15 ಜನರಿಗೆ ಕೋವಿಡ್-19 ಸೋಂಕು ಪತ್ತೆ
ಜಿಂದಾಲ್‌ನಲ್ಲಿ 107ಕ್ಕೆ ಏರಿಕೆಯಾದ ಸೋಂಕಿತರು ಒಟ್ಟು ಸೋಂಕಿತರು 196ಕ್ಕೇರಿಕೆ
Team Udayavani, Jun 15, 2020, 12:52 PM IST
ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ಜಿಂದಾಲ್ ಕೈಗಾರಿಕೆಯ 3 ಸೇರಿ ಭಾನುವಾರ ಪುನಃ 15 ಕೋವಿಡ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 196ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಬೆಂಗಳೂರು, ತಮಿಳುನಾಡಿನಿಂದ ಬಂದವರು ಹಾಗೂ ಜಿಂದಾಲ್‌ನಿಂದ ಸೋಂಕು ಹಬ್ಬುತ್ತಿದ್ದು, ಭಾನುವಾರ ಹೊಸದಾಗಿ 15 ಪ್ರಕರಣಗಳು ದೃಢಪಟ್ಟಿರುವುದು ಇತರೆ ನೌಕರರು ಸೇರಿ ಜನಸಾಮಾನ್ಯರಲ್ಲೂ ಆತಂಕ ಮೂಡಿಸಿದೆ. ತಮಿಳುನಾಡಿನಿಂದ ವಾಪಸ್ ಬಂದವರೊಬ್ಬರಿಗೆ, ಬೆಂಗಳೂರಿನಿಂದ ವಾಪಸ್ಸಾಗಿದ್ದ ವ್ಯಕ್ತಿಯಿಂದ ಹಬ್ಬಿದ ಸೋಂಕು ನಾಲ್ವರಲ್ಲಿ ಕಾಣಿಸಿಕೊಂಡಿದೆ. ಉಳಿದಂತೆ ತೀವ್ರ ಉಸಿರಾಟದ ತೊಂದರೆಯಿಂದ ಮೂರು ಪ್ರಕರಣಗಳು ಸೇರಿಕೊಂಡಿವೆ. ಜಿಂದಾಲ್ ನ ಒಟ್ಟು ಸೋಂಕಿತರ ಸಂಖ್ಯೆ ಇದೀಗ 106ಕ್ಕೆ ಏರಿಕೆಯಾದಂತಾಗಿದೆ.
ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ಬಳ್ಳಾರಿ 1, ಸಂಡೂರು 6, ಹೊಸಪೇಟೆ 6, ಕೂಡ್ಲಿಗಿ ಒಂದು ಸೇರಿಕೊಂಡಿವೆ. 10 ಪುರುಷರು, 7 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಂದಾಲ್ ಕಾರ್ಖಾನೆಯ ಐಟಿಪಿಎಸ್ ವಿಭಾಗದ 43 ವರ್ಷದ ವ್ಯಕ್ತಿ, ಆರ್‌ಎಂಎಸ್ ಲಾಜಿಸ್ಟಿಕ್ ವಿಭಾಗದ 30 ವರ್ಷದ ಯುವಕ, ಸಿಎನ್‌ಸಿ ವಿಭಾಗದ 28 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂವರು ಮೂಲತಃ ಸಂಡೂರಿನವರಾಗಿದ್ದಾರೆ.
ಇನ್ನು ಸಂಡೂರಿನ 55 ವರ್ಷ, 46, 43 ವರ್ಷದ ಮೂವರು ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂವರು ಪಿ.6467 ಸೋಂಕಿತರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ಅದೇ ರೀತಿ ಬಳ್ಳಾರಿಯ 34 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, ಇವರು ಪಿ.6435ರ ಸಂಪರ್ಕ ಹೊಂದಿದ್ದಾರೆ. ಬಳ್ಳಾರಿಯ 5 ವರ್ಷದ ಬಾಲಕಿಗೂ ಸೋಂಕು ಆವರಿಸಿದ್ದು, ಪಿ.6416 ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ಇನ್ನು ಪಿ.6472 ಸೋಂಕಿತರ ಸಂಪರ್ಕ ಹೊಂದಿದ್ದ ಹೊಸಪೇಟೆಯ 32 ವರ್ಷದ ಯುವಕ, ಆಂಧ್ರಪ್ರದೇಶದಿಂದ ವಾಪಸ್ ಬಂದಿದ್ದ 28 ವರ್ಷದ ಮಹಿಳೆ, ತಮಿಳುನಾಡು ರಾಜ್ಯದಿಂದ ಹಿಂದಿರುಗಿದ್ದ 28 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಅದೇ ರೀತಿ ಹೊಸಪೇಟೆಯ 55 ವರ್ಷದ ಮಹಿಳೆ, 16 ವರ್ಷದ ಯುವತಿ, 51 ವರ್ಷದ ಪುರುಷರಲ್ಲೂ ಸೋಂಕು ದೃಢಪಟ್ಟಿದ್ದು, ಈ ಮೂವರು ಐಎಲ್‌ಐ (ಇನ್ಪ್ಲೂಯಂಜಾ ಲೈಕ್ ಇನೆ ಕ್ಷನ್) ಪ್ರಕರಣಗಳಾಗಿವೆ. ತಮಿಳುನಾಡಿನಿಂದ ಹಿಂದಿರುಗಿದ್ದ ಕೂಡ್ಲಿಗಿ ತಾಲೂಕಿನ 35 ವರ್ಷದ ಮಹಿಳೆಯಲ್ಲೂ ಸೋಂಕು ಪತ್ತೆಯಾಗಿದೆ. ಇನ್ನು ಶನಿವಾರ ಜೂ. 13 ರಂದು ಹ.ಬೊ.ಹಳ್ಳಿಯಲ್ಲಿ ಪಿ.6458 ಸೋಂಕಿತರ ಸಂಪರ್ಕ ಹೊಂದಿದ್ದ 39 ವರ್ಷದ ಮಹಿಳೆ ಮತ್ತು ಬಳ್ಳಾರಿಯ 66 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಈ ವರೆಗೆ 3,56,484 ಸ್ಕ್ರೀನಿಂಗ್ ಮಾಡಲಾಗಿದ್ದು, 12471 ಜನರ ಗಂಟಲು ದ್ರವ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 196 ಜನರಲ್ಲಿ ಸೋಂಕು ದೃಢಪಟ್ಟಿದ್ದು, 11990 ಜನರಲ್ಲಿ ನೆಗೆಟಿವ್ ಬಂದಿದೆ. ಇನ್ನು 285 ಜನರ ವರದಿ ಬರಬೇಕಾಗಿದೆ. 253 ಜನರು ಮನೆಯಲ್ಲೇ 28 ದಿನಗಳ ಕ್ವಾರಂಟೆ„ನ್ ಪೂರ್ಣಗೊಳಿಸಿದ್ದಾರೆ. 761 ಜನರು ಇನ್ನು ಕ್ವಾರಂಟೆ„ನ್‌ನಲ್ಲಿ ಇದ್ದಾರೆ. ಈವರೆಗೆ 55 ಜನರು ಗುಣಮುಖವಾಗಿ ಮನೆಗೆ ಹೋಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ 140 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 33 ಜನರಲ್ಲಿ ರೋಗ ಲಕ್ಷಣಗಳಿದ್ದು, 107 ಸೋಂಕಿತರಲ್ಲಿ ರೋಗದ ಯಾವುದೇ ಲಕ್ಷಣಗಳು ಇಲ್ಲ ಎಂದವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.