ತನ್ನನ್ನು ಕೊಲ್ಲಿಸಲು ತಾನೇ ಜನ ಇರಿಸಿದ್ದಳು; ಖಿನ್ನತೆ ಇವರನ್ನೆಲ್ಲಾ ಹಿಂಡಿ ಹಿಪ್ಪೆ ಮಾಡೈತೆ!

ಖಿನ್ನತೆ ಎಂಬ ಕಾಣದ ಮನೋವ್ಯಾಕುಲತೆಯ ಬಿಸಿ ತಟ್ಟಿಸಿಕೊಂಡ ಸೆಲೆಬ್ರಿಟಿಗಳ ವಿವರ ಇಲ್ಲಿದೆ…

Team Udayavani, Dec 7, 2020, 6:10 PM IST

ತನ್ನನ್ನು ಕೊಲ್ಲಿಸಲು ತಾನೇ ಜನ ಇರಿಸಿದ್ದಳು; ಖಿನ್ನತೆ ಇವರನ್ನೆಲ್ಲಾ ಹಿಂಡಿ ಹಿಪ್ಪೆ ಮಾಡೈತೆ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಖಿನ್ನತೆ ಎಂಬುದು ಒಂದು ರೀತಿಯ ಮಾನಸಿಕ ಸ್ಥಿತಿ ಎನ್ನಬಹುದು.

ಎಲ್ಲವನ್ನೂ ಕಳೆದುಕೊಂಡಂತಹ ನಿರಾಶಾ ಸ್ಥಿತಿಗೆ ವ್ಯಕ್ತಿಯ ಮನಸ್ಸು ಜಾರುವುದು ಈ ಖಿನ್ನತೆಯ ಸಾಮಾನ್ಯ ಹಾಗೂ ಪ್ರಮುಖ ಲಕ್ಷಣವಾಗಿರುತ್ತದೆ.

ಸಾಮಾನ್ಯವಾಗಿ ಎಲ್ಲಾ ವರ್ಗದ ಜನರಲ್ಲೂ ಈ ಖಿನ್ನತೆ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಮನೋ ವೈದ್ಯರು ಇದೊಂದು ತುಂಬಾ ಗಂಭೀರವಾಗಿರುವ ಮಾನಸಿಕ ಸ್ಥಿತಿ ಎಂದು ಎಚ್ಚರಿಸುತ್ತಾರೆ.

ಖಿನ್ನತೆಯ ಸ್ಥಿತಿಗೆ ಒಳಗಾದ ವ್ಯಕ್ತಿಯೊಬ್ಬನ ಮನಸ್ಸು ನಾನಾ ವಿಧದ ತುಮುಲಗಳಿಗೆ ಒಳಗಾಗುತ್ತದೆ. ತನಗೆ ಯಾರೂ ಇಲ್ಲ ಎನ್ನುವ ಭಾವನೆ, ಜೀವನವೇ ಮುಗಿದು ಹೋಯಿತು ಎನ್ನುವ ಮನಸ್ಥಿತಿ, ಸಮಾಜದಲ್ಲಿ ತಾನು ನಿಷ್ಪ್ರಯೋಜಕನೆಂಬ ಯೋಚನೆಗಳು ಮೂಡುವುದು, ತನ್ನ ಪಾಲಿನ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದೇ ಇರುವುದು, ಇತರರೊಂದಿಗೆ ಬೆರೆಯದೇ ಇರುವುದು… ಹೀಗೆ ಈ ಸಮಸ್ಯೆ ಹಲವರಲ್ಲಿ ಹಲವು ಲಕ್ಷಣಗಳನ್ನು ತೋರ್ಪಡಿಸುತ್ತಿರುತ್ತದೆ.

ಭಾರತಂದತಹ ದೇಶದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆತ್ಮಹತ್ಯೆಯಂತ ಪ್ರಕರಣಗಳಿಗೆ ಖಿನ್ನತೆಯೂ ಒಂದು ಪ್ರಮುಖವಾದ ಕಾರಣವಾಗಿ ಗುರುತಿಸಿಕೊಂಡಿದೆ.

