ಕೋವಿಡ್ -19 ವೈರಸ್ : ರೂಪಾಂತರವಾಗಿ ಇನ್ನಷ್ಟು ಸಾಂಕ್ರಾಮಿಕ
ರೂಪಾಂತರ ಗೊಂಡ ವೈರಸ್‌ಗಳು ಮಾನವನ ಜೀವಕೋಶಗಳ ಮೇಲೆ ಪರಿಣಾಮ ಬೀರಲಿವೆ
Team Udayavani, Jun 15, 2020, 12:05 PM IST
ಸಾಂದರ್ಭಿಕ ಚಿತ್ರ
ಲಂಡನ್: ಕೋವಿಡ್ ವೈರಸ್ ಹಬ್ಬಲು ಶುರುವಾದಾಗಿನಿಂದ ರೂಪಾಂತರಗೊಳ್ಳುತ್ತಿದ್ದು ಇನ್ನಷ್ಟು ಹಬ್ಬಲು ಕಾರಣವಾಗಿದೆ ಮತ್ತು ಸುದೀರ್ಘಾವಧಿ ಅದು ಇಲ್ಲೇ ಇರಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಫ್ಲೋರಿಡಾದ ಸ್ಕ್ರಿಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಈ ಸಂಶೋಧನೆಯನ್ನು ನಡೆಸುತ್ತಿದ್ದು, ಕೋವಿಡ್ ವೈರಾಣು ರೂಪಾಂತರಗೊಳ್ಳುತ್ತ ಸಾಗುತ್ತಿದೆ ಎಂದು ಹೇಳುತ್ತಾರೆ. ಜತೆಗೆ ಇದರಿಂದಲೇ ಅದು ಹೆಚ್ಚು ಸಾಂಕ್ರಾಮಿಕವೂ ಆಗಿದೆ ಎಂದಿದ್ದಾರೆ. ಇದೇ ಕಾರಣಕ್ಕೆ ಯುರೋಪ್ ಮತ್ತು ಅಮೆರಿಕಾದಲ್ಲಿ ಅದು ಇನ್ನಷ್ಟು ಹಬ್ಬುತ್ತಿದೆ ಎಂದಿದ್ದಾರೆ.
ಕೋವಿಡ್ ಸೋಂಕಿನ ಈ ಗುಣಲಕ್ಷಣಗಳನ್ನು ಗುರುತಿಸಲು ಲ್ಯಾಬೊರೇಟರಿಯಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೇ ಅದರ ರೂಪಾಂತರವನ್ನು ಗುರುತಿಸಲಾಗಿದೆ. ಯುರೋಪ್ ಮತ್ತು ಅಮೆರಿಕದಲ್ಲಿ ಹಬ್ಬಿದ ವೈರಸ್‌ಗಳು ರೂಪಾಂತರಗೊಂಡವು ಮತ್ತು ಮಾನವನ ಜೀವಕೋಶಗಳ ಮೇಲೆ ಪರಿಣಾಮ ಬೀರುವಂತಹವುಗಳು ಎಂದು ಸಂಶೋಧಕರು ಹೇಳಿದ್ದಾರೆ. ಇಷ್ಟೊಂದು ಬಗೆಯಲ್ಲಿ ರೂಪಾಂತರಗೊಳ್ಳುವುದೇ ಆಗಿದ್ದರೆ, ಖಂಡಿತವಾಗಿ ಆ ವೈರಸ್ ಹೆಚ್ಚು ಸಾಂಕ್ರಾಮಿಕವಾಗುತ್ತದೆ. ನಮ್ಮ ಜೀವಕೋಶ ವ್ಯವಸ್ಥೆಯಲ್ಲೇ ಇದು ನಡೆಯುವುದರಿದ ಹಾನಿಕಾರಕವೂ ಆಗಿದೆ ಎಂದು ಸ್ಕ್ರಿಪ್ಸ್ ರಿಸರ್ಚ್‌ನ ವೈರಾಲಜಿಸ್ಟ್ ಡಾ| ಹೆಯ್ರುನ್ ಚಾವೋ ಅವರು ಹೇಳಿದ್ದಾರೆ. ಕೋವಿಡ್ ಸೋಂಕು ಹಬ್ಬಿದ ಬಳಿಕ ಕೆಲವು ದೇಶಗಳಲ್ಲಿ ತೀವ್ರವಾಗಿ ಹರಡತೊಡಗಿದ್ದರೆ, ಇನ್ನು ಕೆಲವು ದೇಶದಲ್ಲಿ ಅದರ ಪರಿಣಾಮ ಸಾಮಾನ್ಯವಾಗಿತ್ತು. ವೈರಸ್‌ನಲ್ಲಿ ಇಂತಹ ವ್ಯತ್ಯಾಸಕ್ಕೆ ಕಾರಣವೇನೆಂದು ಶೋಧಿಸಿದಾಗ ಅದು ರೂಪಾಂತರವಾಗುವುದು ಪತ್ತೆಯಾಗಿದೆ. ಸಂಶೋಧನ ವರದಿಯ ಪ್ರಕಾರ, ರೂಪಾಂತರಗೊಂಡ ವೈರಸ್, ಸ್ವಲ್ಪ ಬದಲಾವಣೆಗೊಳಗಾಗುತ್ತವೆ.
ಆದರೂ ವೈರಸ್ ಎಷ್ಟು ಬಲಯುತವಾಗಿವೆ, ಅದರ ಸಮಗ್ರತೆ ಬಗ್ಗೆ ಇನ್ನಷ್ಟು ಶೋಧನೆಗಳು ಅಗತ್ಯವಿದೆ ಎಂಬುದನ್ನು ಸಂಶೋಧನೆ ಬೊಟ್ಟು ಮಾಡಿದೆ. ವೈರಸ್‌ನ ರೂಪಾಂತರ, ವಿವಿಧ ವಿಧಗಳು ಜಗತ್ತಿನಾದ್ಯಂತ ಕಂಡುಬಂದಿರುವುದರಿಂದ ಕೋವಿಡ್ ಬಗ್ಗೆ ಇದಮಿತ್ಥ ಎಂಬ ಬಗ್ಗೆ ತೀರ್ಮಾಕ್ಕೆ ಈವರೆಗೆ ಸಂಶೋಧಕರಿಗೆ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.