ಕಲಾದಗಿ: ಬಿತ್ತನೆ ಕಾರ್ಯ ಆರಂಭ
Team Udayavani, Jun 13, 2020, 12:35 PM IST
ಕಲಾದಗಿ: ನಿರೀಕ್ಷೆಯಂತೆ ಮುಂಗಾರು ಮಳೆ ನಿಗದಿತ ಸಮಯಕ್ಕೆ ಸುರಿದ ಪರಿಣಾಮ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಗಾರು ಬೆಳೆಗಳಾದ ಸಜ್ಜಿ, ಹೆಸರು, ನವಣಿಗೆ, ತೊಗರಿ, ಶೇಂಗಾ, ಮುಂಗಾರಿ ಜೋಳ, ಗೋವಿನ ಜೋಳ, ಆಲಸಂದಿ ಬಿತ್ತನೆ ಮಾಡಲಿದ್ದು, ಬೀಜ ಖರೀದಿಯಲ್ಲಿ ರೈತ ನಿರತನಾಗಿದ್ದರೆ, ಕೆಲ ರೈತರು ಬಿತ್ತನೆ ಕಾರ್ಯಆರಂಭಿಸಿದ್ದಾರೆ.
ಇಲಿನ ರೈತ ಸಂಪರ್ಕ ಕೇಂದ್ರದ ಎದುರು ರೈತರು ಬಿತ್ತನೆ ಬೀಜ ಖರೀದಿಗೆಸರದಿ ಸಾಲಿನಲ್ಲಿ ನಿಂತು ಬೀಜ ಖರೀದಿಸುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ 51 ಕ್ವಿಂಟಲ್ ಗೋವಿನ ಜೋಳ, ಸಜ್ಜಿ 7.92 ಕ್ವಿಂಟಲ್, ಸೂರ್ಯಕಾಂತಿ 6.00 ಕ್ವಿಂಟಲ್, ಉದ್ದು 3 ಕ್ವಿಂಟಲ್, ಹೆಸರು 29.4 ಕ್ವಿಂಟಲ್, ತೊಗರಿ 6.60 ಕ್ವಿಂಟಲ್ ದಾಸ್ತಾನಿದೆ. ಗೋವಿನ ಜೋಳ ಬೀಜ 24 ಕ್ವಿಂ., ಸಜ್ಜಿ 5.15 ಕ್ವಿಂ., ಸೂರ್ಯಕಾಂತಿ 2.8 ಕ್ವಿಂ., ಉದ್ದು 3 ಕ್ವಿಂ., ಹೆಸರು 28 ಕ್ವಿಂ., ತೊಗರಿ ಬೀಜ 5 ಕ್ವಿಂ. ಮಾರಾಟವಾಗಿದೆ ಎಂದು ಕೃಷಿ ಅಧಿಕಾರಿ ಎಸ್.ಆರ್. ಹಡಪದ ತಿಳಿಸಿದ್ದಾರೆ.
ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ ಭೌಗೋಳಿಕ ಕ್ಷೇತ್ರ 25,867.65 ಎಕರೆ ಪ್ರದೇಶ, ಇದರಲ್ಲಿ ನೀರಾವರಿ 10,697.67 ಎಕರೆ ಪ್ರದೇಶ, 7295 ಎಕರೆ ಖುಷ್ಕಿ ಪ್ರದೇಶ ಹೊಂದಿದೆ. ಒಟು ಸಾಗುವಾಳಿ ಕ್ಷೇತ್ರ 17992.67 ಎಕರೆ ಪ್ರದೇಶ ಹೊಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.