ಚಿತ್ರರಂಗದ ಹಲವು ತಾರೆಗಳು ತಮಗಿದ್ದ ಮತ್ತು ಇರುವ ಖಿನ್ನತೆಯ ಸಮಸ್ಯೆಯ ಕುರಿತಾಗಿ ಮುಕ್ತವಾಗಿ ಹೇಳಿಕೊಳ್ಳಲು ಪ್ರಾರಂಭಿಸಿದ ಮೇಲೆ ಈ ಸಮಸ್ಯೆಯ ಕುರಿತಾಗಿ ಸಾಕಷ್ಟು ವಿಚಾರಗಳು ಹೊರಬರಲಾರಂಭಿಸಿದೆ. ಮತ್ತು ಈ ಸಮಸ್ಯೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹಲವರ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ.

ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣದೀಪ್ ಹೂಡಾ, ಹಾಲಿವುಡ್ ಪ್ರತಿಭೆಗಳಾಗಿರುವ ಜಾನಿ ಡೆಪ್, ಆ್ಯಂಜಲಿನಾ ಜೋಲಿ- ಪಿಟ್, ಲೇಡಿ ಗಾಗಾ, ಜಾನ್ ಹ್ಯಾಮ್, ಕ್ರಿಸ್ ಇವಾನ್ಸ್ ಸೇರಿದಂತೆ ಹಲವರು ತಮಗಿರುವ ಖಿನ್ನತೆಯ ಸಮಸ್ಯೆಗಳ ಕುರಿತಾಗಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹಾಗಾದರೆ ಬನ್ನಿ, ಈ ಖಿನ್ನತೆ ಎಂಬ ಮನೋ ವ್ಯಾಕುಲತೆ ಯಾರನ್ನೆಲ್ಲಾ ಹೇಗೆಲ್ಲಾ ಕಾಡಿದೆ ಎಂಬುದನ್ನು ತಿಳಿದುಕೊಳ್ಳೋಣ. ಮತ್ತು ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ತಮ್ಮ ಸಮಸ್ಯೆಗೆ ಮನೋವೈದ್ಯಕೀಯ ಪರಿಹಾರ ಕಂಡುಕೊಳ್ಳಲು ಇದು ಸ್ಪೂರ್ತಿಯಾಗಲಿ.


ಆಸ್ಕರ್ ವಿಜೇತ ನಟಿ, ಲೇಖಕಿ, ನಿರ್ದೇಶಕಿ, ವಿಶ್ವಸಂಸ್ಥೆಯ ಗುಡ್ ವಿಲ್ ರಾಯಭಾರಿಯೂ ಆಗಿರುವ ಹಾಗೂ ವೈಯಕ್ತಿಕ ಜೀವನದಲ್ಲಿ ಆರು ಮಕ್ಕಳ ತಾಯಿಯೂ ಆಗಿರುವ ಆ್ಯಂಜಲಿನಾ ಜೋಲಿ-ಪಿಟ್ ಅವರೂ ಸಹ ತಮ್ಮ ಜೀವನದಲ್ಲಿ ತೀವ್ರ ಸ್ವರೂಪದ ಮನೋ ಖಿನ್ನತೆಯಿಂದ ಬಳಲುತ್ತಿದ್ದ ವಿಷಯವನ್ನು ಅವರೇ ಹೇಳಿಕೊಂಡಿದ್ದರು.

ಈ ನಟಿಯಲ್ಲಿ ಖಿನ್ನತೆಯ ಸಮಸ್ಯೆ ಎಷ್ಟರ ಮಟ್ಟಿಗೆ ತೀವ್ರ ಸ್ವರೂಪ ಪಡೆದುಕೊಂಡಿತ್ತೆಂದರೆ, ತನ್ನನ್ನು ತಾನು ಘಾಸಿಗೊಳಿಸಿಕೊಳ್ಳುವಷ್ಟರ ಮಟ್ಟಿಗೆ ಮತ್ತು ಇಷ್ಟು ಮಾತ್ರವಲ್ಲದೇ ತನ್ನನ್ನು ಸಾಯಿಸಲು ಬಾಡಿಗೆ ಹಂತಕರನ್ನೂ ಗೊತ್ತು ಮಾಡುವ ಸ್ಥಿತಿಗೆ ಆ್ಯಂಜಲಿನಾ ಜೋಲಿ – ಪಿಟ್ ಅವರು ಮುಂದುವರೆದಿದ್ದರು! ಆದರೆ ಇದಕ್ಕೆಲ್ಲಾ ಮೂಲ ಕಾರಣ ಆಕೆಯನ್ನು ಬಾಧಿಸುತ್ತಿದ್ದ ಗಂಭೀರ ಸ್ವರೂಪದ ಮಾನಸಿಕ ಖಿನ್ನತೆಯ ಸ್ಥಿತಿ.

