರೆ ಕೃತಕ ಹುಲ್ಲಿನ ಹಾಸಿನಲ್ಲಿ ಹಾಗಲ್ಲ, ದಿನವೊಂದಕ್ಕೆ 10 ಪಂದ್ಯಗಳನ್ನು ಬೇಕಾದರೂ ಆಡಿಸಬಹುದು, ಇದರಿಂದ ಕೃತಕ ಹುಲ್ಲು ಹಾಸಿಗೆ ಹಾನಿಯಾಗುವುದಿಲ್ಲ, ಕರ್ನಾ ಟಕ ಫುಟ್‌ಬಾಲ್ ಸಂಸ್ಥೆ ಅಡಿಯಲ್ಲಿ 150ಕ್ಕೂ ಹೆಚ್ಚು ಕ್ಲಬ್ ತಂಡಗಳಿವೆ, ಪ್ರತಿ ತಂಡಗಳಿಗೂ ಆಡುವ ಅವಕಾಶ ಕಲ್ಪಿಸಬೇಕಾಗು ತ್ತದೆ, ಹೀಗಾಗಿ ಕೃತಕ ಹುಲ್ಲಿನಿಂದ ಮಾಡಲ್ಪಟ್ಟ ಹೊದಿಕೆಯನ್ನು ಕ್ರೀಡಾಂಗಣಕ್ಕೆ ಹಾಕುವುದರಿಂದ ನಿರ್ವಹಣೆಯೂ ಕಡಿಮೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ
Perth Test: ಅಭಿಮನ್ಯು, ನಿತೀಶ್ ಪದಾರ್ಪಣೆಯ ನಿರೀಕ್ಷೆ
INDvsAUS: ವನಿತಾ ಕ್ರಿಕೆಟಿಗರ ಆಸ್ಟ್ರೇಲಿಯ ಪ್ರವಾಸ: ಶಫಾಲಿ, ಶ್ರೇಯಾಂಕಾ ತಂಡದಿಂದ ಔಟ್
IPL 2025: ಗಾವಸ್ಕರ್ ಹೇಳಿಕೆಯನ್ನು ಅಲ್ಲಗಳೆದ ರಿಷಭ್ ಪಂತ್
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.