18 ಮಕ್ಕಳು ಸೇರಿ 67 ಜನರಿಗೆ ಕೋವಿಡ್
ಉಸಿರಾಟ ಸಮಸ್ಯೆಯಿರುವ ಮಗುವಿಗೂ ಸೋಂಕು23 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ
Team Udayavani, Jun 14, 2020, 10:36 AM IST
ಕಲಬುರಗಿ: ಜಿಲ್ಲೆಗೆ ಕೋವಿಡ್ ಮಹಾ ಕಂಟಕ ಬೆಂಬಿಡದೆ ಕಾಡುತ್ತಿದ್ದು, ಶನಿವಾರ 18 ಮಕ್ಕಳು ಸೇರಿ ಮತ್ತೆ 67 ಜನರಿಗೆ ಮಹಾಮಾರಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 883ಕ್ಕೆ ಏರಿಕೆಯಾಗಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸೇಡಂ ತಾಲೂಕಿನ ನಾಲ್ಕು ವರ್ಷದ ಮಗು (ಪಿ-6805)ವಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ.
ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಕಲಬುರಗಿ ನಗರದ ಖಾನ್ ಕಾಲೋನಿಯ 30 ವರ್ಷದ ಪುರುಷ (ಪಿ-6772)ನಿಗೆ ಸೋಂಕು ಅಂಟಿಕೊಂಡಿದೆ. ಉಳಿದಂತೆ ಎಲ್ಲ ಸೋಂಕಿತರು ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿ ಬಂದವರೆ ಆಗಿದ್ದಾರೆ. ಮಹಾರಾಷ್ಟ್ರದ ನಂಟಿನಿಂದ ನಗರ ಪ್ರದೇಶದಲ್ಲಿ ಮಹಾಮಾರಿ ಸೋಂಕು ಮತ್ತಷ್ಟು ವ್ಯಾಪಿಸಿದೆ. ಸ್ವಾಸ್ತಿಕ ನಗರದಲ್ಲಿ 30 ವರ್ಷದ ಮಹಿಳೆ, 71 ವರ್ಷದ ವೃದ್ಧನಿಗೆ ಕೋವಿಡ್ ಕಾಣಿಸಿಕೊಂಡಿದೆ. ಅದೇ ರೀತಿ ಜಿಲಾನಬಾದ್ನಲ್ಲಿ ಎರಡು ವರ್ಷ ಮತ್ತು ಎಂಟು ವರ್ಷದ ಹೆಣ್ಣು ಮಕ್ಕಳಿಗೆ ಹೆಮ್ಮಾರಿ ವಕ್ಕರಿಸಿದೆ. ಬ್ರಹ್ಮಪುರ ಬಡಾವಣೆಯಲ್ಲಿ 27 ವರ್ಷದ ಯುವಕ, ರಾಮ ಮಂದಿರ ಬಳಿಯ 33 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ.
ಕವಲಗಾ ಬಿ. ಗ್ರಾಮದ ಮೂವರಿಗೆ ಸೋಂಕು ದೃಢಪಟ್ಟಿದೆ. ಚಿತ್ತಾಪುರ ತಾಲೂಕಿನಲ್ಲಿ 25 ಜನರು, ಆಳಂದ ತಾಲೂಕಿನಲ್ಲಿ 23 ಜನರು, ಅಫಜಲಪುರ ತಾಲೂಕಿನಲ್ಲಿ ಆರು ಹಾಗೂ ಕಾಳಗಿ, ಯಾಡ್ರಮಿ ಹಾಗೂ ಶಹಾಬಾದ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಕಾಳಗಿ ಮತ್ತು ಯಡ್ರಾಮಿಯಲ್ಲಿ ಎರಡು ವರ್ಷದ ಗಂಡು ಮಕ್ಕಳು, ಚಿತ್ತಾಪುರ ತಾಲೂಕಿನ ದೇವಾಪುರ ತಾಂಡಾದಲ್ಲಿ ಒಂದು ವರ್ಷದ ಹೆಣ್ಣು, ಎರಡು ವರ್ಷದ ಇಬ್ಬರು ಗಂಡು ಮಕ್ಕಳು, ಹತ್ತು ವರ್ಷದ ಬಾಲಕಿಗೆ ಸೋಂಕು ಮಕ್ಕರಿಸಿದೆ. ಅಫಜಲಪುರ ತಾಲೂಕಿನ ಗೊಬ್ಬೂರ ಬಿ. ಗ್ರಾಮದಲ್ಲಿ ಮೂರು ವರ್ಷದ ಗಂಡು ಮಗುವಿಗೆ ಕೋವಿಡ್ ಪತ್ತೆಯಾಗಿದೆ.
23 ಜನ ಬಿಡುಗಡೆ: ಕೋವಿಡ್ ಸೋಂಕಿಗೆ ಒಳಗಾಗಿದ್ದ 23 ಜನರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ತೆಲಂಗಾಣದಿಂದ ಕಮಲಾಪುರ ತಾಲೂಕಿನ 30 ವರ್ಷದ ವ್ಯಕ್ತಿ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ್ದ ಚಿತ್ತಾಪುರ ತಾಲೂಕಿನ 22 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 883 ಜನ ಸೋಂಕಿತರಲ್ಲಿ ಇದು ವರೆಗೆ 377 ಜನರು ಬಿಡುಗಡೆ ಆಗಿದ್ದಾರೆ. ಹತ್ತು ಸೋಂಕಿತರು ಮೃತಪಟ್ಟಿದ್ದು, ಉಳಿದಂತೆ 496 ಸೋಂಕಿತರಿಗೆ ಐಸೋಲೇಷನ್ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.