ಬಳಿಕ ಹಾಲಿವುಡ್ ನಲ್ಲಿ ಒಂದು ನೆಲೆ ಸಿಕ್ಕ ಮೇಲೆ ಮತ್ತು ಮಗುವಿನ ತಾಯಿಯಾದ ಮೇಲೆ ಆ್ಯಂಜಲಿನಾ ಅವರಿಗಿದ್ದ ಖಿನ್ನತೆಯ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಯಿತು. ಆದರೆ 2007ರಲ್ಲಿ ಮತ್ತೊಮ್ಮೆ ಈ ನಟಿ ಖಿನ್ನತೆಯ ಸುಳಿಯೊಳಗೆ ಸಿಲುಕುವಂತಾಗಿತ್ತು.

ಕ್ಯಾನ್ಸರ್ ಮಹಾಮಾರಿ ತನ್ನ ತಾಯಿಯನ್ನು ಬಲಿ ತೆಗೆದುಕೊಂಡ ಕಾರಣ ಈ ನಟಿ ಖಿನ್ನತೆಯ ಮನಸ್ಥಿತಿಗೆ ಜಾರುವಂತಾಗಿತ್ತು. ಬಳಿಕ ಮತ್ತೆ ತನ್ನನ್ನು ಹಾಲಿವುಡ್ ಚಿತ್ರಗಳಲ್ಲಿ ಸಕ್ರಿವಾಗಿ ತೊಡಗಿಸಿಕೊಳ್ಳುವ ಮೂಲಕ ಆ್ಯಂಜಲಿನಾ ತನಗಿದ್ದ ಖಿನ್ನತೆಯ ಸಮಸ್ಯೆಯನ್ನು ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದರು.


ಹಾಲಿವುಡ್ ನಟ ಜಾನಿ ಡೆಪ್ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ತನ್ನ ಚುರುಕಿನ ನಟನೆಯ ಮೂಲಕ ಈ ನಟ ವಿಶ್ವಾದ್ಯಂತ ಚಿತ್ರರಸಿಕರ ಮನ ಗೆದ್ದಿದ್ದಾರೆ. ಅದರಲ್ಲೂ ‘ಕೆರಿಬಿಯನ್ ಪೈರೇಟ್ಸ್’ ಚಿತ್ರ ಸರಣಿಯಲ್ಲಿ ಅವರ ಪಾತ್ರಕ್ಕೆ ಮನಸೋಲದವರು ಯಾರು ಹೇಳಿ?

ಕೆಮರಾ ಮುಂದೆ ಮಾತ್ರ ಲವಲವಿಕೆಯ ಪ್ರತಿರೂಪದಂತಿರುವ ಜಾನೆ ಡೆಪ್ ಪರದೆಯಾಚೆ ಮುಗುಮ್ಮಾದ ವ್ಯಕ್ತಿತ್ವದವರಾಗಿ ಗೋಚರಿಸುತ್ತಾರೆ. ಅದು ಯಾವುದೇ ಸಂದರ್ಶನವಿರಬಹುದು ಅಥವಾ ಇನ್ಯಾವುದೇ ಕಾರ್ಯಕ್ರಮಗಳ ಸಂದರ್ಭದಲ್ಲಿರಬಹುದು ಜಾನಿ ಡೆಪ್ ಮ್ಲಾನವದನರಾಗಿಯೇ ಇರುತ್ತಾರೆ. ಇದಕ್ಕೆ ಕಾರಣ ಈ ನಟನನ್ನು ಕಾಡುತ್ತಿರುವ ಆತಂಕ ಸಹಿತವಾದ ಖಿನ್ನತೆಯ ಸಮಸ್ಯೆ.

