ಕೇರಳದಲ್ಲೂ ಕೋವಿಡ್ ಪೂಜೆ ; ವೈದ್ಯರು, ವಿಜ್ಞಾನಿಗಳ ಆರೋಗ್ಯಕ್ಕಾಗಿ ಈ ಕ್ರಮ: ಸ್ಪಷ್ಟನೆ
Team Udayavani, Jun 15, 2020, 9:59 AM IST
ಅನಿಲನ್ ಎಂಬವರಿಂದ ಕೋವಿಡ್ ದೇವಿಗೆ ಪೂಜೆ.
ಕೊಲ್ಲಂ: ಕೆಲ ದಿನಗಳ ಹಿಂದಷ್ಟೇ ಸೋಂಕು ಪ್ರಭಾವ ಕಡಿಮೆಯಾಗಲಿ ಎಂದು ಅಸ್ಸಾಂ, ಪಶ್ಚಿಮ ಬಂಗಾಲ, ಬಿಹಾರ, ಝಾರ್ಖಂಡ್‌ನ ಕೆಲ ಭಾಗಗ ಳಲ್ಲಿ ಕೊರೊನಾ ದೇವಿಯ ಪೂಜೆ ಮಾಡಿದ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಇದೀಗ ದಕ್ಷಿಣ ಭಾರತದ ಕೇರಳದಲ್ಲಿಯೂ ಅಂಥ ಪದ್ಧತಿ ಶುರುವಾಗಿದೆ. ಕೇರಳದ ಕೊಲ್ಲಂನ ಕಡಕ್ಕಲ್ ಎಂಬಲ್ಲಿ ಅನಿಲನ್ ಎಂಬವರು ಸೋಂಕಿನ ವಿರುದ್ಧ ಹೋರಾಟ ನಡೆಸುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ಲಸಿಕೆಗಾಗಿ ಸಂಶೋಧನೆ ನಡೆಸುವ ವಿಜ್ಞಾನಿಗಳ ಆರೋಗ್ಯಕ್ಕಾಗಿ ಕೋವಿಡ್ ದೇವಿಯನ್ನು ನಿತ್ಯವೂ ಪೂಜೆ ಮಾಡುತ್ತಿದ್ದಾರೆ.
ಥರ್ಮಕಾಲ್‌ನಲ್ಲಿ ನಾಲಿಗೆ ಹೊರ ಚಾಚಿಕೊಂಡಿರುವಂತೆ ಕೋವಿಡ್ ದೇವಿಯ ಮೂರ್ತಿಯ ಮಾದರಿ ಸಿದ್ಧಪಡಿಸಿಕೊಂಡು ಅವರು ಪ್ರತಿ ದಿನವೂ ಪೂಜೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು “ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕ್ರಮದ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಇದರಿಂದ ನಾನು ಎದೆ ಗುಂದುವುದಿಲ್ಲ. ಆರೋಗ್ಯ ಕಾರ್ಯಕರ್ತರು, ವೈದ್ಯರು, ಲಸಿಕೆಗಾಗಿ ಸಂಶೋಧನೆ ನಡೆಸುವವರು ತಮ್ಮ ಜೀವದ ಹಂಗುತೊರೆದು ದುಡಿಯುತ್ತಿ ದ್ದಾರೆ. ಅವರ ಒಳಿತಿಗಾಗಿ ನನ್ನ ಪ್ರಾರ್ಥನೆ. ಸೋಂಕಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಇದು’ ಎಂದು ಹೇಳಿದ್ದಾರೆ.
ತೆರೆಯುವುದು ಬೇಡ: ವೈರಸ್ ಹಿನ್ನೆಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಇತರ ಪ್ರಾರ್ಥನಾ ಕೇಂದ್ರಗಳನ್ನು ತೆರೆಯುವುದು ಸರಿಯಲ್ಲ ಎಂದೂ ಅನಿಲನ್ ಪ್ರತಿಪಾದಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ, ಧಾರ್ಮಿಕ ಕ್ಷೇತ್ರಗಳನ್ನು ತೆರೆಯುವುದು ಸರಿಯಲ್ಲ. ಹಿಂದೂಗಳಿಗೆ 33 ಕೋಟಿ ದೇವರುಗಳು ಇದ್ದಾರೆ. ಅದರ ಪೈಕಿ ವೈರಸ್ ಅನ್ನೂ ದೇವಿ ಎಂದು ಪರಿಗಣಿಸಿ ಪೂಜಿಸುತ್ತಿರುವುದಾಗಿ ಹೇಳಿದ್ದಾರೆ.
ಹಣ ಬೇಡ: ವೈರಸ್‌ಗೆ ದೇವಿ ಎಂದು ಭಾವಿಸಿ ಮನೆಯಲ್ಲಿ ಪೂಜೆ ಮಾಡುತ್ತಿರುವ ತನಗೆ ಯಾರೂ ಹಣ ಕೊಡಬೇಕಾಗಿಲ್ಲ, ತನ್ನ ಮನೆಗೆ ಬರಬೇಕಾಗಿಯೂ ಇಲ್ಲವೆಂದಿದ್ದಾರೆ ಅನಿಲನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.