ಅನ್‌ಲಾಕ್ ಆದ್ರೂ ಮಾಲ್ ಭಣ ಭಣ
Team Udayavani, Jun 15, 2020, 6:21 AM IST
ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ಮಾಲ್ ಸೇರಿ ವಿವಿಧ ಮಳಿಗೆಗಳು ಆರಂಭವಾಗಿದ್ದರೂ ಜನರ ಓಡಾಟ ಮಾತ್ರ ವಿರಳವಾಗಿದೆ. ಇದು ವ್ಯಾಪಾರ ವಹಿವಾಟು ಮೇಲೆ ನೇರ ಪರಿಣಾಮ ಬೀರಿದೆ. ನಗರದ ಬೆರಳೆಣಿಕೆಯಷ್ಟು ಮಾಲ್‌ಗಳಷ್ಟೇ ಗ್ರಾಹಕರು ಕಾಣುತ್ತಿದ್ದಾರೆ. ಉಳಿದ ಮಾಲ್‌ಗಳು ವಾರಾಂತ್ಯದಲ್ಲೂ ಗ್ರಾಹಕರಿಲ್ಲದೆ ಬಣಗುಡುತ್ತಿವೆ.
ವಸ್ತ್ರ, ಗೃಹೋಪಯೋಗಿ ವಸ್ತು, ಎಲೆಕ್ಟ್ರಾನಿಕ್ ಉಪಕರಣ, ಮಕ್ಕಳ ಆಟಿಕೆ ಇತರೆ ವಸ್ತುಗಳ ಖರೀದಿ ನೀರಸವಾಗಿದೆ. ಫೋರಂ ಮಾಲ್, ಗರುಡಾ ಮಾಲ್, ಒರಾಯನ್ ಮಾಲ್, ಸೆಂಟ್ರಲ್ ಮಾಲ್, ಮಂತ್ರಿ ಮಾಲ್ ಸೇರಿದಂತೆ ನಗರದ ಪ್ರಮುಖ ಮಾಲ್ ಗಳಿಗೆ ಹಿಂದೆಲ್ಲಾ ವಾರಾಂತ್ಯದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರು ತ್ತಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಎರಡೂವರೆ ತಿಂಗಳಿನಿಂದ ಮಾಲ್‌ಗಳು ಬಂದ್ ಆಗಿದ್ದವು.
ಇದೀಗ ಪುನರಾರಂಭವಾದರೂ ಕೋವಿಡ್ 19 ಭೀತಿಯಿಂದ ಜನ ಮಾಲ್‌ಗಳತ್ತ ಸುಳಿಯುತ್ತಿಲ್ಲ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ನೀಡಿದ್ದ ನಿರ್ದೇಶನಗಳನ್ನು ಪಾಲ್‌ಗಳು ಪಾಲಿಸುತ್ತಿವೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಲ್‌ನ ಪ್ರತಿ ಮಳಿಗೆಗೆ ಪ್ರವೇಶಿಸಬೇಕೆಂದರೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಆದರೂ, ಗ್ರಾಹಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ.
ಗ್ರಾಹಕರ ಹಿಂದೇಟು: ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ, ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಇನ್ನೊಂದೆಡೆ ಹೊಸ ಸೋಂಕಿತ ಪ್ರಕರಣಗಳು ಹೆಚ್ಚಾಗಿರುವುದು ಗ್ರಾಹಕರ ಸಂಖ್ಯೆ ಕಡಿಮೆ ಇರುವುದಕ್ಕೆ ಕಾರಣವಿದ್ದಂತಿದೆ. ಆತಂಕ ನಿವಾರಣೆಯಾಗಿ ಜನ ಯಾವಾಗ ಮಳಿಗೆಗಳತ್ತ ಬರುತ್ತಾರೆ ಎಂದು ಕಾಯುವಂತಾಗಿದೆ ಎಂದು ಬನ್ನೇರುಘಟ್ಟ ರಸ್ತೆಯ ಮಾಲ್‌ನ ಮಳಿಗೆದಾರರು ಹೇಳಿದರು.