ತನಗಿರುವ ಈ ಸಮಸ್ಯೆಗೆ ಡೆಪ್ ಅವರು ವೈದ್ಯಕೀಯ ಸಹಾಯವನ್ನು ಪಡೆಯುತ್ತಿದ್ದಾರೆ. ತನ್ನ ಚಿತ್ರೀಕರಣದ ಸೆಟ್ ನಲ್ಲೂ ಜಾನಿ ಅವರು ಥೆರಪಿಸ್ಟ್ ಗಳ ಸಲಹೆಯನ್ನು ಪಡೆದುಕೊಂಡೇ ತನ್ನ ಪಾತ್ರ ನಿರ್ವಹಣೆಯನ್ನು ಮಾಡುವಷ್ಟರ ಮಟ್ಟಿಗೆ ಡೆಪ್ ಅವರನ್ನು ಆತಂಕ – ಖಿನ್ನತೆಗಳು ಜೊತೆಯಾಗಿ ಕಾಡುತ್ತಿವೆಯಂತೆ.

ಹಾಲಿವುಡ್ ನ ಕಾಮಿಡಿ ನಟರ ಸಾಲಿನಲ್ಲಿ ಮೆಲ್ಪಂಕ್ತಿಯಲ್ಲಿ ನಿಲ್ಲುವ ಹೆಸರುಗಳಲ್ಲಿ ಜಿಮ್ ಕ್ಯಾರಿ ಅವರದ್ದೂ ಒಂದು. ತನ್ನ ನಟನೆಯ ಮೂಲಕ ಪ್ರೇಕ್ಷಕರ ಮುಖದಲ್ಲಿ ನಗು ಅರಳಿಸುವ ಜಿಮ್ ನಿಜ ಜೀವನದಲ್ಲಿ ಬಹಳಷ್ಟು ವರ್ಷಗಳ ಕಾಲ ತೀವ್ರವಾದ ಖಿನ್ನತೆಯಿಂದ ಬಳಲುತ್ತಿದ್ದ ವಿಚಾರವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಾಗ ಎಲ್ಲರಿಗೂ ಶಾಕ್ ಆಗಿತ್ತು.

ತನ್ನ ಜೀವನದಲ್ಲಿ ಎರಡೆರಡು ವಿವಾಹ ಸಂಬಂಧಗಳು ವಿಫಲಗೊಂಡ ಸಂದರ್ಭದಲ್ಲಿ ಜಿಮ್ ಸಹವಜವಾಗಿಯೇ ಖಿನ್ನ ಮನಸ್ಥಿತಿಗೆ ಒಳಗಾಗಿದ್ದರು. ಬಳಿಕ ಮನೋ ವೈದ್ಯರ ಸಲಹೆಯ ಮೇರೆಗೆ ಆ್ಯಂಟಿ ಡಿಪ್ರೆಷನ್ ಮಾತ್ರೆಗಳ ಮೊರೆ ಹೋಗಿದ್ದರು ಎಂಬ ವಿಚಾರವನ್ನು ಈ ನಟ ಸ್ವತಃ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದರು.

‘ಕ್ಯಾಪ್ಟನ್ ಅಮೆರಿಕಾ’ ಚಿತ್ರದಲ್ಲಿ ಅಮೆರಿಕಾದ ಸೂಪರ್ ವಾರ್ ಹೀರೋ ಆಗಿ ಮಿಂಚಿದ್ದ ಕ್ರಿಸ್ ಇವಾನ್ಸ್ ಬೇರೆ ಯಾವುದಕ್ಕೂ ಬೆದರದಿದ್ದರೂ ಈ ಖಿನ್ನತೆಯ ಸಮಸ್ಯೆ ಅವರನ್ನು ಹಿಂಡಿ ಹಿಪ್ಪೆ ಮಾಡಿದೆ. ಜನಜಂಗುಳಿಯ ನಡುವೆ ಬೆರೆಯಲು ಈ ನಟ ಯಾವಾಗಲೂ ಹೆದರುತ್ತಿದ್ದರು ಎಂಬುದನ್ನು ಸಂದರ್ಶನ ಸಮಯದಲ್ಲಿ ಕ್ರಿಸ್ ಹಂಚಿಕೊಂಡಿದ್ದರು. ಮತ್ತು ಈ ಆತಂಕವೇ ಅವರಲ್ಲಿ ಖಿನ್ನತೆಯ ಲಕ್ಷಣಗಳನ್ನು ಉಂಟುಮಾಡಿತ್ತು.

