ಪಾಕ್ ಆರ್ಥಿಕತೆಯಲ್ಲಿ ಮಹಾಕುಸಿತ: 68 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ
Team Udayavani, Jun 13, 2020, 1:25 PM IST
ಇಸ್ಲಾಮಾಬಾದ್: ಕೋವಿಡ್ ಬಾಧಿಸುವ ಮೊದಲೇ ದುರ್ಬಲ ಆರ್ಥಿಕ ಶಕ್ತಿಯಾಗಿದ್ದ ಪಾಕಿಸ್ಥಾನಕ್ಕೆ ಕೋವಿಡ್ 19 ಮಹಾ ಆಘಾತ ನೀಡಿದೆ. ಈ ತಿಂಗಳ 30ರಂದು ಕೊನೆಗೊಳ್ಳಲಿರುವ ಹಾಲಿ ವಿತ್ತ ವರ್ಷವು ಕಳೆದ 68 ವರ್ಷದಲ್ಲೇ ಅತಿ ಕನಿಷ್ಠವಾದ ಶೇ. 0.38ಕ್ಕಿಳಿಯಲಿದೆ ಎಂದು ಗುರುವಾರ ನಡೆಸಲಾದ ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
ಇದುವರೆಗೆ ದೇಶದಲ್ಲಿ 1,20,000 ಮಂದಿಗೆ ಸೋಂಕು ತಗಲಿಸಿರುವ ಕೋವಿಡ್ ಕಾರಣದಿಂದಾಗಿ ಮಾರ್ಚ್‌ನಿಂದ ಕೆಲವು ವಾರಗಳ ಕಾಲ ಲಾಕ್‌ಡೌನ್ ಮಾಡಿದ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಗಂಭೀರ ಅಡ್ಡ ಪರಿಣಾಮವಾಗಿದೆ ಎಂದು ಪಾಕಿಸ್ಥಾನ್ ಎಕಾನಮಿಕ್ ಸರ್ವೆ 2019-20 ಅನ್ನು ಬಿಡುಗಡೆಗೊಳಿಸಿ ಆರ್ಥಿಕ ಸಲಹೆಗಾರ ಅಬ್ದುಲ್ ಹಫೀಜ್ ಶೇಖ್ ಅವರು ಹೇಳಿದ್ದಾರೆ.
ಈ ದೇಶದಲ್ಲಿ ಕೋವಿಡ್ ಗಿಂತ ಮೊದಲೇ ಆರ್ಥಿಕ ಸ್ಥಿರೀಕರಣ ನೀತಿಯಿಂದಾಗಿ ಕೈಗಾರಿಕಾ ವಲಯದ ಮೇಲೆ ಅಡ್ಡ ಪರಿಣಾಮವಾಗಿತ್ತು. ಅದರ ಜತೆಗೆ ಕೋವಿಡ್ ಸೇರಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ.
ಕೃಷಿ ಕ್ಷೇತ್ರದಲ್ಲಿ ಮಾತ್ರ ಶೇ. 2.7ರಷ್ಟು ಏರಿಕೆ ಕಂಡಿದ್ದು, ಕೈಗಾರಿಕೆ ಮತ್ತು ಸೇವಾ ವಲಯಗಳು ಋಣಾತ್ಮಕ ಬೆಳವಣಿಗೆ ದರಕ್ಕೆ ಸಾಕ್ಷಿಯಾಗಿದೆ. ಇವೆಲ್ಲವುಗಳ ಕಾರಣದಿಂದ ಒಟ್ಟು ಬೆಳವಣಿಗೆ ದರವು ಶೇ. 0.38ಕ್ಕೆ ಕುಸಿದಿದೆ ಎಂದು ಆರ್ಥಿಕ ಸರ್ವೇಯಲ್ಲಿ ತಿಳಿಸಲಾಗಿದೆ.
ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ ದೇಶವು ತಲಾ ಆದಾಯವು 1,336ಕ್ಕೆ ಕುಸಿದಿದ್ದು, ಇದು ಶೇ. 6.1ರಷ್ಟು ಇಳಿಕೆಯಾಗಿದೆ. ಆದರೆ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 2,14,539 ರೂ. ಗೇರಿದೆ ಎಂದು ತಿಳಿದು ಬಂದಿದೆ. ಕೋವಿಡ್ ಕಾರಣದಿಂದಾಗಿ ಉಂಟಾಗಿರುವ ರಫ್ತು ಮತ್ತು ಪಾವತಿ ಕುಸಿತವು ಅಭಿವೃದ್ಧಿ ಹೊಂದುವ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಚ್ಚರಿಸಿದೆ ಎಂಬುದಾಗಿ ಶೇಖ್ ಹೇಳಿದ್ದಾರೆ.
“ಜಾಗತಿಕ ಬೇಡಿಕೆ ಕುಸಿತದಿಂದಾಗಿ ರಫ್ತು ಕುಸಿತವಾಗಿದೆ ಮತ್ತು ವಿದೇಶ ಗಳಲ್ಲಿ ದುಡಿಯುವ ಪಾಕಿಸ್ಥಾನೀಯರು ಉದ್ಯೋಗ ಕಳೆದುಕೊಂಡಿರುವ ಕಾರಣದಿಂದಾಗಿ ಪಾವತಿಯೂ ಕುಸಿದಿದೆ’ ಎಂದು ಅವರು ಹೇಳಿದ್ದಾರೆ.
ತೆರಿಗೆ ಸಂಗ್ರಹ ಲೆಕ್ಕಾಚಾರ
ಜುಲೈ- ಎಪ್ರಿಲ್ 2020ರ ಅವಧಿಯಲ್ಲಿ ತೆರಿಗೆ ಸಂಗ್ರಹವು 3,300.6 ರೂ. ಬಿಲಿಯನ್ ಆಗಿದ್ದು, ಶೇ. 10.8 ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,980 ರೂ. ಬಿಲಿಯನ್ ತೆರಿಗೆ ಸಂಗ್ರಹವಾಗಿತ್ತು. ಈ ಅವಧಿಯಲ್ಲಿ 4,510 ರೂ. ಬಿಲಿಯನ್ ತೆರಿಗೆ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿತ್ತು. ಈ ಬಾರಿ ಖಾತೆ ಕೊರತೆಯು 2.8 ಬಿಲಿಯನ್ ಡಾಲರ್ ಆಗಿದ್ದು, (ಜಿಡಿಪಿಯ ಶೇ. 1.1) ಶೇ. 73.1ಕ್ಕೆ ಕುಸಿದಿದೆ. ಕಳೆದ ವರ್ಷ ಇದು 10.3 ಬಿಲಿಯನ್ ಡಾಲರ್ ಆಗಿದ್ದು, ಜಿಡಿಪಿಯ ಶೇ. 3.7 ಆಗಿತ್ತು. ಈ ಬಾರಿ ಖಾತೆ ಕೊರತೆಯು 20 ಬಿಲಿ ಯನ್ ಡಾಲರ್ ಆಗುವ ಸಾಧ್ಯತೆಯಿತ್ತು. ನಾವದನ್ನು 3 ಬಿಲಿಯನ್ ಡಾಲರ್‌ಗೆ ಇಳಿ ಸಿರುವುದು ದೊಡ್ಡ ಸಾಧನೆಯಾಗಿದೆ ಎಂದು ಶೇಖ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.