ವಿದ್ಯಾರ್ಥಿ ಜೀವನದ ಹವ್ಯಾಸಗಳು ಬದುಕನ್ನು ರೂಪಿಸಬಹುದು
students life
Team Udayavani, Jun 13, 2020, 2:20 PM IST
ವಿದ್ಯಾರ್ಥಿ ಎಂದರೆ ಯಾರು ಎಂಬುದನ್ನು ನಾವು ಅರಿತಾಗ ಮಾತ್ರ ಆತನ ಜವಾಬ್ದಾರಿ ಹೆಚ್ಚಲು ಸಾಧ್ಯ. ಇದೊಂದು ಸಂಸ್ಕೃತ ಪದ. “ವಿದ್ಯಾಯಾ ಅರ್ಥಿ’ ಎಂದು ಇದನ್ನು ಬಿಡಿಸಿ ಹೇಳುವುದಿದೆ. ವಿದ್ಯೆಯನ್ನು ಸಂಪಾದಿಸುವುದೇ ಈತನ ಮುಖ್ಯ ಗುರಿಯಾಗಿರುತ್ತದೆ. ಹಾಗಾದರೆ ವಿದ್ಯೆ ಎಂದರೆ ಯಾವುದು? 64 ವಿದ್ಯೆಗಳನ್ನು
ಅನೇಕ ಗ್ರಂಥಗಳು ಹೇಳುತ್ತವೆ. ಅಕ್ಷರ ಮಾತ್ರ ವಿದ್ಯೆಯಲ್ಲ. ಸಮಾಜದಲ್ಲಿ ಆರೋಗ್ಯಕರವಾದ ಬದುಕಿಗೆ ಏನೆಲ್ಲ ಆವಶ್ಯಕ ಮತ್ತು ಯಾವುದನ್ನು ಅಪೇಕ್ಷಿಸುತ್ತೇವೆಯೋ ಅವೆಲ್ಲವುಗಳ ಅರ್ಜನೆಯೂ ವಿದ್ಯೆಯೇ ಆಗಿರುತ್ತದೆ.
ಗ್ರಂಥಗಳೆಂದರೆ ಬರೀ ಹೆಬ್ಬೊತ್ತಿಗೆಯಲ್ಲ. ಅವುಗಳು ಜೀವನದ ಸಾರಗಳು. ವಿದ್ಯಾರ್ಥಿ ಜೀವನದಲ್ಲಿ ನಾವು ಹಾದಿ ತಪ್ಪಲು ಸಾಕಷ್ಟು ಅಡೆ ತಡೆಗಳು ಇರುತ್ತವೆ. ಇವುಗಳ ಲಾಭ ಪಡೆದುಕೊಳ್ಳುವ ರಾಜಕೀಯ ಮುಂದಾಳುಗಳು ತಮ್ಮ ಪಕ್ಷಕ್ಕೆ ಬಲ ಬರಬೇಕೆಂದು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದಿದೆ. ಬಿಸಿ ರಕ್ತವಾದ ಕಾರಣ ಅವುಗಳತ್ತ ಆಕರ್ಷಿತರಾಗುತ್ತಾರೆ. ಆದರೆ ಇದಕ್ಕೆ ಬಲಿಯಾಗಿ ಜೀವ ನವನ್ನು ತ್ರಿಶಂಕು ಸ್ಥಿತಿಯಲ್ಲಿ ಕಂಡವರೂ ಇದ್ದಾರೆ. ಆದರೆ ತಪ್ಪಿನ ಅರಿವಾಗುವ ಹೊತ್ತಿಗೆ ಸಮಯ ಮೀರಿರುತ್ತದೆ.
ಹಿಂದೆ “ಗುರುಕುಲ’ ಪದ್ಧತಿ ಇತ್ತು. ಶಿಷ್ಯರು ಗುರುವಿನ ಸಾನ್ನಿಧ್ಯದಲ್ಲಿ ಕುಳಿತು ಅಭ್ಯಾಸ ಕಾರ್ಯದಲ್ಲಿ ತೊಡಗುತ್ತಿದ್ದರು. ಅಂದಿನ ಕಾಲದಲ್ಲಿ ಗುರುಕುಲದಲ್ಲಿದ್ದ ಶಿಷ್ಯರು ಯಾವ ರೀತಿ ಅಭ್ಯಸಿಸುತ್ತಿದ್ದರೆಂದು ಬಾಣನ ಕಾದಂಬರಿಯಿಂದ ತಿಳಿಯಬಹುದಾಗಿದೆ. ಶುಕನಾಸ ಮಂತ್ರಿಯು ಮಹಾ ಪಂಡಿತ. ಲೋಕದ ಅನುಭವ ತಿಳಿದವನು. ಅವನು ರಾಜಕುಮಾರ ಚಂದ್ರಾ ಪೀಡನಿಗೆ ಉಪದೇಶಿಸಿದ್ದು ಮಾದರಿಯಾಗಿದೆ. ಅವನು ಅರಸೊತ್ತಿಗೆಯ ಮಬ್ಬಿನೊಂದಿಗೆ ಲಕ್ಷ್ಮಿಯ ಪ್ರಭಾವದಿಂದ ಅನರ್ಥಗಳಾಗುವುದರಿಂದ ರಾಜ ಕುಮಾರರು ಅದನ್ನು ನಂಬ ಬಾರದೆಂದು ಹೇಳಿದ್ದಾನೆ. ಯೌವ್ವನ, ಧನಸಂಪತ್ತು. ಪ್ರಭುತ್ವ, ಅವಿವೇಕ ಇವುಗಳ ಬಲೆಗೆ ಬಿಳಬಾರದು ಎಂಬ ಎಚ್ಚರಿಕೆಯನ್ನೂ ಅವನು ನೀಡಿದ್ದಾನೆ ಈ ಮೇಲಿನವುಗಳಿಗೆ ಬಲಿಯಾಗದೆ ಜ್ಞಾನಾರ್ಜನೆಯಲ್ಲಿ ತೊಡಗುವುದೇ ನಿಜವಾದ ವಿದ್ಯಾರ್ಥಿಯ ಲಕ್ಷಣವಾ ಗಿದೆ. ಇದೇ ಮಾದರಿಯಾಗಿ ಶೇಕ್ಸ್ ಪಿಯರ್‌ನ ಅತ್ಯುನ್ನತ ನಾಟಕವಾದ ಹ್ಯಾಮ್‌ಲೆಟ್‌ನಲ್ಲಿ ಪೋಲೋನಿಯಸ್‌ನು ತನ್ನ ಮಗ ವಿದ್ಯಾಭ್ಯಾಸಕ್ಕೆಂದು ಹೊರಟಾಗ ಹೇಳಿದ ಮಾತುಗಳು ಮಾನವೀಯವಾಗಿವೆ.