ಭಾರತೀಯ ಚಿತ್ರರಂಗದ ಹಲವು ತಾರೆಯರೂ ಸಹ ಈ ಖಿನ್ನತೆಯ ಸಮಸ್ಯೆಯ ಬಲಿಪಶುಗಳಾಗಿದ್ದಾರೆ. ತಾರಾ ವರ್ಚಸ್ಸು, ಚಿತ್ರಗಳ ಯಶಸ್ಸು, ಪ್ರಖ್ಯಾತಿ ಇವೆಲ್ಲಾ ಒಂದು ಹಂತದಲ್ಲಿ ಕೈಕೊಟ್ಟಾಗ ಮತ್ತು ವೈಯಕ್ತಿಕ ಜೀವನದಲ್ಲಿ ಏರುಪೇರು ಕಾಣಿಸಿಕೊಂಡಾಗ ಲೈಮ್ ಲೈಟ್ ನಲ್ಲಿಯೇ ಇರಲು ಬಯಸುವ ಈ ತಾರೆಯರು ಒಂದು ಹಂತದಲ್ಲಿ ಖಿನ್ನತೆಗೆ ಜಾರಿಬಿಡುತ್ತಾರೆ. ಈ ರೀತಿಯಾಗಿ ನಾನಾ ಕಾರಣಗಳಿಂದ ಖಿನ್ನತೆಯ ಸಮಸ್ಯೆಗೊಳಗಾಗಿ ಅದರ ವಿರುದ್ಧ ಹೋರಾಡಿ ಗೆದ್ದ ಕೆಲವೊಂದು ಬಾಲಿವುಡ್ ತಾರೆಗಳ ಮಾಹಿತಿ ಇಲ್ಲಿದೆ:

ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ್ದ ನಟಿ ಮನಿಷಾ ಕೊಯಿರಾಲ ಅವರು ಖಿನ್ನತೆಯ ಸಮಸ್ಯೆಯಿಂದ ಬಳಲಿ ಬೆಂಡಾಗಿದ್ದರು. ವೈಯಕ್ತಿಕ ಜೀವನದಲ್ಲಿ ತನ್ನ ಮಾಜೀ ಪತಿ ಸಾಮ್ರಾಟ್ ದಹ್ಲಾಲ್ ಕಾರಣದಿಂದ ಕೊಯಿರಾಲಾ ಅವರಲ್ಲಿ ಖಿನ್ನತೆಯ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಕ್ಯಾನ್ಸರ್ ಮಹಾಮಾರಿಯ ವಿರುದ್ಧವೂ ಹೋರಾಡಿ ಗೆದ್ದ ಮನಿಷಾ ಕೊಯಿರಾಲಾ ನಿಜವಾಗಿಯೂ ಛಲವಾದಿಯೇ ಸರಿ.

‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರದಲ್ಲಿ ‘ಆಲ್ ದಿ ರಜನಿ ಫ್ಯಾನ್ಸ್..’ ಹಾಡು ಅದೆಷ್ಟು ಜನರನ್ನು ಮರುಳು ಮಾಡಿಲ್ಲ ಹೇಳಿ? ರಜನಿ ಅಭಿಮಾನಿಗಳ ಪಾಲಿಗಂತೂ ಈ ಹಾಡು ಸುಪ್ರಭಾತವಾಗಿಬಿಟ್ಟಿತ್ತು. ಅಂತಹ ಹಾಡನ್ನು ಕೊಟ್ಟ ಖ್ಯಾತ ರ್ಯಾಪರ್ ಯೊ ಯೊ ಹನಿ ಸಿಂಗ್ ಬೈ ಪೋಲಾರ್ (ದ್ವಿಮುಕ ವ್ಯಕ್ತಿತ್ವ) ಸಂಬಂಧಿ ಖಿನ್ನತೆಯಿಂದ ಹಲವು ಸಮಯ ಬಳಲುತ್ತಿದ್ದರು ಎಂಬ ವಿಚಾರ ಎಷ್ಟು ಜನರಿಗೆ ಗೊತ್ತಿದೆ?