ವಿದ್ಯಾರ್ಥಿಗಳ ಕೊರತೆ: ಮಾಲ್‌ಗಳ ಗ್ರಾಹಕರಲ್ಲಿ ವಿದ್ಯಾರ್ಥಿಗಳು ಶೇ. 20-25ರಷ್ಟಿರುತ್ತಿದ್ದರು. ಶಾಲಾ- ಕಾಲೇಜು ಆರಂಭ ವಾಗದ ಕಾರಣ ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಸಿನಿಮಾ ಮಂದಿ ರ ಗಳು ಮುಚ್ಚಿರುವುದು ಗ್ರಾಹಕರ ಸಂಖ್ಯೆ ಕಡಿಮೆಗೆ ಕಾರಣವಾಗಿದೆ. ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದು, ದಿನ ಕಳೆದಂತೆ ಗ್ರಾಹಕರ ಸಂಖ್ಯೆ ಹೆಚ್ಚಾ ಗುವ ನಿರೀಕ್ಷೆ ಇದೆ ಎಂದು ಮಾಲ್ ವ್ಯವ ಸ್ಥಾಪಕರೊಬ್ಬರು ತಿಳಿಸಿದರು.
ಆನ್‌ಲೈನ್ ಮೂಲಕ ವಸ್ತುಗಳ ಖರೀದಿ: ಲಾಕ್‌ಡೌನ್ ಸಡಿಲಿಕೆ ನಂತರ ಕೋವಿಡ್ 19 ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಮಾಲ್‌ಗಳಿಗೆ ತೆರಳದೇ ಆನ್‌ಲೈನ್ ಖರೀದಿ ಮೊರೆ ಹೋಗುತ್ತಿರುವುದ ಸಹ ಮಾಲ್‌ಗಳಿಗೆ ಗ್ರಾಹಕರ ಸಂಖ್ಯೆ ಇಳಿಕೆಗೆ ಕಾರಣವಾಗಿದೆ ಎಂಬ ಮಾತಿದೆ.
ಒಳಾಂಗಣ ಕ್ರೀಡಾ ವಸ್ತುಗಳಿಗೆ ಬೇಡಿಕೆ: ಲಾಕ್‌ಡೌನ್ ಸಂದರ್ಭದಲ್ಲಿ ಜನ ಚೆಸ್, ಕೇರಂ ಇತರೆ ಒಳಾಂಗಣ ಆಟಗಳಲ್ಲಿ ತೊಡಗಿದ್ದರು. ಲಾಕ್‌ಡೌನ್ ಸಡಿಲಿಕೆ ನಂತರವೂ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಕ್ಕಳೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಲಾಕ್‌ಡೌನ್ ಮೊದಲಿನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ಒಳಾಂಗಣ ಕ್ರೀಡಾ ಪರಿಕರಗಳ ಬೇಡಿಕೆ ಶೇ. 30ರಷ್ಟು ಏರಿಕೆಯಾಗಿದೆ ಎಂದು ವಿಜಯನಗರದ ವ್ಯಾಪಾರಿ ಪ್ರಸಾದ್ ಎಂಬುವರು ತಿಳಿಸಿದ್ದಾರೆ.
ಕೋವಿಡ್ 19 ಹಿನ್ನೆಲೆ ಮಾಲ್‌ಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಇದೀಗ ಗ್ರಾಹಕರ ಸಂಖ್ಯೆ ಚೇತರಿಕೆಯಾಗಿದೆ. ಆರಂಭದಲ್ಲಿ ನಿರೀಕ್ಷಿಸಿದಷ್ಟು ಗ್ರಾಹಕರು ಇಲ್ಲದಿದ್ದರೂ, ವಾರಾಂತ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ.
-ನಂದೇಶ್, ಗರುಡಾ ಮಾಲ್ ಪ್ರತಿನಿಧಿ
* ಮಂಜುನಾಥ್ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.