‘Give every man thy ear few voice”
ವಿಲಾಸೀ ಜೀವನ ಪದ್ಧತಿಯನ್ನು ವಿದ್ಯಾರ್ಥಿಗಳು ಅನುಸರಿಸುತ್ತಿದ್ದಾರೆ. ಆಧುನಿಕ ಜೀವನ ಪದ್ಧತಿಯ ಕಡೆಗೆ ಆಕರ್ಷಿತರಾಗದೆ ಶಿಕ್ಷಣದ ನೈಜ ಆಶಯವನ್ನು ಈಡೇರಿಸುವತ್ತ ಮನಸ್ಸು ಮಾಡಬೇಕಾಗಿದೆ. ಕಷ್ಟ ಪಟ್ಟು ವ್ಯಾಸಂಗದತ್ತ ಮುಖ ಮಾಡಬೇಕು. ಆಯಾಸವಿಲ್ಲದೆ ಯಾವ ಸಿಂಹದ ಬಾಯಿಯಲ್ಲಿಯೂ ಆಹಾರವು ತಾನಾಗಿಯೇ ಬಂದು ಬೀಳುವುದಿಲ್ಲ. ಹಾಗಾಗಿಯೇ ವಿದ್ಯಾರ್ಥಿಯಾದವನು ಸಾಧಕನಾಗಬೇಕಾದರೆ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಯು ಸುಖವನ್ನು ಬಿಡಬೇಕು. ಇಲ್ಲವಾದರೆ ಸುಖಾರ್ಥಿಯು ವಿದ್ಯೆಯನ್ನು ಬಿಡಬೇಕು. ವಿದ್ಯಾರ್ಥಿಯಾದವನು ಪ್ರತಿದಿನ ಕ್ರೀಯಾಶೀಲವಾಗಿರಬೇಕು. ಅಭ್ಯಾಸದ ಜತೆಗೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡರೆ ಉತ್ತಮ ಭವಿಷ್ಯತ್ತಿಗೆ ನಾಂದಿಯಾಗುತ್ತದೆ.
‘Early to bed and early to rise, makes a man healthy, wealthy, and wise”ಎಂಬುದು ಸಾಮಾನ್ಯವಾದರೂ ಅರ್ಥಪೂರ್ಣವಾಗಿದೆ.ಹಾಡುವುದೂ ಒಂದು ಕಲೆ. ಇದನ್ನು ಹವ್ಯಾಸವನ್ನಾಗಿಸಿ ಜೀವನವನ್ನು ಪಾವನವಾಗಿಸಿಕೊಂಡ ಅದೆಷ್ಟೋ ದಾಸ ಪುಂಗವರನ್ನು ನಾವು ಬಲ್ಲೆವು. ಜೀವನದ ಅತ್ಯಂತ ವೈಭವವನ್ನು ಕಂಡವರೂ ಇದ್ದಾರೆ. ಹಾಡುವ ಹವ್ಯಾಸ ಬೆಳೆಸಿಕೊಂಡರೆ ಮನಸ್ಸಿಗೆ ಸಂತೋಷ ಸಿಗುವುದರ ಜತೆಗೆ ಖ್ಯಾತಿಯನ್ನು ಗಳಿಸಬಹುದು. ಒಟ್ಟಿನಲ್ಲಿ ಹವ್ಯಾಸ ಯಾವುದೇ ಬಗೆಯದಾಗಿರಲಿ; ಅದು ವ್ಯಕ್ತಿಯ ಮನೋಭಾವ, ಸ್ವಭಾವ ಮತ್ತು ಅಭಿರುಚಿಗೆ ಸಂಬಂಧಪಟ್ಟದಾಗಿರುತ್ತದೆ. ನಮ್ಮ ಹವ್ಯಾಸಗಳು ಬೇರೆಯವರಿಗೆ ಅನುಕರಣೀಯವೋ, ಸಮಾಜಕ್ಕೆ ವಿಷಯಯುಕ್ತವೋ ಆಗಿರಬೇಕು.
ಮಧುರಾ ಎಲ್. ಭಟ್, ಎಸ್.ಡಿ.ಎಂ. ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.