ಸೈನಿಕ ಹುಳು ಕಾಟಕ್ಕೆ ರೈತ ಕಂಗಾಲು
ದರ ಕುಸಿತ-ಮಳೆ ಅನಿಶ್ಚಿತತೆ ಜತೆಗೆ ಈಗ ಮೆಕ್ಕೆಜೋಳಕ್ಕೆ ರೋಗದ ಕಾಟ
Team Udayavani, Jun 15, 2020, 5:18 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭರಮಸಾಗರ: ಮುಂಗಾರು ಅವ ಗೆ ಬಿತ್ತನೆ ಮಾಡಿದ ಮೆಕ್ಕೆಜೋಳಕ್ಕೆ ಎಲೆ ಸುಳಿ ಸೈನಿಕ ಹುಳುವಿನ ಕಾಟ ಶುರುವಾಗಿ ಸಸಿ ಹಂತದಲ್ಲೇ ಎಲೆಗಳನ್ನು ತಿಂದುಹಾಕುತ್ತಿರುವ ಬೆಳವಣಿಗೆಯಿಂದ ಚಿತ್ರದುರ್ಗ ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.
ತಾಲೂಕಿನಲ್ಲಿ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈಗಾಗಲೇ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಮುಗಿದಿದೆ. ಮೇ ಅಂತ್ಯಕ್ಕೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳದಲ್ಲಿ ಎಲೆ ಸುಳಿ ರೋಗ ಕಾಣಿಸಿಕೊಂಡಿದೆ. ಬೆಳೆಯ ಪ್ರಾರಂಭಿಕ ಹಂತದ ಸುಳಿಯಲ್ಲಿ ಅವಿತು ಬೆಳೆಯುವ ಕುಡಿಯನ್ನು ಈ ಹುಳು ತಿಂದು ಹಾಕುತ್ತಿದೆ. ಎಲೆಯ ಮೇಲೆ ಬಿಳಿ ಬಣ್ಣದ ಮಚ್ಚೆಗಳ ಲಕ್ಷಣಗಳಿವೆ. ಸ್ವಲ್ಪ ಬಲಿತ ಹುಳುಗಳಿರುವ ಗರಿಗಳಲ್ಲಿ ಎಲೆಯು ಹರಿದ ರೀತಿಯಲ್ಲಿ ಕಾಣಿಸುತ್ತದೆ. ಎಲೆಯ ಮೇಲ್ಭಾಗದಲ್ಲಿ ಕಟ್ಟಿಗೆ ಹಿಟ್ಟಿನ ತರಹದ ಹಸಿ ಹಿಕ್ಕೆಗಳಿವೆ. ಇಂಥಹ ಹುಳು ಭಾದೆಯನ್ನು ಆರಂಭದಲ್ಲೇ ನಿಯಂತ್ರಿಸದೆ ಹೋದರೆ ತೆನೆಗಳನ್ನು ಕೊರೆದು ಬೆಳವಣಿಗೆಯಾಗುವ ಕಾಳುಗಳನ್ನು ತಿನ್ನುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಎಲೆ ಸುಳಿ ರೋಗ ಬೀಳದೆ ಇರುವಂಥಹ ಬಿತ್ತನೆ ಬೀಜಗಳನ್ನು ತಯಾರಿಸಲಾಗಿದೆ ಎಂಬ ಕೆಲ ಬಿತ್ತನೆ ಬೀಜ ಕಂಪನಿಗಳ ಪ್ರಚಾರದ ಮೊರೆ ಹೋದ ರೈತರು ಅಂಥಹ ದುಬಾರಿ ಬೀಜಗಳನ್ನೇ ಖರಿದೀಸಿ ಬಿತ್ತನೆ ಮಾಡಿದ್ದರೂ ರೋಗ ಭಾದೆ ನಿಂತಿಲ್ಲ ಎಂಬುದಾಗಿ ಬೆಳೆಗಾರರು ಹೇಳುತ್ತಾರೆ. ಮೋಡದ ವಾತಾವರಣ, ಹೆಚ್ಚಿನ ಮಳೆ, ಹೆಚ್ಚಿನ ತೇವಾಂಶ ಮತ್ತು ಕಡಿಮೆ ಉಷ್ಣಾಂಶಗಳಿರುವ ಭಾಗಗಳಲ್ಲಿ ಈ ಕೀಟಗಳ ಹಾವಳಿ ಹೆಚ್ಚಾಗಿದೆ. ಈ ಕೀಟಗಳು ವರ್ಷವೀಡಿ ಬೆಳೆಗಳಿಗೆ ಕಾಟ ನೀಡುವ ವಿಲಕ್ಷಣ ಗುಣವನ್ನು ಹೊಂದಿವೆ.
ಎಲೆ ಸುಳಿ ಸೈನಿಕ ಹುಳುವಿನ ನಿಯಂತ್ರಣಕ್ಕಾಗಿ ರೈತರು ಆಳವಾದ ಉಳುಮೆ ಮಾಡುವುದರಿಂದ ಕೋಶಗಳನ್ನು ಹೊರಹಾಕಿ ಇತರೆ ಪರಭಕ್ಷಕ ಕೀಟಗಳಿಂದ ಮತ್ತು ಸೂರ್ಯನ ಶಾಖದಿಂದ ನಾಶಪಡಿಸಬಹುದು. ಮುಂಗಾರು ಮೊದಲ ಮಳೆಗೆ ಏಕಕಾಲಕ್ಕೆ ಬಿತ್ತನೆ ಮಾಡಿದರೆ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಿ ಕೀಟಗಳ ಸಂತತಿ ಅಭಿವೃದ್ಧಿಯನ್ನು ತಡೆಯಬಹುದು. ಅಂತರ, ಮಿಶ್ರ ಬೆಳೆ ಬೆಳೆಯುವುದರಿಂದ ಎಲೆ ಸುಳಿ ರೋಗ ಸಾಧ್ಯವಿದೆ. ಶಿಪಾರಸು ಮಾಡಿದ ಪ್ರಮಾಣದ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಬಳಸಿ ಬೆಳೆಯನ್ನು ನಿರ್ವಹಣೆ ಮಾಡುವದರಿಂದಲೂ ರೋಗಭಾದೆಯನ್ನು ತಡೆಯಬಹುದು ಎಂಬುದಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀನಿವಾಸ್ ಹೇಳುತ್ತಾರೆ.
ಕೀಟ ನಿಯಂತ್ರಣ ಕ್ರಮಗಳ ಯಾವುದೇ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಮಲ್ಲನಗೌಡ ತಿಳಿಸಿದ್ದಾರೆ. ಒಟ್ಟಾರೆ ದರ ಕುಸಿತ, ಮಳೆಯ ಅನಿಶ್ಚಿತತೆ, ಅನಾವೃಷ್ಟಿ ಸೇರಿದಂತೆ ನಾನಾ ಸಂಕಷ್ಟಗಳ ಸುಳಿಗೆ ಸಿಲುಕಿದ ಮೆಕ್ಕೆಜೋಳ ಬೆಳೆಗಾರರು ಇದೀಗ ಕೀಟ ಭಾದೆಯಿಂದ ಬೆಳೆಯನ್ನು ಆರಂಭದಲ್ಲೇ ಕಾಪಾಡಿಕೊಳ್ಳಲು ಹರಸಾಹಸಪಡಬೇಕಾಗಿದೆ.
ಎಚ್.ಬಿ. ನಿರಂಜನ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.