5 ನಗರಗಳಲ್ಲಿದ್ದಾರೆ ದೇಶದ ಅರ್ಧದಷ್ಟು ಸೋಂಕಿತರು
Team Udayavani, Jun 14, 2020, 1:07 PM IST
ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿ ಶೇ.50ರಷ್ಟು ಪ್ರಕರಣಗಳು 5 ನಗರಗಳಿಗೇ ಸೀಮಿತವಾಗಿವೆ ಎಂಬ ಅಂಶ ಈಗ ಬಹಿರಂಗವಾಗಿದೆ. ಆ ನಗರಗಳೆಂದರೆ ಮುಂಬಯಿ, ದಿಲ್ಲಿ, ಅಹಮದಾಬಾದ್, ಚೆನ್ನೈ ಮತ್ತು ಥಾಣೆ.
ಮುಂಬಯಿ
ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಸೋಂಕು ಅವ್ಯಾಹತವಾಗಿ ವ್ಯಾಪಿಸಿದ್ದು, ಮಹಾರಾಷ್ಟ್ರದ ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಮುಂಬಯಿಯಲ್ಲೇ ಪತ್ತೆಯಾಗಿವೆ. ಇಲ್ಲಿ 55 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದು, ಇದು ಸ್ವೀಡನ್, ನೆದರ್ಲೆಂಡ್, ಈಜಿಪ್ಟ್, ಯುಎಇ ಮತ್ತಿತರ ದೇಶಗಳ ಒಟ್ಟು ಪ್ರಕರಣಗಳನ್ನು ಮೀರಿಸಿದೆ. ಮುಂಬಯಿವೊಂದರಲ್ಲೇ 2 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.
ಅಹ್ಮದಾಬಾದ್
ಗುಜರಾತ್‌ನಲ್ಲಿ ಕಂಡುಬಂದ ಕೋವಿಡ್ ಸೋಂಕಿತರಲ್ಲಿ ಅತ್ಯಧಿಕ ಮಂದಿ ಇರುವುದು ಅಹ್ಮದಾಬಾದ್‌ನಲ್ಲಿ. ಇಲ್ಲಿ 16 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟಾರೆ 22,527 ಪ್ರಕರಣ ಪತ್ತೆಯಾಗಿ, 1,415 ಮಂದಿ ಮೃತಪಟ್ಟಿದ್ದಾರೆ.
ದಿಲ್ಲಿ
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೋಂಕು ಅಪಾಯಕಾರಿಯಾಗಿ ಹಬ್ಬುತ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 36 ಸಾವಿರ ದಾಟಿದೆ. 1,200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಚೆನ್ನೈ
ಇಲ್ಲಿ 27 ಸಾವಿರ ಸೋಂಕಿತರು ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಬೆಳಕಿಗೆ ಬಂದ ಒಟ್ಟು ಸೋಂಕಿತರ ಪೈಕಿ ಶೇ.70ರಷ್ಟು ಚೆನ್ನೈಯಲ್ಲೇ ಇದ್ದಾರೆ. ರಾಜ್ಯದಲ್ಲಿ ಈವರೆಗೆ 40,698 ಮಂದಿಗೆ ಸೋಂಕು ದೃಢಪಟ್ಟಿದೆ.
ಥಾಣೆ
ಮಹಾರಾಷ್ಟ್ರದ ಮತ್ತೂಂದು ಹಾಟ್‌ಸ್ಪಾಟ್ ನಗರ ಥಾಣೆ. 16 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಈ ನಗರವೊಂದರಲ್ಲೇ 400ಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.