ಅಧಿಕೃತ ಬ್ಲಾಕ್ ‌ಗಳಲ್ಲೇ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ!

ಸರ್ಕಾರದ ನಿಯಮಾವಳಿ ಗಾಳಿಗೆ ತೂರುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ

Team Udayavani, Jun 15, 2020, 5:54 PM IST

1-June-25

ಸಾಂದರ್ಭಿಕ ಚಿತ್ರ

ಹರಿಹರ: ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಅಧಿಕೃತವಾಗಿ ಹರಾಜಾಗಿರುವ ಮರಳು ಬ್ಲಾಕ್‌ಗಳಲ್ಲೇ ಗುತ್ತಿಗೆದಾರರು ಒಪ್ಪಂದದ ಬಹುತೇಕ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಅಕ್ರಮ ಎಸಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ನಿಯಂತ್ರಿಸುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.

ತಾಲೂಕಿನಲ್ಲಿ ಗುರುತಿಸಿರುವ ಒಟ್ಟು 9 ಮರಳು ನಿಕ್ಷೇಪಗಳಲ್ಲಿ ಗುತ್ತೂರು, ಇಂಗಳಗೊಂದಿ, ಹೊಸಪಾಳ್ಯ, ಹಳೆಪಾಳ್ಯ ಹೊರತುಪಡಿಸಿ ಬಿಳಸನೂರು, ರಾಜನಹಳ್ಳಿ ಹಾಗೂ ಚಿಕ್ಕಬಿದರಿಯ 2 ಬ್ಲಾಕ್‌ಗಳನ್ನು 2019ರಲ್ಲಿ ಹಾಗೂ ಸಾರಥಿ ಬ್ಲಾಕ್‌ 2020ರಲ್ಲಿ ಹರಾಜು ಮಾಡಲಾಗಿದೆ. ಖಾಸಗಿ ಮರಳುಗಾರಿಕೆಯನ್ನು ನಿರ್ಬಂಧಿಸಿರುವ ಸರ್ಕಾರದ ಹೊಸ ಮರಳು ನೀತಿಯಲ್ಲೂ ಹಳೆ ಗುತ್ತಿಗೆದಾರರಿಗೆ 5 ವರ್ಷ ಅವಧಿ ಮುಗಿಯುವವರೆಗೂ ಅವಕಾಶ ಕಲ್ಪಿಸಿರುವುದು ಅಕ್ರಮ ನಡೆಸುವವರಿಗೆ ವರವಾಗಿ ಪರಿಣಮಿಸಿದೆ.

ಏನೇನು ಅಕ್ರಮ?: ನದಿ ಪಾತ್ರದಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ಸ್ಟಾಕ್‌ ಯಾರ್ಡ್‌ ಇರಬೇಕೆಂಬ ನಿಯಮ ಪಾಲಿಸಿಲ್ಲ. ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆವರೆಗೆ ಮರಳು ತೆಗೆಯುವ, ತುಂಬುವ, ಸಾಗಿಸುವುದಕ್ಕೆ ನಿಷೇಧಿಸಿದ್ದರೂ ಲೆಕ್ಕಿಸುತ್ತಿಲ್ಲ. ನಿಗ ದಿತ ಪ್ರಮಾಣಕ್ಕಿಂತ ಹೆಚ್ಚಿನ ಬೆಲೆಗೆ ಮರಳು ಮಾರಲಾಗುತ್ತಿದೆ. ಸರ್ಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ತಪ್ಪಿಸಲು ಒಂದೇ ಪಾಸ್‌ನಲ್ಲಿ ಹಲವು ಟ್ರಿಪ್‌ ಓಡಿಸಲಾಗುತ್ತಿದೆ. ಗರಿಷ್ಟ ಮಿತಿಗಿಂತ ಹೆಚ್ಚಿನ ಮರಳು ತುಂಬುವ ಭಾರೀ ವಾಹನಗಳಿಂದ ರಸ್ತೆಗಳು ಹಾಳಾಗುತ್ತಿವೆ ಎಂಬುದು ಜನರ ಆರೋಪ.

ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಮತ್ತಿತರ ಸಂಕಷ್ಟ ಅನುಭವಿಸುವ ನದಿ ದಡದ ನಿವಾಸಿಗಳು ಕೂಡ ಸ್ವಂತ ಕಟ್ಟಡ ಕಾಮಗಾರಿಗಳಿಗೆ ದುಬಾರಿ ಬೆಲೆ ತೆತ್ತು ಮರಳು ಖರೀದಿಸಬೇಕಾಗಿದೆ. ಆದರೆ ಪ್ರಭಾವಿಗಳು ಮಾತ್ರ ಸಕ್ರಮದ ನೆರಳಿನಲ್ಲಿ ಅಕ್ರಮವಾಗಿ ಮರಳು ಸಾಗಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದರೂ ಕೇಳುವವರಿಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಳಲು. ಆದ್ದರಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅಕ್ರಮ ಮರಳುಗಾರಿಕೆಗೆ ತಡೆ ಹಾಕಲು ಮುಂದಾಗಬೇಕಿದೆ.

