ಬೈಕಂಪಾಡಿ: ಚರಂಡಿ ಬದಲು “ಖೆಡ್ಡಾ’!
Team Udayavani, Jun 15, 2020, 5:47 AM IST
ಬೈಕಂಪಾಡಿ: ಚಿತ್ರಾಪುರದ ಸಿಂಡಿಕೇಟ್ ಬ್ಯಾಂಕ್ ಸಮೀಪ ಹೆದ್ದಾರಿ ಇಲಾಖೆಯು ಮಳೆ ನೀರು ಹರಿಯಲೆಂದು ಜೆಸಿಬಿ ಮೂಲಕ ಅಲ್ಲಲ್ಲಿ ಅಗೆದು ಹಾಕಿದ್ದು, ಅದೀಗ ಪಾದಚಾರಿಗಳಿಗೆ ಮಾರಕವಾಗಿ ಪರಿಣಮಿಸಿದೆ.
ಚರಂಡಿ ತೋಡಲು ಹೊರಟ ಇಲಾಖೆಯು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ಪಕ್ಕದಲ್ಲೇ ತೆಗೆದು ಹಾಕಿದ್ದ ಮಣ್ಣು ಮಳೆನೀರಿನೊಂದಿಗೆ ಮತ್ತೆ ಹೊಂಡ ಸೇರಿದ್ದು, ಅದರ ಆಳದ ಅರಿವಿಲ್ಲದೆ ಕಾಲಿಡುವ ಜನರ ಕಾಲುಗಳು ಕೆಸರಿನಲ್ಲಿ ಹೂತು ಹೋಗುತ್ತಿವೆ.
ಸಮೀಪದಲ್ಲೇ ಬ್ಯಾಂಕ್ ಎಟಿಎಂ ಇದ್ದು ಹಣ ತೆಗೆಯಲು ಬರುವವರು ನೀರು ನಿಂತ ಹೊಂಡಕ್ಕೆ ಬಿದ್ದು ಕೈ ಕಾಲು ನೋಯಿಸಿಕೊಂಡದ್ದೂ ಇದೆ. ಇನ್ನೊಂದೆಡೆ ಮಾರ್ಬಲ್ ಕಂಪೆನಿಯೊಂದು ಇಂಟರ್ ಲಾಕ್ ಅಳವಡಿಸಿರುವ ಕಾರಣ ನೀರು ಹರಿಯದೆ ಸಮಸ್ಯೆ ಉದ್ಭವವಾಗಿದೆ. ತತ್‌ಕ್ಷಣ ಈ ಬಗ್ಗೆ ಇಲಾಖೆ ಅಥವಾ ಪಾಲಿಕೆ ಸೂಕ್ತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.