ಸುಮಾರು ಒಂದು ವರ್ಷಗಳಿಗೂ ಅಧಿಕ ಸಮಯ ಹನಿ ಸಿಂಗ್ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದರು. ತನ್ನ ಮನೆಯ ಕೋಣೆಯಿಂದ ಹೊರಬರದೇ, ಗಡ್ಡ ಹಾಗೂ ಕೂದಲನ್ನು ವಿಚಿತ್ರವಾಗಿ ಬೆಳೆಯಬಟ್ಟಿದ್ದ ಹನಿ ಸಿಂಗ್ ಈ ಸಂದರ್ಭದಲ್ಲಿ ನಾಲ್ಕೈದು ಜನರನ್ನೂ ಭೇಟಿಯಾಗಲು ಭಯಪಡುತ್ತಿದ್ದರಂತೆ.

ಬಳಿಕ ದೆಹಲಿಯ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆದುಕೊಂಡ ಬಳಿಕ ಹನಿ ಸಿಂಗ್ ಸಹಜ ಸ್ಥಿತಿಗೆ ಮರಳಿದ್ದರು ಎಂಬುದನ್ನು ಅವರೇ ಹೇಳಿಕೊಂಡಿದ್ದರು.


ಬಾಲಿವುಡ್ ನ ಬಾದ್ ಶಾ, ‘ಕಿಂಗ್ ಖಾನ್’ ಶಾರುಖ್ ಅವರನ್ನೂ ಈ ಖಿನ್ನತೆಯ ಭೂತ ಬಿಟ್ಟಿರಲಿಲ್ಲ. 2010ರಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಶಾರುಖ್ ಶಾರ್ಟ್ ಟೈಮ್ ಖಿನ್ನತೆಯಿಂದ ಬಳಲುತ್ತಿದ್ದರಂತೆ. ಆದರೆ ಆ ಬಳಿಕ ಬೇಗನೇ ತಾನು ಆ ಸಮಸ್ಯೆಯಿಂದ ಹೊರಬಂದೆ ಎಂದು ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ.


ಬಾಲಿವುಡ್ ನಲ್ಲಿ ಈ ಖಿನ್ನತೆಯ ವಿಚಾರ ಹೆಚ್ಚು ಸುದ್ದಿ ಪಡೆದುಕೊಂಡಿದ್ದು ನಟಿ ದೀಪಿಕಾ ಪಡುಕೋಣೆ ಅವರು ತಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂಬ ವಿಚಾರವನ್ನು ಟಿವಿ ಕಾರ್ಯಕ್ರಮವೊಂದರಲ್ಲಿ ಬಹಿರಂಗಗೊಳಿಸಿಕೊಂಡ ಸಂದರ್ಭದಲ್ಲಿ.

ಆದರೆ ದೀಪಿಕಾ ಒಂದು ಹೆಜ್ಜೆ ಮುಂದೆ ಹೋಗಿ ಈ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಾಂತ್ವನ ಹಾಗೂ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದರು.

‘ಪ್ರಾರಂಭದಲ್ಲಿ ನಾನಿದನ್ನು ಕೆಲಸದ ಒತ್ತಡದಿಂದ ಉಂಟಾಗುತ್ತಿರುವ ಸಮಸ್ಯೆ ಎಂದುಕೊಂಡಿದ್ದೆ, ಹಾಗಾಗಿ ಮಾಡುತ್ತಿದ್ದ ಕೆಲಸದಿಂದ ಸ್ವಲ್ಪ ವಿರಾಮವನ್ನು ಪಡೆದುಕೊಳ್ಳಲು ನಿರ್ಧರಸಿದ್ದೆ. ಆದರೆ ನನ್ನಲ್ಲಿ ಏಕಾಗ್ರತೆ ಹಾಗೂ ಆತ್ಮವಿಶ್ವಾಸದ ಕೊರತೆ ಕಾಣಿಸಿಕೊಳ್ಳಲಾರಂಭಿಸಿತು. ಆವಾಗಲೇ ನಾನು ಖಿನ್ನತೆಯಿಂದ ಬಳಲುತ್ತಿರುವ ವಿಚಾರ ನನಗೆ ಗೊತ್ತಾಗಿದ್ದು…’ ಎಂದು ದೀಪಿಕಾ ಆ ಸಂದರ್ಭದಲ್ಲಿ ಹೇಳಿಕೊಂಡಿದ್ದರು.