ಹೊಸ ಮರಳು ನೀತಿಯಲ್ಲೇನಿದೆ?
1994 ರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನದಿ ಪಾತ್ರದಲ್ಲಿ ಮರಳು ನಿಕ್ಷೇಪ ಗುರುತಿಸಿ ಖಾಸಗಿ ವ್ಯಕ್ತಿಗಳಿಗೆ ಮರಳುಗಾರಿಕೆ ನಡೆಸಲು ಗುತ್ತಿಗೆ ನೀಡುತ್ತಿತ್ತು. 2011ರಿಂದ ಮರಳು ತೆಗೆದು ಸಂಗ್ರಹಿಸಿ ಗ್ರಾಹಕರಿಗೆ ಮಾರುವುದನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಿತು. 2016ರಲ್ಲಿ ಮತ್ತೆ ನದಿ ಪಾತ್ರದ ಮರಳು ನಿಕ್ಷೇಪಗಳನ್ನು ಗುರುತಿಸಿ ಹರಾಜು ಮಾಡುವ ಅಧಿ ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೊರೆಯಿತು. ಕಳೆದ ಮೇ 5ರಂದು ಹೊಸ ಮರಳು ನೀತಿ-2020ನ್ನು ಜಾರಿಗೊಳಿಸಲಾಗಿದೆ. ಇದರಂತೆ ಡಿಸಿ, ಗಣಿ ಮತ್ತು ಭೂವಿಜ್ಞಾನ, ಕಂದಾಯ, ಜಲಸಂಪನ್ಮೂಲ, ಅಂತರ್ಜಲ ಮತ್ತು ಪಿಡಿಒಗಳ ತಂಡ ಮರಳು ನಿಕ್ಷೇಪವನ್ನು ಗುರುತಿಸಿಕೊಟ್ಟ ನಂತರ ಹಳ್ಳ, ಕೆರೆ-ತೊರೆಗಳಲ್ಲಿನ ಮರಳನ್ನು ಸ್ಥಳೀಯ ಗ್ರಾಪಂ ನಿಗದಿತ ರಾಯಲ್ಟಿ ಪಾವತಿಸಿಕೊಂಡು ಗ್ರಾಹಕರಿಗೆ ನೇರವಾಗಿ ವಿಲೇವಾರಿ ಮಾಡುತ್ತದೆ. ಇದೇ ರೀತಿ ನದಿ, ಆಣೆಕಟ್ಟು ವ್ಯಾಪ್ತಿಯ ಮರಳು ನಿಕ್ಷೇಪಗಳಲ್ಲಿ ಮರಳು ತೆಗೆದು ಸಂಗ್ರಹಿಸಿ ಸರ್ಕಾರದ ರಾಯಲ್ಟಿ ಜೊತೆ ಖರ್ಚು ಸೇರಿಸಿ ಗ್ರಾಹಕರಿಗೆ ಮಾರಾಟ ಮಾಡುವ ಹೊಣೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗುತ್ತದೆ.

ನದಿ ಪುನಶ್ಚೇತನವಿಲ್ಲ
ಮರಳುಗಾರಿಕೆಯ ಉಪ ಉತ್ಪನ್ನಗಳಾದ ಕಲ್ಲು ಜರುಗನ್ನು ಪುನಃ ನದಿಯ ಒಡಲಿಗೆ ಗುತ್ತಿಗೆದಾರರೇ ತಮ್ಮ ಖರ್ಚಿನಲ್ಲಿ ತುಂಬಿಸಿ ನದಿ ಪುನಶ್ಚೇತನಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ ಲಾಭದಾಸೆಗೆ ಕಲ್ಲು ಜರುಗನ್ನು ಎಂ.ಸ್ಯಾಂಡ್‌ ಮತ್ತಿತರೆ ಕ್ರಶರ್‌ ನಡೆಸುವವರಿಗೆ ಮಾರಾಟ ಮಾಡಲಾಗುತ್ತಿರುವುದು ವಿಪರ್ಯಾಸ.

ಮರಳು ನಿಗಾ ಸಮಿತಿ ಸಭೆಗೆ ನಾನೂ ಹಾಜರಾಗುತ್ತೇನೆ. ಆದರೆ 2020ರಲ್ಲಿ ಸಾರಥಿ ಬ್ಲಾಕ್‌ ಹರಾಜು ಮಾಡಿರುವುದಾಗಲೀ, ಸರ್ಕಾರ ಗುತ್ತಿಗೆದಾರರಿಗೆ ವಿಧಿಸಿರುವ ಷರತ್ತು ಗಳಗಾಲೀ, ಅಕ್ರಮ ನಡೆಯುತ್ತಿರುವ ಬಗ್ಗೆಯಾಗಲೀ ನನಗೆ ಮಾಹಿತಿಯಿಲ್ಲ.
ದಳವಾಯಿ, ಪಿಡಬ್ಲ್ಯೂಡಿ ಎಇಇ,
ಮರಳು ಸಮಿತಿ ಸದಸ್ಯರು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.