ಬೀದರ್ ಜಿಲ್ಲೆಯಲ್ಲಿಂದು ಮತ್ತೆ 11 ಕೋವಿಡ್-19 ಸೋಂಕು ದೃಢ
Team Udayavani, Jun 15, 2020, 7:47 PM IST
ಬೀದರ್: ಗಡಿ ನಾಡು ಬೀದರ್‌ನಲ್ಲಿ ಕೋವಿಡ್-19 ಆರ್ಭಟ ಮುಂದುವರೆದಿದ್ದು, ಸೋಮವಾರ ಮಹಾರಾಷ್ಟ್ರ ಜತೆಗೆ ತೆಲಂಗಾಣ ಕಂಟಕದಿಂದ ಮತ್ತೆ 11 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇನ್ನೊಂದೆಡೆ 36 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 351 ಕ್ಕೆ ಏರಿಕೆ ಆಗಿದೆ.
ದಿನದಿಂದ ದಿನಕ್ಕೆ ಕೋವಿಡ್-19 ಪಾಟಿಸಿವ್ ಸಂಖ್ಯೆ ಹೆಚ್ಚುತ್ತಲೇ ಇದ್ದು, ಗ್ರಾಮೀಣ ಭಾಗದಲ್ಲಿ ತನ್ನ ಕರಾಳ ಛಾಯೆ ಆವರಿಸುತ್ತಿದೆ. ಸೋಮವಾರ ಮತ್ತೆ ಬಸವಕಲ್ಯಾಣ ತಾಲೂಕಿನಲ್ಲಿ ವೈರಾಣು ಬಾಧಿತರ ಸಂಖ್ಯೆ ಹೆಚ್ಚಿರುವುದು ಆ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಒಟ್ಟು ಸೋಂಕಿತ 11 ಜನರಲ್ಲಿ ಮೂವರು ತೆಲಂಗಾಣದಿಂದ ಹಿಂದಿರುಗಿದ್ದರೆ, ಇನ್ನುಳಿದ 5 ಮಂದಿ ಮಹಾರಾಷ್ಟ್ರದ ಸಂಪರ್ಕದಿಂದಾಗಿ ರೋಗ ಒಕ್ಕರಿಸಿದೆ.
ಬಸವಕಲ್ಯಾಣ ತಾಲೂಕಿನ ಉಮಾಪೂರ ಗ್ರಾಮದ 3, ಹೊನ್ನಳ್ಳಿ ಗ್ರಾಮದ 2 ಸೇರಿ ಒಟ್ಟು 5 ಕೇಸ್, ಔರಾದ ತಾಲೂಕಿನ ಠಾಣಾಕುಶನೂರ ಗ್ರಾಮದ 3, ಜಮಲಾಪೂರ 1 ಸೇರಿ ಒಟ್ಟು 4 ಕೇಸ್, ಕಮಲನಗರ ತಾಲೂಕಿನ ನಿಟ್ಟೂರ್ ಗ್ರಾಮದ 2 ಕೇಸ್‌ಗಳು ಪತ್ತೆಯಾಗಿವೆ. 27 ವರ್ಷದ ಹೆಣ್ಣು ಪಿ 7082, 63 ವರ್ಷದ ಗಂಡು ಪಿ 7083, 35ವರ್ಷದ ಗಂಡು ಪಿ 7084, 19 ವರ್ಷದ ಗಂಡು ಪಿ 7085, 27ವರ್ಷದ ಗಂಡು ಪಿ 7086, 25 ವರ್ಷದ ಹೆಣ್ಣು ಪಿ 7087, 40 ವರ್ಷದ ಹೆಣ್ಣು ಪಿ 7088, 15ವರ್ಷದ ಗಂಡು ಪಿ 7089 ಮಹಾರಾಷ್ಟ್ರದ ಸಂಪರ್ಕ ಹಾಗೂ 30 ವರ್ಷದ ಗಂಡು ಪಿ 7090, 25 ವರ್ಷದ ಹೆಣ್ಣು ಪಿ 7091ಮತ್ತು 40 ವರ್ಷದ ಹೆಣ್ಣು ಪಿ 7092 ರೋಗಿಗಳು ತೆಲಂಗಾಣದ ಸಂಪರ್ಕ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ಈಗ 351 ಆದಂತಾಗಿದೆ. ಒಟ್ಟು 6 ಜನ ಸಾವನ್ನಪ್ಪಿದ್ದರೆ, 239 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 136 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.