ವಿರಾಟ್ ಕೊಹ್ಲಿ ಮನದನ್ನೆ, ಮುದ್ದು ಮುಖದ ಚೆಲುವೆ ನಟಿ ಅನುಷ್ಕಾ ಶರ್ಮಾ ಅವರೂ ಸಹ ತಾವು ಆತಂಕದ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವಿಚಾರವನ್ನು ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದರು.

ತಮ್ಮ ಕುಟುಂಬದಲ್ಲೇ ಖಿನ್ನತೆಯ ಸಮಸ್ಯೆ ಇದೆ ಎಂದು ಒಪ್ಪಿಕೊಂಡಿದ್ದ ನಟಿ, ಈ ಸಮಸ್ಯೆಯ ಕುರಿತಾಗಿ ಎಲ್ಲರೂ ಮುಕ್ತವಾಗಿ ಮಾತನಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿರುವ ಹೊಟ್ಟೆ ನೋವು, ತಲೆನೋವಿನ ತರಹವೇ ಈ ಸಮಸ್ಯೆಗಳ ಕುರಿತಾಗಿಯೂ ಮುಕ್ತವಾಗಿ ಮಾತನಾಡುವಂತಾಗಬೇಕು ಮತ್ತು ಸಂಕೋಚವಿಲ್ಲದೇ ಮನೋವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತಾಗಬೇಕು ಎಂಬುದು ಅನುಷ್ಕಾ ಅವರ ಅಭಿಪ್ರಾಯವಾಗಿದೆ.

ಇನ್ನು, ಬಾಲಿವುಡ್ ನಟರಾದ ರಣದೀಪ್ ಹೂಡಾ, ವರುಣ್ ಧವನ್, ಇಲಿಯಾನಾ, ಅಲಿಯಾ ಭಟ್ ಸಹೋದರಿ ಶಹೀನ್ ಭಟ್, ಗಾಯಕಿ ನೇಹಾ ಕಕ್ಕರ್, ಯುವರಾಜ್ ಸಿಂಗ್ ಪತ್ನಿ ಹಝೆಲ್, ಹೃತಿಕ್ ರೋಷನ್ ಸಹೋದರಿ ಸುನೈನಾ ರೋಷನ್, ಕರಣ್ ಜೋಹರ್, ಸಂಜಯ್ ದತ್, ಹಾಲಿವುಡ್ ಹಾಸ್ಯನಟ ದಿವಂಗತ ರಾಬಿನ್ ವಿಲಿಯಮ್ಸ್, ರಸೆಲ್ ಬ್ರಾಂಡ್, ಕನಸಿನ ಕನ್ಯೆ ದಿವಂಗತ ಡಯಾನಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ತಾವು ತಮ್ಮ ಜೀವನದ ಒಂದಲ್ಲ ಒಂದು ಹಂತದಲ್ಲಿ ಈ ಖಿನ್ನತೆ ಸಮಸ್ಯೆಯನ್ನು ಎದುರಿಸಿರುವ ವಿಚಾರವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ನಮ್ಮ ನಿಮ್ಮ ನಡುವೆಯೂ ಖಿನ್ನತೆಯೆಂಬ ಮನೋ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ವ್ಯಕ್ತಿಗಳಿರಬಹುದು. ಅವರಿಗಿರುವ ಈ ಸಮಸ್ಯೆಯನ್ನು ಸಕಾಲದಲ್ಲಿ ಗುರುತಿಸಿ ಮನೋವೈದ್ಯರ ಸಲಹೆಯನ್ನು ಪಡೆದುಕೊಂಡು ಆ ರೀತಿಯಾಗಿ ವ್ಯವಹರಿಸಿದಲ್ಲಿ ಖಿನ್ನತೆಯೆಂಬ ಭೂತ ಬೃಹದಾಕಾರವಾಗಿ ಬೆಳೆದು ನಮ್ಮ ಜೀವನವನ್ನು ಕಸಿಯುವ ಮುನ್ನವೇ ನಾವದರಿಂದ ಹೊರಬಂದು ನೆಮ್ಮದಿಯ ಬಾಳ್ವೆ ನಡೆಸಲು ಸಾಧ್ಯ ಎನ್ನುವುದನ್ನು ಹಲವರು ಸಾಬೀತುಪಡಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.